Thursday, October 29, 2026
Homeನಿಮ್ಮ ಜಿಲ್ಲೆಮುದ್ದೇಬಿಹಾಳದಲ್ಲಿ ಬರಗಾಲ ನಿವಾರಣೆಗಾಗಿ ದುರ್ಗಾದೇವಿಗೆ ವಿಶೇಷ ಪೂಜೆನಾಡಹಬ್ಬದ ಪ್ರಯುಕ್ತ ಹೋಮ-ಹವನ: ನಾಡಿನಲ್ಲಿ ಸುಭಿಕ್ಷೆ, ಮಳೆ-ಬೆಳೆ ಸಮೃದ್ಧಿಗಾಗಿ...

ಮುದ್ದೇಬಿಹಾಳದಲ್ಲಿ ಬರಗಾಲ ನಿವಾರಣೆಗಾಗಿ ದುರ್ಗಾದೇವಿಗೆ ವಿಶೇಷ ಪೂಜೆನಾಡಹಬ್ಬದ ಪ್ರಯುಕ್ತ ಹೋಮ-ಹವನ: ನಾಡಿನಲ್ಲಿ ಸುಭಿಕ್ಷೆ, ಮಳೆ-ಬೆಳೆ ಸಮೃದ್ಧಿಗಾಗಿ ಪ್ರಾರ್ಥನೆ

ಮುದ್ದೇಬಿಹಾಳ:
ತಾಲೂಕಿನಲ್ಲಿ ಈ ವರ್ಷ ಮಳೆಯ ಕೊರತೆಯಿಂದ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಹಾಗೂ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಿರಲಿ, ನಾಡಿನಲ್ಲಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಚೇತರಿಸಿಕೊಳ್ಳಲಿ ಹಾಗೂ ಸಕಲ ಜನರ ಬದುಕಿನಲ್ಲಿ ಸುಖ-ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ನಾಡಹಬ್ಬದ ಪ್ರಯುಕ್ತ ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಹೋಮ-ಹವನ ನೆರವೇರಿಸಲಾಯಿತು.
ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ದಸರಾ ಸಮಿತಿಯ ಪ್ರಮುಖರಾದ ಜೋಹಿತರಾಮ ಸಾಲಂಕಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಇಂತಹ ತೀವ್ರ ಬರಗಾಲದ ಪರಿಸ್ಥಿತಿ ಕಂಡುಬಂದಿರಲಿಲ್ಲ. ಆದರೆ ಈ ವರ್ಷ ಮಳೆಯ ಅಭಾವದಿಂದಾಗಿ ಬರದ ಆತಂಕ ಎದುರಾಗಿದ್ದು, ರೈತರು ಸೇರಿದಂತೆ ಸಾರ್ವಜನಿಕರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಾಡಹಬ್ಬದ ಶುಭ ಸಂದರ್ಭದಲ್ಲಿ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ-ಹವನ ನೆರವೇರಿಸುವ ಮೂಲಕ ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.
ಉತ್ಸವ ಮೂರ್ತಿಗೆ ಪ್ರಾರ್ಥನೆ:
ಕಳೆದ ಮೂರು ವರ್ಷಗಳ ಹಿಂದೆ ಪಟ್ಟಣದಲ್ಲಿ ರಾಜಸ್ಥಾನದ ಹತ್ತಿರದ ಅಬುರೋಡ ಎಂಬ ಗ್ರಾಮದಿಂದ ಶ್ರೀದುರ್ಗಾ ದೇವಿ ಉತ್ಸವ ಮೂರ್ತಿಯನ್ನು ತಯ್ಯಾರಿಸಿ ಪ್ರತಿಷ್ಠಾಪನೆ ಮಾಡಿದ್ದು ಮೂರು ವರ್ಷಗಳಿಂದಲೂ ನಾಡಹಬ್ಬದಣದು ವಿಶೇಷ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿದೆ. ನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಜನರ ಸಂಕಷ್ಟ ದೂರವಾಗಿ, ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಬೇಕು. ರೈತರು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಸಂಕಲ್ಪದೊಂದಿಗೆ ದೇವಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಸಮೀತಿಯವರು ಹೇಳಿದರು.
ಕಾರ್ಯಕ್ರಮದಲ್ಲಿ ಶಂಕರಭಟ್ಟ ಜೋಷಿ ಅವರು ವಿಶೇಷ ಹೋಮ-ಹವನ ನೆರವೇರಿಸಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಭಕ್ತಿಭಾವದಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ದುರ್ಗಾದೇವಿಯ ದರ್ಶನ ಪಡೆದು ನಾಡಿನ ಸುಭಿಕ್ಷೆ, ಉತ್ತಮ ಮಳೆ-ಬೆಳೆ ಹಾಗೂ ಜನರ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಅರ್ಚಕರಾದ ಪ್ರಾಣೇಶ ಭಟ್ಟ, ಮಯೂರಸಿಂಗ್ ರಾಯಚೂರ, ಹಿರಿಯರಾದ ಅಶೋಕ ನಾಡಗೌಡ, ಪುಟ್ಟುಗೌಡ ಪಾಟೀಲ, ಉಮೇಶ ಕಂಠಿ, ನೀತಾ ರಾಯಚೂರ, ಪುಷ್ಪಾ ಪಾಟೀಲ ಊರಗೌಡರ, ಸಂತೋಷ ನಾಯ್ಕೋಡಿ, ಉಮೇಶ ಗಡ್ಡಿ, ಅಪ್ಪಣ್ಣ ಸಿದ್ದಾಪೂರ, ಶ್ರೀಶೈಲ ಅಮರಣ್ಣವರ, ಜ್ಯೋತಿ ಸಾಲಂಕಿ, ಗೋಪಿಕಾ ರಾಯಚೂರ, ಸಂಗಣ್ಣ ನಾಯ್ಕೋಡಿ, ಪೂರ್ವಿಕಾ ರಾಯಚೂರ, ಉದಯಸಿಂಗ್ ರಾಯಚೂರ, ರೂಪಾ ಕೆಂದೂಳಿ, ಮುತ್ತಣ್ಣ ಒಣರೊಟ್ಟಿ, ಸಂತೋಷ ಹೂಗಾರ ಸೇರಿದಂತೆ ಸಮಿತಿಯ ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments