Friday, April 24, 2026
HomeUncategorizedಗಂಗಾವತಿ ನಗರದ ಪ್ರತಿಷ್ಟಿತ ಲಯನ್ಸ್ ಶಾಲೆ -ಶೇಕಡ100 ಫಲಿತಾಂಶ, ಸುವರ್ಣ ಸಾಧನೆ.ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಪ್ಪ.

ಗಂಗಾವತಿ ನಗರದ ಪ್ರತಿಷ್ಟಿತ ಲಯನ್ಸ್ ಶಾಲೆ -ಶೇಕಡ100 ಫಲಿತಾಂಶ, ಸುವರ್ಣ ಸಾಧನೆ.ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಪ್ಪ.

ಲಯನ್ಸ್ ಶಾಲೆಯ ಇತಿಹಾಸದಲ್ಲಿ ಇಂದಿನ ದಿನವು ಚಿನ್ನದ ಅಕ್ಷರಗಳಲ್ಲಿ ಅಚ್ಚಳಿಯಾಗುವಂತಹ ಸುವರ್ಣ ಕ್ಷಣವಾಗಿದೆ. ಇದೇ ಮೊದಲ ಬಾರಿಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಶೇಕಡ 100ರಷ್ಟು ಫಲಿತಾಂಶವನ್ನು ಸಾಧಿಸಿ, ಶಾಲೆಯ ಕೀರ್ತಿಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಆಂಗಮಾಧ್ಯಮದಲ್ಲಿ ಕು. ರಶ್ಮಿ. 602/625.ಕನ್ನಡ ಮಾಧ್ಯಮದಲ್ಲಿ ಕು. ಪ್ರೀತಮ್. ಕೆ. ಎಸ್. 593/625.ಈ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಶಿಶುವೀಹಾರ ದಿಂದ SSLC ವರಗೆ ಅಭ್ಯಾಸ ಮಾಡಿದ್ದು ವಿಶೇಷ, ಈ ಅದ್ಭುತ ಸಾಧನೆ ಕೇವಲ ಫಲಿತಾಂಶವಲ್ಲ ಇದು ಪರಿಶ್ರಮ, ನಿಯೋಜಿತ ಮಾರ್ಗದರ್ಶನ ಮತ್ತು ಸಮರ್ಪಿತ ಸೇವೆಯ ಫಲವಾಗಿದೆ.

ಈ ಯಶಸ್ಸಿನ ಹಿನ್ನಲೆಯಲ್ಲಿ ಮುಖ್ಯವಾಗಿ ಆಡಳಿತಾಧಿಕಾರಿಗಳಾದ ಚಂದ್ರೇಗೌಡ ಪೊಲೀಸ್ ಪಾಟೀಲರ ಮಾರ್ಗದರ್ಶನ ಮತ್ತು ಅವರ ಶಾಲೆಯ ಮೇಲಿನ ಅಪಾರ ಕಾಳಜಿ ಸ್ಪಷ್ಟವಾಗಿ ಕಾಣಿಸುತ್ತದೆ.
ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರು ತೋರಿದ ದಿಟ್ಟ ನಿಲುವು ಮತ್ತು ದೂರದೃಷ್ಟಿ ನಿಜಕ್ಕೂ ಶ್ಲಾಘನೀಯ. ಅವರ ನಿರಂತರ ಪ್ರೋತ್ಸಾಹ ಮತ್ತು ಕಾಳಜಿಯೇ ಈ ಸಾಧನೆಯ ಪ್ರಮುಖ ಅಸ್ತ್ರವಾಗಿದೆ.

ಇದರ ಜೊತೆಗೇ, ಪ್ರತಿಯೊಬ್ಬ ಶಿಕ್ಷಕರ ಪಾತ್ರವು ಅಮೂಲ್ಯವಾಗಿದೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರಿತು, ಅವರಲ್ಲಿ ಆತ್ಮವಿಶ್ವಾಸ ತುಂಬಿ, ಶ್ರಮಪಟ್ಟು ಪಾಠ ಮಾಡಿದ ಶಿಕ್ಷಕರ ತ್ಯಾಗ ಮತ್ತು ಸಮರ್ಪಣೆ ಈ ಯಶಸ್ಸಿನ ಮೂಲಶಕ್ತಿ. ಅವರ ನಿರಂತರ ಶ್ರಮವು ಪ್ರತಿಫಲವಾಗಿ ಈ ಶೇಕಡ 100ರ ಸಾಧನೆ ರೂಪದಲ್ಲಿ ಕಾಣಿಸಿಕೊಂಡಿದೆ.

ಶಾಲೆಯ ಆಡಳಿತ ಮಂಡಳಿಯವರ ದಕ್ಷತೆ, ಸಂಘಟಿತ ಕಾರ್ಯಪದ್ಧತಿ ಮತ್ತು ಶಿಕ್ಷಣದ ಮೇಲೆ ಇರುವ ಬದ್ಧತೆ ಕೂಡ ಈ ಸಾಧನೆಗೆ ಮಹತ್ವದ ಕಾರಣವಾಗಿದೆ. ವಿದ್ಯಾರ್ಥಿಗಳ ಹಿತಕ್ಕಾಗಿ ಕೈಗೊಂಡ ಪ್ರತಿ ನಿರ್ಧಾರವೂ ಇಂದು ಫಲವಾಗಿ ಮಿಂಚುತ್ತಿದೆ.

ಇದಕ್ಕಿಂತ ಮುಖ್ಯವಾಗಿ, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಪಾಲಕರ ಸಹಕಾರ ಕೂಡ ಈ ಯಶಸ್ಸಿನ ಪ್ರಮುಖ ಅಂಗವಾಗಿದೆ.

ವಿದ್ಯಾರ್ಥಿಗಳು ತಮ್ಮ ಗುರಿಯತ್ತ ನಿಷ್ಠೆಯಿಂದ ನಡೆದು, ಶಿಕ್ಷಕರ ಮಾರ್ಗದರ್ಶನವನ್ನು ಸರಿಯಾಗಿ ಅನುಸರಿಸಿದ ಪರಿಣಾಮವೇ ಈ ಸಾಧನೆ ಸಾಧ್ಯವಾಗಿದೆ.

ಈ ಸಾಧನೆ ಕೇವಲ ಒಂದು ವರ್ಷದ ಫಲಿತಾಂಶವಲ್ಲ — ಇದು ಲಯನ್ಸ್ ಶಾಲೆಯ ಶ್ರೇಷ್ಠ ಪರಂಪರೆಯ ಪ್ರತಿಬಿಂಬ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಸಾಧಿಸಲು ಇದು ಒಂದು ಪ್ರೇರಣೆಯಾಗಲಿ.

ಲಯನ್ಸ್ ಶಾಲೆಯ ಈ ಅಪೂರ್ವ ಸಾಧನೆಗೆ ಹೃದಯಪೂರ್ವಕ ಅಭಿನಂದನೆಗಳು!
ಈ ಕೀರ್ತಿ ಇನ್ನಷ್ಟು ಬೆಳೆಯಲಿ, ವಿದ್ಯಾರ್ಥಿಗಳ ಭವಿಷ್ಯ ಮತ್ತಷ್ಟು ಪ್ರಭಾವಶಾಲಿಯಾಗಿ ಮೂಡಿಬರಲಿ ಎಂಬುದು ಎಲ್ಲರ ಆಶಯ.

ಶೈಕ್ಷಣಿಕ ಲೇಖನ –
ಆಂಜನೇಯ ಮಟ್ಟೂರು
ಶಿಕ್ಷಕರು. ಗಂಗಾವತಿ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments