Thursday, October 15, 2026
Homeನಿಮ್ಮ ಜಿಲ್ಲೆಕಣ್ಮರೆಯಾಗಿ 8 ದಿನಗಳ ನಂತರ ಶವವಾಗಿ ಪತ್ತೆ

ಕಣ್ಮರೆಯಾಗಿ 8 ದಿನಗಳ ನಂತರ ಶವವಾಗಿ ಪತ್ತೆ

​ಬೆಂಗಳೂರು: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿಯ ನವವಧು ಪ್ರಿಯಾಂಕಾ (27) ಅವರ ಕಣ್ಮರೆ ಪ್ರಕರಣ ದುರಂತ ಅಂತ್ಯಕಂಡಿದೆ. 8 ದಿನಗಳ ನಂತರ ಅವರ ಮೃತದೇಹ ಶ್ರವಣಬೆಳಗೊಳದ ಬಳಿಯ ಹೇಮಾವತಿ ಕಾಲುವೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

​ವಿವರಗಳು: ಈ ತಿಂಗಳ 19ರಂದು ರಾತ್ರಿ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ದಂಪತಿ ರಾಜಶೇಖರ್ ಮತ್ತು ಪ್ರಿಯಾಂಕಾ ಊರಿನ ಹೊರವಲಯದಲ್ಲಿದ್ದ ಕಾಲುವೆಯ ಬಳಿ ತೆರಳಿದ್ದರು. ಅಲ್ಲಿ ಗಲಾಟೆಯಾಗಿದ್ದರಿಂದ ಆಕೆಯೇ ಕಾಲುವೆಗೆ ಹಾರಿದ್ದಾಳೆ ಎಂದು ಗಂಡ ಹೇಳುತ್ತಿದ್ದಾನೆ.

​ಆದರೆ ರಾಜಶೇಖರನೇ ಪ್ರಿಯಾಂಕಾರನ್ನು ನೀರಿಗೆ ತಳ್ಳಿದ್ದಾನೆ ಎಂದು ಪ್ರಿಯಾಂಕಾರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಆಕೆಗೆ ಈಜು ಬರುತ್ತಿತ್ತು ಎಂದೂ ಅವರು ಹೇಳಿದ್ದಾರೆ. ಅಂದಿನಿಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದು, ಕಾಲುವೆಯ ಆಳವಾದ ಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.

ಶ್ರವಣಬೆಳಗೊಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಿಯಾಂಕಾಗೆ ಮೊದಲೇ ಮದುವೆಯಾಗಿತ್ತು, ಅದನ್ನು ಮುಚ್ಚಿಟ್ಟು ತಮಗೆ ಎರಡನೇ ಮದುವೆ ಮಾಡಿದ್ದಾರೆ ಎಂಬ ಸಿಟ್ಟಿನಿಂದ ರಾಜಶೇಖರ್ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments