Thursday, October 15, 2026
Homeನಿಮ್ಮ ಜಿಲ್ಲೆನಿಗಮಗಳ ಅಧ್ಯಕ್ಷರೊಂದಿಗೆ ಸಭೆಯನ್ನು ನಡೆಸಿದ ಸಚಿವ:- ಕೆಹೆಚ್.ಮುನಿಯಪ್ಪಬೆಂಗಳೂರು.8👇ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೆಹೆಚ್. ಮುನಿಯಪ್ಪ...

ನಿಗಮಗಳ ಅಧ್ಯಕ್ಷರೊಂದಿಗೆ ಸಭೆಯನ್ನು ನಡೆಸಿದ ಸಚಿವ:- ಕೆಹೆಚ್.ಮುನಿಯಪ್ಪಬೆಂಗಳೂರು.8👇ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಇಂದು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ ನಿಗಮಗಳ ಅಧ್ಯಕ್ಷರು ಹಾಗೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆಯನ್ನು ನಡೆಸಿದರು.

ನಿಗಮಗಳ ಸಮಸ್ಯೆಗಳು ಹಾಗೂ ಆಯವ್ಯಯದಲ್ಲಿ ಘೋಷಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಭದಿಸಿದಂತೆ ಸಭೆಯಲ್ಲಿ ಅಧ್ಯಕ್ಷರು ಮಾನ್ಯ ಸಚಿವರಿಗೆ ಪ್ರಸ್ತಾಪಿಸಿದರು
ಎಸ್ ಸಿ ಎಸ್ ಪಿ ಅನುದಾನ ಹಂಚಿಕೆಯಿಂದ ಸಮುದಾಯದ ಬಲವರ್ಧನೆಗೆ ಸಹಕಾರಿಯಾಗಲಿದ್ದು ಈ ನಿಗಮಗಳ ಮೂಲಕ ಸಮುದಾಯಗಳ ಅಭಿವೃದ್ಧಿಯನ್ನು ಮಾಡಲು ಸೂಕ್ತ ಅನುದಾನ ಹಂಚಿಕೆ ಮಾಡಿವುದರೊಂದಿಗೆ ನೂತನ‌ ಕಾರ್ಯಕ್ರಮಗಳ‌ ಅನುಷ್ಠಾನ ಮಾಡಲು ಮಾನ್ಯ ಸಚಿವರು ಸೂಚಿಸಿದರು

ಪೌರಕಾರ್ಮಿಕರ ಮಕ್ಕಳ ವಿಧ್ಯಾಭ್ಯಾಸ ಕ್ಕೆ ಅನುಗುಣ ವಾಗಿ ವಿಶೇವಾಗಿ ಬೆಂಗಳೂರು ನಗರದಲ್ಲಿ ವಸತಿ ಶಾಲೆಗಳನ್ನು ನಿರ್ಮಾಣ ಮಾಡುವ ಕುರಿತು ಒಂದು ಸಮಿತಿ ರಚಿಸಿ ಅದರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಗಮನಕ್ಕೆ ತಿಳಿಸಿದಾಗ ಇದರ ಕುರಿತು ಕ್ರಮವಹಿಸಲಿದ್ದಾರೆ ಎಂದರು

ರಾಜ್ಯದಲ್ಲಿರುವ ಅಂಬೇಡ್ಕರ್ ಭವನಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ ಮೂಡುವುದರೊಂದಿಗೆ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದರು

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನರೇಂದ್ರ, ಬಾಬು ಜಗಜೀವನ್ ರಾಂ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುಂಡರಗಿ ನಾಗರಾಜು,ಆಧಿ ಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಅಶೋಕ ಸಾಲಪ್ಪ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಯ್ಯ, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಆಗ ಸುಲ್ತಾನ್ ಮುರ್ತಾಜ್, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments