Thursday, October 15, 2026
Homeನಿಮ್ಮ ಜಿಲ್ಲೆಕಾಂಗ್ರೆಸ್ಸಿನ ಬ್ಲ್ಯಾಕ್‍ಮೇಲ್ ತಂತ್ರ: ಛಲವಾದಿ ನಾರಾಯಣಸ್ವಾಮಿ

ಕಾಂಗ್ರೆಸ್ಸಿನ ಬ್ಲ್ಯಾಕ್‍ಮೇಲ್ ತಂತ್ರ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ನೂರಾರು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಸರ್ಕಾರ, ಸ್ಟಿಂಗ್ ಆಪರೇಷನ್ ವಿಷಯ ತಂದು ಮರೆಮಾಚುತ್ತಿದೆ, ತಿರುಗಿಸುತ್ತಿದೆ. ಕಾಂಗ್ರೆಸ್ ಮಂತ್ರಿಗಳನ್ನು ಬ್ಲ್ಯಾಕ್ ಮೇಲ್ ಮಾಡುವ ತಂತ್ರವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ಉಸಾಬರಿಗಳೆಲ್ಲ ಕಾಂಗ್ರೆಸ್‍ಗೆ ಯಾಕೆ ಎಂಬುದೇ ತಿಳಿಯಲ್ಲ. ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರೆ. ನಿಮ್ಮ ಹಿಂದೆ ಯಾರೋ ಇದ್ದಾರೆ ಅನ್ನೋದನ್ನು ಅವರೇ ಹರಿಬಿಟ್ಟರು. ಸ್ಟಿಂಗ್ ಅಪರೇಷನ್‍ಗೆ ಯಾವ ಪಕ್ಷ ಹೆಸರುವಾಸಿ ಅನ್ನೋದು ಜನರಿಗೆ ತಿಳಿದಿದೆ. ಸ್ಟಿಂಗ್ ಅಪರೇಷನ್ ಮಾಡುವ ಇವರಿಗೆ ಭಾರತ ರತ್ನ ಕೊಡಬೇಕು. ಕಾಂಗ್ರೆಸ್ ಇದರಲ್ಲಿ ನೈಪುಣ್ಯತೆ ಹೊಂದಿದೆ ಎಂದು ಆರೋಪಿಸಿದರು.
ರೈತರಿಗೆ ಅನ್ಯಾಯ ಮಾಡುತ್ತಿರುವ ಈ ಸರ್ಕಾರ ಭ್ರμÁ್ಟಚಾರದಲ್ಲಿ ಮುಳುಗಿದೆ. ಆಸ್ಪತ್ರೆಗಳಲ್ಲಿ ಔಷಧ ಇಲ್ಲ. ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬರಗಾಲ ತಾಂಡವವಾಡುತ್ತಿದೆ. ಅಂತಹುದರಲ್ಲಿ ಈ ಸ್ಟಿಂಗ್ ಆಪರೇಷನ್ ವಿಷಯ ಈಗ ತಂದಿದ್ದಾರೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಮನೆ ಮಾಡಿಕೊಂಡಿರುವ ಉತ್ತರ ಕರ್ನಾಟಕ ಭಾಗದ ಶಾಸಕರು ಎರಡು ಮದುವೆ ಮಾಡಿಕೊಂಡಿದ್ದಾರೆ ಎಂದು ಈ ಹಿಂದೆ ಮುಖ್ಯಮಂತ್ರಿಗಳು ಹೇಳಿ ಬ್ಲ್ಯಾಕ್ ಮೇಲ್ ಮಾಡಿದ್ದರು. ಈಗ ಸ್ಟಿಂಗ್ ಆಪರೇಷನ್ ತಂದಿದ್ದಾರೆ. ಒಟ್ಟಾರೆ ಶಾಸಕರನ್ನು ಹತೋಟಿಯಲ್ಲಿ ಇಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಇಂತಹವನ್ನೆಲ್ಲ ಬದಿಗಿಟ್ಟು ಕಾಂಗ್ರೆಸ್ ರಾಜ್ಯದ ಜನರ ಕಡೆಗೆ ನೋಡಲಿ. ಸ್ಟಿಂಗ್ ಆಪರೇಷನ್, ಹನಿಟ್ರ್ಯಾಪ್ ಮಾಡುವುದರಲ್ಲೇ ನೀವು ಇದ್ದರೆ ಜನ ನಿಮಗೆ ಸರಿಯಾದ ಪಾಠ ಕಲಿಸುತ್ತಾರೆ. ರವಿ ಗಣಿಗ ಅವರು ಏನೋ ಹೇಳಿದ್ದಾರೆ. ಅವರೇ ಕ್ಷೇತ್ರದಲ್ಲಿ ಅವರದೇ ಸ್ನೇಹಿತರು ನೂರಾರು ಕೋಟಿ ರೂಪಾಯಿಗಳ ಹಾಲಿನ ಪೌಡರ್ ಹಗರಣದಲ್ಲಿ ಸಿಕ್ಕಿದ್ದಾರೆ. ಇದರ ಬಗ್ಗೆ ಜನರಿಗೆ ಉತ್ತರ ಕೊಡಲಿ. ಅವರು ತಮ್ಮ ಇತಿಮಿತಿಯಲ್ಲಿ ಯೋಚನೆ ಮಾಡಲಿ. ಅನ್ಯಾಯವಾದವರಿಗೆ ಪರಿಹಾರ ಕೊಡಿ. ನೀರು ಮತ್ತಿತರ ವಿಷಯದಲ್ಲಿ ಮಂಡ್ಯದ ಜನರಿಗೆ ನ್ಯಾಯ ಕೊಡಿಸುವುದು ಬಿಟ್ಟು ಹನಿಮೂನ್, ಜಾಮೀನು ಎಂದು ಓಡಾಡುತ್ತಿದ್ದರೆ ಜನರೇ ನಿಮಗೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments