Friday, April 24, 2026
HomeUncategorizedಇಂದಿನ ಶೈಕ್ಷಣಿಕ ಸಾಧನೆ ಕೇವಲ ಅಂಕಗಳಿಸುವುದಾ???

ಇಂದಿನ ಶೈಕ್ಷಣಿಕ ಸಾಧನೆ ಕೇವಲ ಅಂಕಗಳಿಸುವುದಾ???

ಇಂದಿನ ಶೈಕ್ಷಣಿಕ ಸಾಧನೆ ಕೇವಲ ಅಂಕಗಳಿಸುವುದಾ???

ಶಾಲ ಶಿಕ್ಷಣ ಮತ್ತು ಪರೀಕ್ಷಾ ಮಂಡಳಿಯು ಎಸ್ ಎಸ್ ಎಲ್ ಸಿ ಪಲಿತಾಂಶ ಪ್ರಕಟಿಸಿದ್ದು ರಾಜ್ಯದಲ್ಲಿ ಈ ಬಾರಿ ಹಿಂದೆ ಎಂದು ಮಾಡದ ಸಾಧನೆಯನ್ನು ಈ ಬಾರಿ ಫಲಿತಾಂಶದ ಮೂಲಕ ಸಾಧಸಿದ್ದು ಅತ್ಯಂತಂತಹ ಗಮನಾರ್ಹ ವಿಶಯವಾಗಿದೆ…ರಾಜ್ಯದ ಒಟ್ಟು 94.10% ಮಕ್ಕಳು ತೇರ್ಗಡೆ ಹೊಂದಿದ್ದು,ಉತ್ತಮ ಸಾಧನೆ ಎಂಬಂತೆ ಶಿಕ್ಷಣ ಸಚಿವರಿಂದ ಹಿಡಿದು ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸಮಾಡುವ ಶಿಕ್ಷಕರು ಅಧಿಕಾರಿಗಳು ಸಾಧನೆ ಮಾಡಿದ ವಿದ್ಯಾರ್ಥಿಗಳು ಎಲ್ಲಾ ವರ್ಗದವರು ಸಂತಸಪಟ್ಟಿದ್ದು ಆಯಿತು ಈ ಬಾರಿ ಎಸ್ ಎಸ್ ಎಲ್ ಸಿ ಪಲಿತಾಂಶ ಉತ್ತಮ ಪಡಿಸಲು ಇಲಾಖೆಯು ಕೆಲವಂದಿಷ್ಟು ಸುಧಾರಣಾ ಕ್ರಮಗಳನ್ನು ಮಾಡಿತು ಅವು 1)ಉತ್ತಿರ್ಣ ಅಂಕ 35% ಇದ್ದದ್ದನ್ನು 33% ಕಡಿತಗಳಿಸಿದ್ದು ಆಂತರಿಕ ಮತ್ತು ಥೇರಿ ಅಂಕ ಎರಡು ಸೇರಿ 33% ಅಂಕ ಗಳಿಸಿದರೆ ಸಾಕು ಅಂದರೆ ಶಾರೆಯಲ್ಲಿ ಆಂತರಿಕ ಅಂಕ 20 ಪಡೆದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಕೇವಲ 13 ಅಂಕ ಗಳಿಸಿದರೆ ಸಾಕು ಆ ವಿದ್ಯಾರ್ಥಿ ಉತ್ತೀರ್ಣನಾಗುತ್ತಾನೆ (ಈ ಮೋದಲು ಮುಖ್ಯ ಪರೀಕ್ಷೆಯಲ್ಲಿ 24 ಅಂಕ ಗಳಿಸಬೇಕಿತ್ತು)

2) ಮೋದಲೆ ಪರೀಕ್ಷೆಯ ನೀಲ ನಕ್ಷೆಯನ್ನು ತಯಾರಿಸಿ ಮಕ್ಕುಳಿಗೆ ಸಿಗುವಂತೆ ನೋಡಿಕೋಡಲಾಯಿತು (ಈ ಮೋದಲು ಮುಖ್ಯ ಪರೀಕ್ಷೆಯ ನೀಲ ನಕ್ಷೆಯು ಆ ಮುಖ್ಯ ಪರೀಕ್ಷೆಗೆ ಮಾತ್ರ ಸಿಮಿತ ಇರುತಿತ್ತು)

3) ಕನಿಷ್ಟ ಮೂರು ಮಾದರಿ ಪ್ರಶ್ನೆಪತ್ರಿಕೆಯನ್ನು ಮೋದಲೇ ನೀಡಲಾಯಿತು ಇದರಲ್ಲಿ ಕನಿಷ್ಠ ಉತ್ತಿರ್ಣರಾಗುವಷ್ಟು ಅಂಕಗಳನ್ನು ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಆ ಪ್ರಶ್ನೆಗಳು ಇರುವಂತೆ ನೋಡಿಕೊಳ್ಳುಲಾಯಿತು

4) ಕನಿಷ್ಠ ಮೂರು ಮಾದರಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲಾಯಿತು ಇದರಲ್ಲಿಯ ಕನಿಷ್ಟ ಅಂಕಗಳಿಸಲು ಬೇಕಾಗುವ ಪ್ರನ್ನೆಗಳನ್ನು ಮರಳಿ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಬರುವಂತೆ ನೋಡಲಾಯಿತು

5) ಪ್ರಶ್ನೆಕೋಠಿಯನ್ನು ನೀಡಲಾಯಿತು.
ಇವು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಪರೀಕ್ಷೆಯನ್ನು ಯಾವುದೆ ಬಯವಿಲ್ಲದೆ ಪರೀಕ್ಷೆಯನ್ನು ಎದುರಿಸಲು ಅನುಕೂಲವಾಯಿತು.

6) ಪೂರ್ವ ಸಿದ್ಧತ ಪರೀಕ್ಷೆಯ ಫಲಿತಾಂಶವನ್ನು SATS ನಲ್ಲಿ ಇಂದಿಕರಿಸುವಂತೆ ಮಾಡಿ ನಿರ್ದೇಶನಾಲಯದಿದಲೇ ಮಾನಿಟರ್ ಮಾಡಲಾಯಿತು

7) ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯಾದ್ದಂತ ಫಲಿತಾಂಶ ಉತ್ತಮ ಪಡಿಸಲು ಸಭೆಗಳ ಮೇಲೆ ಸಭೆ ಸಡೆಸಲಾಯಿತು

8) ಹೆಚ್ಚುವರಿ ತರಗತಿ ಹಿಂದೆ ಉಳಿಥ ಮಕ್ಕಳಿಗೆ ವಿಶೇಷ ತರಗಳಿಗಳು ಸಿ ಆರ್ ಪಿ ಬಿ ಆರ್ ಪಿ ಅಧಿಕಾರಿಗಳು ಮುಖ್ಯಗುರುಗಳ ನೇತೃತ್ವದಲ್ಲಿ ಸಭೆಗಳು ನಡೆಸಲಾಯಿತು ಇವೆಲ್ಲ ಸುಧಾರಣಾ ಕ್ರಮದಿದಂದಾಗಿ ಈ ಬಾರಿ ಫಲಿತಾಂಶದ ಕಳೆದ ವರ್ಷಕ್ಕಿಂತ (2025 ರಲ್ಲಿ 80%) ಈ ವರ್ಷ ಶೇಕಡ 14% ಫಲಿತಾಂಶ ಹೆಚ್ಚಾಗಲೂ( 2026 ರಲ್ಲಿ 94.10%) ಕಾರಣವಾಯಿತು ಎಂದು ಹೇಳಿದರೆ ತಪ್ಪಾಗಲಾರದು.
ಇವುಗಳ ಜೋತೆಗೆ ಮುಖ್ಯಗುರುಗಳನ್ನ ಶಿಕ್ಷಕರನ್ನ ಮತ್ತು ಬಿ ಇ ಓ ಹಾಗೂ ಉಪನಿರ್ದೇಶಕರನ್ನ ಹೋಣೆಗಾರರನ್ನಾಗಿ ಮಾಡಲು ಇಲಾಖೆ ಕಟ್ಟು ನಿಟ್ಟಿನ ಕ್ರಮಕೈಗೋಳ್ಳುವ ಎಚ್ಚರಿಕೆಯನ್ನು ಸಹ ನೀಡಿದ್ದನ್ನು ನಾವು ಕಾಣಬಹುದು..ಇದೆಲ್ಲ ಒಂದು ಭಾಗ ಉತ್ತಮ ಫಲಿತಾಂಶ ಬರಲು ಎಂದು ಹೇಳಬಹುದು.
ಆದರೆ ಯಾವುದೆ ಮಗುವನ್ನು ಅಂಕಗಳ ಆಧಾರಥಲ್ಲಿ ಅವನ ಸಾಮರ್ಥ್ಯವನ್ನು ಅಳೆಯುತ್ತಿರುವುದು ಇವತ್ತಿನ ಸಂದರ್ಭದಲ್ಲಿ ಜನಜನಿತವಾಗಿದೆ..ಆದರೆ ಆ ಮಗು ಜೀವನದಲ್ಲೆ ಯಶಗಳಿಸಲು ಉತ್ತಮ ಅಂಕಗಳು ಸಾಕೆ? ಈ ಪ್ರಶ್ನೆಗೆ ಉತ್ತರ ಏನು? ಉತ್ತಮ ಅಂಕಗಳು ಖಾಸಗಿ ಶಾಲೆಗಳು ಶಿಕ್ಷಣವನ್ನು ವ್ಯವಹಾರ ಮಾಡಿಕೊಂಡವರಿಗೆ ರೋಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಅವರ ಜಾಹಿರಾತುಗಳಿಗೆ ಮುಂದಿನ ವರ್ಷ ಇನ್ನಷ್ಟು ದೊಚಲು ಅಡಿಪಾಯ ಹಾಕಿರುತ್ತದೆ ವಿನಃ ಮತ್ತೆ ಬೇರೆ ಏನು ಅಲ್ಲ

ಪ್ರತಿ ವರ್ಷ ರಾಜ್ಯಕ್ಕೆ ರ್ಯಾಂಕ್ ಬಂದವರು NEET JEE K CET ಯಲ್ಲಿ ಅವರ ಸಾಧನೆ ಎಷ್ಟು?
ಇದು ಕೇವಲ ಫಲಿತಾಂಶ ಅಂಕಪಟ್ಟಿಯಲ್ಲಿ ಪ್ರಿಂಟ್ ಹಾಕಲು ಗಳಿಸಿದ ಅಂಕಗಳು ಮಾತ್ರ ಜೀವನಕ್ಕೆ ಷಾಧನೆ ಮಾಡಲು ಅಂಕಳು ಪೂರಕವಲ್ಲ ಎಂದು ಎಷ್ಟು ಮಕ್ಕಳಿಗೆ ತಿಳಿಸಿಕೋಡಲಾಗಿದೆ. ನಿಜ ಮೌಲ್ಯಮಾಪನ ಅಂಕಗಳು ನೀಡುವುದು ಶೈಕ್ಷಣಿಕ ಮಾನದಂಡ ನಿಜ ಇದು ಬಿಟ್ಟು ಬೇರೆ ದಾರಿ ಇಲ್ಲ ಆದರೆ ಈ ಅಂಕಗಳು ಜೀವನ ನಡೆಸಲು ಎಷ್ಟು ಮುಖ್ಯ ಖಾಸಗಿ ಸರ್ಕಾರಿ ವ್ಯವಹಾರ ಇನ್ನು ಯಾವುದೆ ಕ್ಷೇತ್ರದಲ್ಲಿಯಾದರು ಅವನ ನೃಜ ಪ್ರತಿಭೆಯನ್ನು ಗುರುತಿಸುವ ಸಲುವಾಗಿ CET ಸಂದರ್ಶನ ವ್ಯಕ್ತಿತ್ವ ಪರೀಕ್ಷೆಯಂತಹ ಕಠಿಣ ಮಾನದಂಡಗಳನ್ನು ಮಾಡಲಾಗಿದೆ.
ಏನೆ ಆಗಲಿ ಈ ಬಾರಿಯು ಮತ್ತೆ ಹುಡಿಗಿಯರದೇ ಮೇಲು ಗೈ ಅಂತ ಬಂದಾಯಿತು ಆ ಹೆಣ್ಣು ಮಕ್ಕಳು ಶಿಕ್ಷಣವನ್ನು ಎಷ್ಟು ಜನ ಮುಂದುವರಿಸುತ್ತಾರೆ ಉನ್ನತ ಶಿಕ್ಷಣಕ್ಕೆ ಎಷ್ಟು ಜನ ಹೋಗುತ್ತಾರೆ ಎನ್ನುವ ಪ್ರಶ್ನೆ ಇದ್ದೆ ಇದೆ.
ಏನೆ ಆಗಲಿ ಶಿಕ್ಷಣದಲ್ಲಿ ಕರ್ನಾಟಕ ಕಾಗದದ ಹುಲಿ ಆಗುತ್ತಿದೆ ಆದರೆ ಪ್ರಶ್ನಿಸುವ ಜಾಗೃತ ಮನಸ್ಸನ್ನು ಕಟ್ಟುವ ಪ್ರಜಾಪ್ರಭುತ್ವದ ಮಹತ್ವನ್ನು ಅರಿಯುವ ಶಿಕ್ಷಣ ಬೇಕಾಗಿದೆ ಎಂಬುದನ್ನು ಎಲ್ಲರೂ ಮರೆತಂತೆ ಇದೆ ಉನ್ನತ ಶಿಕ್ಷಣ ಗುಣಮಟ್ಟದ ಶಿಕ್ಷಣದ ವೃತ್ತಿಪರ ಕೌಶಲ್ಯಯುಕ್ತ ಶಿಕ್ಷಣದಿಂದ ವಂಚಿತವಾದವರು ಇದರಲ್ಲಿ ಎಪ್ಪಟು ಮಕ್ಕಳು ನಮ್ಮ ರಾಜ್ಯದಲ್ಲಿ ಸ್ಥಾಪನೆಯಾಗುವ ಕಂಪನಿಗಳಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಗುತ್ತದೆ ಎಂಬುದರ ಮೇಲೆ ಇಂದಿನ ಫಲಿತಾಂಶಕ್ಕೆ ಅರ್ಥ ಬರುತ್ತದೆ ಎಂಬುದೆ ನನ್ನ ಅಭಿಪ್ರಾಯ…

ಲೇಖಕರು:- ಸುರೇಶ ಜಿ ಗುರುಗುಂಟ
ಉಪನ್ಯಾಸಕರು ರಾಯಚೂರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments