Thursday, October 15, 2026
Homeತಂತ್ರಜ್ಞಾನವನ್ಯಜೀವಿ ಸಪ್ತಾಹದ ಅಂಗವಾಗಿ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ

ವನ್ಯಜೀವಿ ಸಪ್ತಾಹದ ಅಂಗವಾಗಿ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ

ಮುದ್ದೇಬಿಹಾಳ: ಬಿಎಎಸ್ ಇಂಟರನ್ಯಾಷನಲ್ ಶಾಲೆ ಹಾಗೂ ಮುದ್ದೇಬಿಹಾಳ ತಾಲೂಕು ಪ್ರಾದೇಶಿಕ ಅರಣ್ಯ ವಲಯದ ಸಹಯೋಗದಲ್ಲಿ 72ನೇ ವನ್ಯಜೀವಿ ಸಪ್ತಾಹ–2026ರ ಅಂಗವಾಗಿ
ಬಿಎಎಸ್ ಶಾಲೆಯ ವಿದ್ಯಾರ್ಥಿಗಳಿಗೆ , ಚಿತ್ರಕಲಾ ಸ್ಪರ್ಧೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವನಗೌಡ ಬಿರಾದಾರ ಮಾತನಾಡಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಎಂಬ ಆಶಯದೊಂದಿಗೆ ವನ್ಯಜೀವಿ ಸಂರಕ್ಷಣೆ ಹಾಗೂ ಪರಿಸರದ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇಲಾಖೆಯವರು ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಿರುವದು ಅತ್ಯಂತ ಅರ್ಥಪೂರ್ಣವಾಗಿದೆ, ಭೂಮಂಡಲದಲ್ಲಿ ಪರಿಸರ ಸಮತೋಲನ ಕಾಪಾಡಲು ಮತ್ತು ಅರಣ್ಯ ಸಂಪತ್ತು ವೃದ್ಧಿಗೆ, ಅದರ ಉಳಿವಿಗಾಗಿ ವಿಶೇಷ ಕಾಳಜಿ ವಹಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಲ್ವಕುಮಾರ ಮಾತನಾಡಿ
ವನ್ಯಜೀವಿ ಸಪ್ತಾಹ ಅಂಗವಾಗಿ
ಏರ್ಪಡಿಸಲಾದ , ಚಿತ್ರಕಲಾ ಸ್ಪರ್ಧೆಯಲ್ಲಿ ಬಿಎಎಸ್ ಶಾಲೆಯ
7 ಮತ್ತು 8 ನೆಯ ವರ್ಗದ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ವನ್ಯಜೀವಿ ಸಂರಕ್ಷಣೆ, ಅರಣ್ಯ ರಕ್ಷಣೆ, ಪರಿಸರ ಸಮತೋಲನ ಹಾಗೂ ಮಾನವ–ವನ್ಯಜೀವಿ ಸಹಬಾಳ್ವೆಯ ಕುರಿತು ತಮ್ಮ ವಿಚಾರಗಳನ್ನು ಪ್ರಬಂಧ ಮತ್ತು ಚಿತ್ರಗಳ ಮೂಲಕ ಪ್ರತಿಭೆ ಪ್ರದರ್ಶಿಸಿದ್ದಾರೆ ಎಂದು ಹೇಳಿದ ಅವರು
ವನ್ಯಜೀವಿಗಳ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ, ವಿದ್ಯಾರ್ಥಿ ಹಂತದಲ್ಲಿಯೇ ಪರಿಸರ ಪ್ರಜ್ಞೆ ಬೆಳೆಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿ ಬಿ. ಐ ಬಿರಾದಾರ ಮಾತನಾಡಿ ವನ್ಯಜೀವಿಗಳು ವಾಸಿಸುವ ಕಾಡುಗಳನ್ನು ನಾಶ ಮಾಡಬೇಡಿ. ಇದ ರಿಂದ ಕಾಡಿನಿಂದ ನಾಡಿಗೆ ವನ್ಯ ಪ್ರಾಣಿಗಳು ಆಗಮಿಸುತ್ತವೆ ಆಕಸ್ಮಿಕವಾಗಿ ದಾಳಿ ನಡೆಸುತ್ತವೆ ಇದರಿಂದ ಅವಘಡಗಳು, ಪ್ರಾಣ ಹಾನಿ ಸಂಭವಿಸುತ್ತವೆ ಹೀಗಾಗಿ ಮನುಷ್ಯರಷ್ಟೇ ಅಲ್ಲ, ಎಲ್ಲಾ ಪ್ರಾಣಿಗಳಿಗೂ ಈ ಭೂಮಿಯಲ್ಲಿ ಜೀವಿಸುವ ಹಕ್ಕಿದೆ. ಆದ್ದರಿಂದ ಕಾಡುಗಳನ್ನು ಸಂರಕ್ಷಿಸುವದು ಮತ್ತು ವನ್ಯಜೀವಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇಲಾಖೆಯ ಜೊತೆಗೆ ಸಾರ್ವಜನಿಕರು ಕೂಡಾ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ವೈಭವ ಮ್ಯಾಗೇರಿ, ನಂದೀತಾ ಕೆ.ಜಾದವ, ಶ್ರೀದೇವಿ ಬಿ. ಬಿರಾದಾರ, ಶಕುಂತಲಾ ಎಸ್. ಶಾರದಳ್ಳಿ, ಅನುಷಾ ಜೆ. ನಾಯಕ ವಿದ್ಯಾರ್ಥಿಗಳಿಗೆ
ಹಾಗೂ ಎಸ್ಎಸ್ ಪಿಒ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ
ಪ್ರಮಾಣಪತ್ರ, ಕಲಿಕಾ ಸಾಮಾಗ್ರಿಗಳ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೀಟ್ ಪಾರೆಷ್ಟರ್ ಶಿವಾನಂದ ಮೇತ್ರಿ, ರವಿ ತುಂಬಾ, ಎನ್ಎಸ್ಎಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪರಶುರಾಮ ಎಂ.ದೇವಿ, ಬಿಎಎಸ್ ಶಾಲೆಯ ಪ್ರಾಚಾರ್ಯ ಅಶೋಕ ತುಪ್ಪದ, ಸತೀಶ್ ವಾಲಿಕಾರ ಸೇರಿದಂತೆ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments