Thursday, October 15, 2026
Homeನಿಮ್ಮ ಜಿಲ್ಲೆಕಲ್ಬುರ್ಗಿಯಲ್ಲಿ ರಾಜ್ಯ ಭೋವಿ (ವಡ್ಡರ) ಬೃಹತ್ ಸಮಾವೇಶ: ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಕಲ್ಬುರ್ಗಿಯಲ್ಲಿ ರಾಜ್ಯ ಭೋವಿ (ವಡ್ಡರ) ಬೃಹತ್ ಸಮಾವೇಶ: ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಬೆಂಗಳೂರು, ಕೆ.ಆರ್.ಪುರ : ಶೈಕ್ಷಣಿಕ. ಸಾಮಾಜಿಕ. ಆರ್ಥಿಕವಾಗಿ. ಹಿಂದುಳಿದಿರುವ ಭೋವಿ ಜನಾಂಗ ಸಂಘಟನೆ ಆಗದಿದ್ದರೆ ಸರ್ಕಾರದ ಸವಲತ್ತು ಸಿಗುವುದಿಲ್ಲ. ಎಲ್ಲರೂ ಎಚ್ಚೆತ್ತುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಚಿತ್ರದುರ್ಗ ಭೋವಿ ಗುರುಪೀಠಾಧ್ಯಕ್ಷ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಕರೆನೀಡಿದರು.
ರಾಜ್ಯಭೋವಿ (ವಡ್ಡರ) ಬೃಹತ್ ಸಮಾವೇಶ ನಡೆಸುವ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಜನಾಂಗದವರು ಶಿಕ್ಷಣ. ಉದ್ಯೋಗ ವಂಚಿತರಾಗಿರುವುದು. ಹೊಟ್ಟೆಪಾಡಿಗಾಗಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುವ ಸಮಾಜದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಸಂಘಟನೆಯೇ. ಬಹು ದೊಡ್ಡ ಶಕ್ತಿ ಎಂದರು
ನಿಮ್ಮ ಸಂಘಟನೆ ತೋರಿಸಿದರೆ ನಿಗಮ ಮಂಡಳಿಯಲ್ಲಿ ಮೂರು ಅಧ್ಯಕ್ಷ. 2 ವಿಧಾನ ಪರಿಷತ್. ಒಂದು ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವಂತಾಗಬೇಕು ಎಂದರು
ಮಗು ಅಳದಿದ್ದರೆ ತಾಯಿ ಹಾಲು ಉಣಿಸುವುದಿಲ್ಲ. ತಾವು ಎಚ್ಚರವಾಗಿ ಎಚ್ಚರವಾಗಿ ಸಂಘಟನೆ ಮಾಡದಿದ್ದರೆ ಅಧಿಕಾರ. ಸವಲತ್ತು ತಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ತಾವು ಯಾವುದೇ ಪಕ್ಷದಲ್ಲಿ ಇರಲಿ ಮೊದಲು ಸಮಾಜದ ಸಂಘಟನೆ ಮಾಡಿ. ನಿಮ್ಮ ಶಕ್ತಿ ನೋಡಿ ಎಲ್ಲ ಪಕ್ಷಗಳು ಕರೆದು ಚುನಾವಣೆಗೆ ಟಿಕೆಟ್ ನೀಡುತ್ತವೆ ಎಂದು ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಕರೆ ನೀಡಿದರು.
ಜನವರಿಯಲ್ಲಿ ಸುಮಾರು ಮೂರರಿಂದ ನಾಲ್ಕು ಲಕ್ಷ ಜನರನ್ನು ಕಲ್ಬುರ್ಗಿಯಲ್ಲಿ ಸೇರಿಸಿ ಸಮಾಜದ ಸಮಾವೇಶ ನಡೆಸಲಾಗುವುದು. ಅಲ್ಲಿ ನಮ್ಮ ಸಂಘಟನೆ ತೋರಿಸಿದರೆ ನಮ್ಮ ಪಾಲು ಮುಂದಿನ ಬಜೆಟ್ ನಲ್ಲಿ 3000 ಕೋಟಿಗಿಂತಲೂ ಹೆಚ್ಚು ಸಿಗುತ್ತದೆ ಎಂದ ಅವರು ನೀವು ಯಾವುದೇ ಪಕ್ಷದಲ್ಲಿ ಇರಲಿ ನಮ್ಮ ಸಂಘಟನೆ ಮುಖ್ಯ. ಆಗ ನಮ್ಮ ಸಮಾಜಕ್ಕೆ ಎಂಟರಿಂದ ಹತ್ತು ಎಂಎಲ್ಎ. 2 ಎಂಪಿ. ಮೂರು ಎಂಎಲ್ಸಿ ಟಿಕೆಟ್ ನೀಡುವ ಜತೆಗೆ ಸರ್ಕಾರದ ಸವಲತ್ತುಗಳು ಸಿಗುತ್ತವೆ ಎಂದರು.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಮಾತನಾಡಿ ಪರಿಶಿಷ್ಟ ಜಾತಿಯಲ್ಲಿ ಅತಿ ದೊಡ್ಡ ಮೂರನೇ ಸ್ಥಾನದಲ್ಲಿ ನಾವಿದ್ದು. ನಮ್ಮ ಸಂಘಟನೆ ಹೋರಾಟ ಮಾಡಿ ಸಂಖ್ಯೆಯನ್ನು ತೋರಿಸಿದರೆ ಸರ್ಕಾರದ ಸವಲತ್ತು ಹೆಚ್ಚಿನ ರೀತಿಯಲ್ಲಿ ಸಿಗುತ್ತವೆ ಎಂದು ಅಭಿಪ್ರಾಯಪಟ್ಟರು
ರಾಜ್ಯದಲ್ಲಿ ಜನಾಂಗದವರು 18 ಲಕ್ಷ ಇದ್ದರೂ ಸಂಘಟನೆ ಇಲ್ಲದ ಕಾರಣ. ಸೇರದೆ ಇರುವುದು ಒಂದೆಡೆ ಸೇರದೆ ಇರುವುದರಿಂದ ನಮ್ಮ ಪಾಲು ಸಿಗುತ್ತಿಲ್ಲ ಎಂದು ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ. ವಿ ಸೀತಾರಾಮ್ ಬೇಸರ ವ್ಯಕ್ತಪಡಿಸಿದರು. ಜೆಡಿಎಸ್ ನಾಯಕ ಸಿದ್ದು ಬಂಡಿ. ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ರವಿ ಹೆಚ್. ಮಾಕಳಿ . ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ತಿಪ್ಪಣ್ಣ ಒಡೆಯ ರಾಜ . ಸಮಾಜದ ಹಿರಿಯ ನಾಯಕರಾದ ರವಿ ಪೂಜಾರಿ. ಹಿಟಾಚಿ ಮಂಜುನಾಥ್. ನಿಗಮದ ಮಾಜಿ ಅಧ್ಯಕ್ಷ ಎಸ್. ರವಿಕುಮಾರ್ ರಾಷ್ಟ್ರೀಯ ಉಪಾಧ್ಯಕ್ಷ ಗೋಡೆ ಹನುಮಂತಪ್ಪ. ನಿವೃತ್ತ ನ್ಯಾಯಾಧೀಶ ವೆಂಕಟೇಶ್ ಹೊರ್ಸೆ ಮತ್ತಿತರರು ಇದ್ದರು
ಚಿತ್ರ : ಭೋವಿ ಜನಾಂಗದ ರಾಜ್ಯಮಟ್ಟದ ಸಮಾವೇಶದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿದರು ಎಸ್. ರವಿಕುಮಾರ್. ರವಿ ಹೆಚ್. ಮಾಕಳಿ. ಶಿವರಾಜ್ ಎಸ್. ತಂಗಡಗಿ. ಎಂ. ರಾಮಪ್ಪ. ಜಿ. ವಿ. ಸೀತಾರಾಮ್ ಇದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments