Tuesday, April 28, 2026
HomeUncategorizedಗುಣಮಟ್ಟದ ಬದುಕು ಕಟ್ಟಿಕೊಳ್ಳುಲು ಗುಣಮಟ್ಟದ ಅಭಿವೃದ್ದಿಯ ಬೇಕಾಗಿದೆ ಈ ಭಾಗದಲ್ಲಿ..... ಸುರೇಶ. ಗುರುಗುಂಟ.

ಗುಣಮಟ್ಟದ ಬದುಕು ಕಟ್ಟಿಕೊಳ್ಳುಲು ಗುಣಮಟ್ಟದ ಅಭಿವೃದ್ದಿಯ ಬೇಕಾಗಿದೆ ಈ ಭಾಗದಲ್ಲಿ….. ಸುರೇಶ. ಗುರುಗುಂಟ.

ಆಂಜನೇಯ. ಮಟ್ಟೂರು.

ಗುಣಮಟ್ಟದ ಬದುಕು ಕಟ್ಟಿಕೊಳ್ಳುಲು ಗುಣಮಟ್ಟದ ಅಭಿವೃದ್ದಿಯ ಬೇಕಾಗಿದೆ ಈ ಭಾಗದಲ್ಲಿ..

ನಮ್ಮ ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಬೇಕಾಗಿರುವ ಮೂಲ ಸೌಲಭ್ಯಗಳ ಕೋರತೇಯೆ ಎದ್ದು ಕಾಣುತ್ತಿದೆ.. ಸ್ವಾತಂತ್ರ್ಯ ಪೂರ್ವದಲ್ಲಿ ಈ ಭಾಗದ 6 ಜಿಲ್ಲೆಗಳು ಹೈದರಾಬಾದಿನ ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದು ಸುಮಾರು 200 ವರ್ಷಗಳ ಕಾಲ ಆಡಳಿತದಲ್ಲಿ ಕರಾಳ ದಿನಗಳನ್ನು ಅನುಭವಿಸಿತು ಇಲ್ಲಿಯ ಜನ ಈ ದುರಂತದಿಂದಾಗಿಯೇ ಇನ್ನೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ನಮಗೆ ಸಿಕ್ಕಿದ್ದೆ ಸರ್ವ ಶ್ರೇಷ್ಠ ಎಂದು ಬದುಕುತ್ತಿರುತ್ತಾರೆ.. ಸ್ವಾತಂತ್ರ್ಯ ಪೂರ್ವದಲ್ಲಿ ಹಳೆ ಮೈಸೂರಿನ ಭಾಗ ಇಡಿ ಭಾರತದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಮಾದರಿ ರಾಜ್ಯವಾಗಿತ್ತು ಮೈಸೂರಿನ ಅರಸರ ದೂರ ದೃಷ್ಟಿಯಿಂದ ವಿಶ್ವೇಶ್ವರಯ್ಯ ರವರ ಯೋಜನೆಯಿಂದ ಆಗ ಮೈಸೂರಿನ ಮಹಾರಾಜ ಆಡಳಿತದಲ್ಲಿ ನೀರಾವರಿಗಾಗಿ
ಕನ್ನಂಬಾಡಿ ಆಣೆಕಟ್ಟು (KRS): ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ, ಇದು ರಾಜ್ಯದ ಕೃಷಿ ಮತ್ತು ವಿದ್ಯುತ್ ಉತ್ಪಾದನೆಗೆ ಅಡಿಪಾಯ ಹಾಕಿತು.
ಮೈಸೂರು ರಾಜ್ಯದ ರೈಲ್ವೆ ಇಲಾಖೆಯ ಸ್ಥಾಪನೆ ಮತ್ತು ವಿಸ್ತರಣೆ ಮಾಡಲಾಯಿತು.
ಶಿವನಸಮುದ್ರ ಜಲವಿದ್ಯುತ್ ಯೋಜನೆ ಕ್ರಾತಿಕಾರಕ ಹೆಜ್ಜೆ ಆಯಿತು (ಏಷ್ಯಾದಲ್ಲೇ ಮೊದಲನೆಯದು).
ಕೈಗಾರಿಕಾ ಪ್ರಗತಿಯಲ್ಲಿ
ಭದ್ರಾವತಿ ಐರನ್ ವರ್ಕ್ಸ್: ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆ.
ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಕೆ.ಆರ್. ಮಿಲ್ಸ್, ಮತ್ತು ಮೈಸೂರು ಪೇಪರ್ ಮಿಲ್ಸ್ ಸ್ಥಾಪನೆ.
ಶಿಕ್ಷಣ ಮತ್ತು ಸಾಂಸ್ಕೃತಿಕ ಕಾರ್ಯಗಳಾಗಿ
ಮೈಸೂರು ವಿಶ್ವವಿದ್ಯಾನಿಲಯ (1916): ಸ್ಥಾಪನೆ, ಇದು ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು: ಸ್ಥಾಪನೆ, ಕನ್ನಡ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ. ಮೈಸೂರು ದಸರಾವನ್ನು ಸಾಂಸ್ಕೃತಿಕ ಉತ್ಸವವಾಗಿ ವೈಭವೀಕರಿಸಿರುವುದು
ಸಾಮಾಜಿಕ ಮತ್ತು ಆಡಳಿತಾತ್ಮಕ ಸುಧಾರಣೆಗಳು: ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮಹಾರಾಣಿ ಕಾಲೇಜಿನಸ್ಥಾಪನೆ.
ಪ್ರಜಾಪ್ರಭುತ್ವದ ಅಡಿಪಾಯವಾಗಿ ಪ್ರಜಾ ಪ್ರತಿನಿಧಿ ಸಭೆಯ ಬಲವರ್ಧನೆ. ಮಾಡಲಾಯಿತು.
ಆರೋಗ್ಯ ಸೌಲಭ್ಯದ ದೃಷ್ಟಿಯಿಂದ ಮೈಸೂರಿನಲ್ಲಿ ಕೆ.ಆರ್. ಆಸ್ಪತ್ರೆ ಸೇರಿದಂತೆ ಹಲವಾರು ಆಸ್ಪತ್ರೆಗಳ ನಿರ್ಮಾಣ. ಈ ಎಲ್ಲಾ ಮೂಲ ಸೌಕರ್ಯಗಳು ಸ್ವಾತಂತ್ರ್ಯಕ್ಕಿಂತ ಮುಂಚೆ ಪಡೆದು ಆಗಿನ ನಾಲ್ವಡಿ ಕೃಷ್ಣರಾಜ ಒಡೆಯರ್ (1902-1940) ಅವರು ಹರಿಜನರ ಉದ್ಧಾರ, ಉಚಿತ ಶಿಕ್ಷಣ, ಮತ್ತು ಕೈಗಾರಿಕಾ ನೀತಿಗಳ ಮೂಲಕ ಮೈಸೂರನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದರೆ. ಇದರಿಂದಾಗಿ ನಮ್ಮ ಕಲ್ಯಾಣ ಕರ್ನಾಟಕ ಭಾಗಕಿಂತ ಸುಮಾರು 100 ವರ್ಷಗಳ ಜನ ಜೀವನ ಮಟ್ಟ ಸುಧಾರಣೆಯಲ್ಲಿದೆ. ಇಂತಹ ಅಭೂತಪೂರ್ವ ಅಭಿವೃದ್ಧಿ ಮಾತ್ರ ನಮಗೆ ಇನ್ನೂ ಮರಚಿಕೆಯಾಗಿಯೇ ಉಳಿದಿರುವುದು ಈ ಭಾಗದ ದುರಂತ.
ನಮ್ಮ ಕಲ್ಯಾಣ ಕರ್ನಾಟಕಭಾಗದಲ್ಲಿ ಅನ್ನಕ್ಕಾಗಿ ಕುಡಿಯುವ ನೀರಿಗಾಗಿ ಮೈಮೇಲಿನ ಬಟ್ಟೆಗಾಗಿ ತೀರ ನಿಕೃಷ್ಟ ಬದುಕು ಕಟ್ಟಿಕೊಳ್ಳಲು ಪರದಾಠುತಿದ್ದ ಪರಸ್ಥಿತಿ ಇನ್ನೂ ಕಣ್ಣಿಗೆ ರಾಚುವಂತೆ ಇದೆ. ಒಂದು ಉತ್ತಮ ಶಾಲೆ ನೋಡಲು ಸಿಗದ ಪರಸ್ಥಿತಿ ಇದೆ ರಸ್ತೆ ವಿದ್ಯುತ್ ಶಿಕ್ಷಣ ಸಂಸ್ಥೆಗಳು ನೀರಾವರಿಯಂತಹ ಮಹತ್ವ ಪೂರ್ಣ ಯಾವುದೇ ಯೋಜನೆಗಳು ಇಲ್ಲದಂತೆ ಆಗಿದೆ. ತುಂಗಭದ್ರ ಮತ್ತು ಆಲಮಟ್ಟಿ ಈ ಎರಡು ಜಲಾಶಯದಿಂದಾಗಿ ಈ ಭಾಗದ ಕೆಲವು ಜಿಲ್ಲೆಗಳು ಉಸಿರಾಡುವಂತೆ ಆಗಿದೆ ಆದರು ಇನ್ನೂ ಪುಣೆ ಬಾಂಬೆ ಮತ್ತು ಬೆಂಗಳೂರಿನ ಯಂತಹ ನಗರಗಳಿಗೆ ಗೂಳೆ ಹೋಗುವುದು ಇನ್ನೂ ತಪ್ಪಿಲ್ಲ
ಸ್ವಾತಂತ್ರ್ಯ ನಂತರ ಅಭಿವೃದ್ಧಿ ಏನು ಕುದುರೆ ವೇಗದಲ್ಲಿ ಇದೆ ನಾ ಅದು ಸಹ ಆಮೆ ವೇಗ ಎಂದರೆ ಹುಬ್ಬೇರಿಸಬೀಕಾದೀತು ಇಗೀಗ ಮೂಲಭೂತ ಸೌಕರ್ಯಗಳ ಬೇಳಕು ಬೀಳುತ್ತಿದೆ
ಆದರೆ ಗುಣಮಟ್ಟದ ವೈದ್ಯಕೀಯ ವ್ಯವಸ್ಥೆ ಏಮ್ಸ್ ನಂತಹ ಸೌಲಭ್ಯ ಕೇಳಿ ವರ್ಷಗಳಿಂದ ಹೋರಾಟಗಳು ನಡೆದರು ಏನು ಪ್ರಯೋಜನವಾಗಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಜನ ಸಂಖ್ಯೆಗೆ ತಕ್ಕ ಸೌಲಭ್ಯಗಳಿಲ್ಲ ಮತ್ತು ಇದ್ದರು ಇನ್ನೂ ಸರಿಯಾದ ಸ್ವಚ್ಛತೆ ವೈದ್ಯರು ವೈದ್ಯಕೀಯ ಸಿಬ್ಬಂದಿ ಕೋರತೆ ಇನ್ನೂ ಹಾಗೆ ಮುಂದುವರೆದಿದೆ. ಪರಿಸರ ಕಾಳಜಿಯ ಜೋತೆಗೆ ಕೈಗಾರಿಕೆಗಳು ಗಾರ್ಮೆಂಟ್ಸ್ ಮೂಲ ಕೃಷಿ ಚಟುವಟಿಕೆಗೆ ಬೇಕಾಗುವ ಉತ್ತೇಜನ ಸಿಗಬೇಕಾಗಿದೆ ಬೆಂಬಲ ಬೆಲೆ ನ್ಯಾಯಯುತವಾಗಿ ಪ್ರತಿ ರೈರ ಮನೆ ಬಾಗಿಲೆಗೆ ಮುಟ್ಟಿಸ ಬೇಕಾಗಿದೆ. ಸಾರಿಗೆ ವ್ಯವಸ್ಥೆಯು ಶೋಚನೀಯ ಸ್ಥಿತಿಯಲ್ಲಿರುವುದು ಕಾಣಬಹುದು ಸರಿಯಾದ ರಸ್ತೆ ಬಸ್ ಸೌಲಭ್ಯ ಶಾಲ ಕಾಲೇಜಿಗೆ ಹೋಗಲು ದಿನಾಲು ಪರದಾಡುವಂತೆ ಆಗಿದೆ ವಸತಿ ನಿಲಯವು ಇಲ್ಲ ಸರಿಯಾದ ಬಸ್ ಸೌಲಭ್ಯವು ಇಲ್ಲ ನಾಲ್ಕು ಬಸ್ ಗೆ ಹೋಗುವ ಜನರು ಒಂದೆ ಬಸ್ ಗೆ ಕಿತ್ತಾಡುಕೊಂಡು ಹೋಗುವ ಸ್ಥಿತಿ ಇದ್ದರು ಜನ ತಮಗೆ ತಾವೆ ಕುರಿಗಳು ಎಂದು ಭಾವಿಸಿಕೊಂಡು ಪ್ರಶ್ನೆ ಮಾಡುವುದನ್ನೆ ಬಿಟ್ಟಿದ್ದಾರೆ. ಇವುಗಳ ಜೋತೆಗೆ ಈಗಿರುವ ಆರು ಜಿಲ್ಲೆಗೆ 3 ವಿಶ್ವ ವಿದ್ಯಾಲಯಗಳು ಇವೆ ಆದರೆ ಅವುಗಳಿಗೆ ಬೋಧಕ ಸಿಬ್ಬಂದಿ ತುಂಬಲು ಆಗದೆ ವರ್ಷಗಳು ಕಳೆದಿದೆ ಹೋಸ ವಿ ವಿ ಕೇವಲ ಘೋಷಣೆ ಆದರೆ ಸಾಲುತ್ತದೆಯೇ ಅವುಗಳಿಗೆ ಭೋದಕ ಸಿಬ್ಬಂದಯನ್ನು ತುಂಬಿದರೆ ಮಾತ್ರ ಅವುಗಳು ಸ್ಥಾಪಿಸಿದ್ದಕ್ಕೆ ಸಾರ್ಥಕ ಆಗುತ್ತದೆ ಹಾಗೆ ಇದೆರೀತಿ ಪ್ರಾಥಮಿಕ ಪ್ರೌಢ ಶಾಲೆ ಪ ಪೂ ಕಾಲೇಜು ಮತ್ತು ಪದವಿಕಾಲೇಜಿನಲ್ಲಿ ಶಿಕ್ಷಕರ ಕೋರತೆ ಕಣ್ಣಿಗೆ ರಾಚುವಂತೆ ಇದೆ
371 ಜೆ ಸಂವಿಧಾನ ಬದ್ಧ ಹಕ್ಕು ಸಿಕ್ಕರು ಸಹ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸ್ಥಾಪನೆ ಆಗಿದ್ದರು ಅದಕ್ಕೆ ಹಣದ ಹೋಳೆ ಹರಿಯುತಿದ್ದರು ಏನು ಪ್ರಯೋಜನ ಆಗದಿರುವುದೇ ದುರಂತ ಹೈದರಾಬಾದ್ ಕರ್ನಾಟಕ ವಿಶೇಶ ಸ್ಥಾನಮಾನದಿಂ ದ ಇಲ್ಲಿನ ಯುವಕರಿಗೆ ಕೊಂಚ ಉದ್ಯೋಗ ಅವಕಾಶ ಸಿಗುತ್ತಿದೆ. .
ಪ್ರತಿ ಹಳ್ಳಿಯಗಳಿಗೆ ಕುಡಿಯುವ ನೀರು ಶಾಲೆ ಬಸ್ ಸೌಲಭ್ಯ ರಸ್ತೆಯಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಪ್ರತಿ ದಿನ ಗೂಳೆ ಹೋಗುವುದಂತು ತಪ್ಪುತಿಲ್ಲ
ರಾಜಕೀಯದಲ್ಲಿ ವಿಶೇಷ ಸ್ಥಾನಮಾನದ (371J) ಕಾರಣ ಮುಖ್ಯ ಮಂತ್ರಿಯ ಸ್ಥಾನ ಒಂದುಕಡೆ ಇರಲಿ ಒಳ್ಳೆಯ ಮಂತ್ರಿ ಸ್ಥಾನ ಸಿಗದಿರುವುದು ಹಾಸ್ಯಸ್ಪದವಾಗಿದೆ ಜನ ಪ್ರತಿನಿಧಿಗಳು ಇಚ್ಚಾ ಶಕ್ತಿಯ ಕೋರತೆಯ ಕಾರಣಕ್ಕೆ ಕೇಳುವ ಎದೆಗಾರಿಕೆಯು ಇಲ್ಲ ಎಂದು ಬಾಸವಾಗುತ್ತಿದೆ . ಬಡವರ ದಲಿತರ ದಮನೀತರ ಹಿಂದುಳಿದವರ ಧ್ವನಿಯಾಗಬೇಕಾಗಿದ್ದ ಜನ ಪ್ರತಿನಿಧಿನಗಳೇ ಕಣ್ಣು ಮುಚ್ಚಿ ಕುಳಿತರೆ ಯಾರನ್ನು ಕೇಳುವುದು ಬೇಲಿಯೇ ಎದ್ದು ಹೊಲ ಮೇಯಿದಡೆ
ಎರಿ ನೀರುಂಬಡೆ ಎಂಬ ಬಸವಣ್ಣನವ ಮಾತು ಸೂಕ್ತವಾಗಿದೆ ಕಲ್ಯಾಣ ಕರ್ನಾಟಕ ಭಾಗವನ್ನು ಮಾದರಿ ಭಾಗವನ್ನಾಗಿ ಮಾಡುವ ತಮ್ಮ ಗುಣ ಮಟ್ಟದ ಕೆಲಸದ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರಂತಹ ಕಳಕಳಿಯ ದೇವರಾಜ ಅರಸರಂತ ದಿಮಂತ ಯಾವುದಕ್ಕು ಮಣಿಯದ ಕೆಂಗಲ್ ಹನುಮಂತಯ್ಯರಂತಹ ಜನ ಪ್ರತಿನಿಧಿಗಳು ಈ ಭಾಗಕ್ಕೆ ಬೇಕಾಗಿದೆ.
ಏನೆ ಆಗಲಿ ಗುಣಮಟ್ಟದ ಬದುಕು ಕಟ್ಟಿ ಕೊಳ್ಳಲು ಬೇಕಾದ ಎಲ್ಲಾ ಸೌಲಭ್ಯಗಳು ಜನ ಪರವಾದ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಜಾಣ್ಣೆ ತೋರುವರೆಗೆ ಇದು ಹೀಗೆ ಮುಂದುವರೆಯುತ್ತದೆ ಎಂಬುದನ್ನು ಮಾತ್ರ ಜನ ಮರೆಯಬಾರದು….

ಲೇಖಕರು:- ಸುರೇಶ ಜಿ ಗುರುಗುಂಟ
ಉಪನ್ಯಾಸಕರು ರಾಯಚೂರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments