Tuesday, July 28, 2026
Homeನಿಮ್ಮ ಜಿಲ್ಲೆಎನರ್ಜಿ ಡ್ರಿಂಕ್ ವಿರುದ್ಧ ರಾಜ್ಯಮಟ್ಟದ ಜಾಗೃತಿ: ಶಾಲೆಗಳ ಸುತ್ತ ನಿಷೇಧ ಹೇರಿದ ಮಹಾರಾಷ್ಟ್ರ; ನಾರಾಯಣಪುರ ಯುವಕರಿಂದ...

ಎನರ್ಜಿ ಡ್ರಿಂಕ್ ವಿರುದ್ಧ ರಾಜ್ಯಮಟ್ಟದ ಜಾಗೃತಿ: ಶಾಲೆಗಳ ಸುತ್ತ ನಿಷೇಧ ಹೇರಿದ ಮಹಾರಾಷ್ಟ್ರ; ನಾರಾಯಣಪುರ ಯುವಕರಿಂದ ಮಾದರಿ ನಿರ್ಧಾರ

ಬೆಂಗಳೂರು/ಮುಂಬೈ: ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುವ ‘ಸ್ಟಿಂಗ್’ ಸೇರಿದಂತೆ ವಿವಿಧ ಎನರ್ಜಿ ಡ್ರಿಂಕ್‌ಗಳ ವಿರುದ್ಧ ರಾಜ್ಯಾದ್ಯಂತ ಜನಾಭಿಪ್ರಾಯ ಬಲಗೊಂಡಿದೆ. ಮಹಾರಾಷ್ಟ್ರ ಸರ್ಕಾರವು ಶಾಲೆಗಳ 500 ಮೀಟರ್ ವ್ಯಾಪ್ತಿಯಲ್ಲಿ ಇಂತಹ ಪಾನೀಯಗಳ ಮಾರಾಟವನ್ನು ನಿಷೇಧಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದೇ ಹೊತ್ತಿನಲ್ಲಿ, ನಾರಾಯಣಪುರ ಗ್ರಾಮದ ಯುವಕರು ಸ್ವಯಂಪ್ರೇರಿತರಾಗಿ ಅಖಾಡಕ್ಕೆ ಇಳಿದಿದ್ದು, ಎನರ್ಜಿ ಡ್ರಿಂಕ್‌ಗಳ ನಿಷೇಧಕ್ಕೆ ಆಗ್ರಹಿಸಿ ಹೋರಾಟ ತೀವ್ರಗೊಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಕಠಿಣ ನಿಲುವು

ಮಕ್ಕಳ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಮಹಾರಾಷ್ಟ್ರ ಸರ್ಕಾರವು ಶಾಲೆಗಳ 500 ಮೀಟರ್ ವ್ಯಾಪ್ತಿಯಲ್ಲಿ ಸ್ಟಿಂಗ್ ಸೇರಿದಂತೆ ಯಾವುದೇ ಮಾದಕ ಗುಣಗಳಿರುವ ಎನರ್ಜಿ ಡ್ರಿಂಕ್‌ಗಳ ಮಾರಾಟವನ್ನು ನಿಷೇಧಿಸಿದೆ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ವಿಕ್ರಮ್ ಪಾಚಪುತೆ ಅವರ ಪ್ರಶ್ನೆಗೆ ಉತ್ತರಿಸಿದ ಆಹಾರ ಮತ್ತು ಔಷಧ ಆಡಳಿತ (FDA) ಸಚಿವ ನರಹರಿ ಜಿರ್ವಾಲ್, “ಅತಿಯಾದ ಕೆಫೀನ್ ಮತ್ತು ಸಕ್ಕರೆ ಅಂಶವಿರುವ ಇಂತಹ ಪಾನೀಯಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿವೆ. ಹೀಗಾಗಿ ಇವುಗಳ ಮಾರಾಟವನ್ನು ಕಟ್ಟುನಿಟ್ಟಾಗಿ ತಡೆಯಲಾಗುವುದು,” ಎಂದು ಘೋಷಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ಪತ್ರಕರ್ತ ಅಮರೇಶಣ್ಣ ಕಾಮನಕೇರಿ ಅವರ ಎಚ್ಚರಿಕೆ

ಈ ವಿಷಯದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯ ಬುಡಕಟ್ಟು ಸಂರಕ್ಷಾಣಾ ಸಮಿತಿ ರಾಜ್ಯಾಧ್ಯಕ್ಷರು ಪತ್ರಕರ್ತರು , ಸಾಮಾಜಿಕ ಹೋರಾಟಗಾರಾದ ಅಮರೇಶಣ್ಣ ಕಾಮನಕೇರಿ ಅವರು, ಸರ್ಕಾರಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. “ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕೆಫೀನ್ ಯುಕ್ತ ಪಾನೀಯಗಳ ಮೇಲೆ ಕೇವಲ ಶಾಲೆಗಳ ಸುತ್ತ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಸರ್ಕಾರ ಕೂಡಲೇ ನಿಷೇಧ ಹೇರಬೇಕು,” ಎಂದು ಅವರು ಆಗ್ರಹಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ಕಂಪನಿಗಳ ಲಾಭಕ್ಕಾಗಿ ನಮ್ಮ ಅಮಾಯಕ ಮಕ್ಕಳ ಜೀವವನ್ನು ಬಲಿ ಕೊಡುವುದನ್ನು ಸಹಿಸಲು ಸಾಧ್ಯವಿಲ್ಲ. ಶಾಲಾ ಕಾಲೇಜುಗಳ ಹತ್ತಿರ ಅಂಗಡಿಗಳ ಮಾಲೀಕರು ಇವುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಒಂದು ವೇಳೆ ಈ ವಿಷಪೂರಿತ ಪಾನೀಯಗಳ ಮಾರಾಟ ಮುಂದುವರಿದರೆ, ಇದರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ,” ಎಂದು ಎಚ್ಚರಿಸಿದ್ದಾರೆ.

ನಾರಾಯಣಪುರ ಯುವಕರ ಮಾದರಿ ಸಂಕಲ್ಪ
ನಾರಾಯಣಪುರ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಎನರ್ಜಿ ಡ್ರಿಂಕ್ ಸೇವನೆಯ ನಂತರ ಸಂಭವಿಸಿದ ದುರಂತ ಸಾವು ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯಿಂದ ಎಚ್ಚೆತ್ತ ಯುವಕರು ಸಂಘಟಿತರಾಗಿದ್ದಾರೆ:

ಮಾರಾಟಕ್ಕೆ ಬ್ರೇಕ್: ಗ್ರಾಮದ ಯಾವುದೇ ಅಂಗಡಿಗಳಲ್ಲಿ ಇನ್ನು ಮುಂದೆ ಸ್ಟಿಂಗ್ ಅಥವಾ ಇತರೆ ಹಾನಿಕಾರಕ ಎನರ್ಜಿ ಡ್ರಿಂಕ್‌ಗಳನ್ನು ಮಾರಾಟ ಮಾಡಬಾರದು ಎಂದು ಅಂಗಡಿ ಮಾಲೀಕರಿಗೆ ಗಡುವು ನೀಡಿದ್ದಾರೆ.

ಶಪಥ: “ಗ್ರಾಮದ ಯಾವುದೇ ಯುವಕ ಅಥವಾ ವಿದ್ಯಾರ್ಥಿ ಇಂತಹ ವಿಷಪೂರಿತ ಪಾನೀಯಗಳನ್ನು ಕುಡಿಯುವುದಿಲ್ಲ” ಎಂದು ಯುವಕರು ಬಹಿರಂಗವಾಗಿ ಅಗ್ನಿ ಮುಂದೆ ಶಪಥ ಸ್ವೀಕರಿಸಿದ್ದಾರೆ.

ಜಾಗೃತಿ ಅಭಿಯಾನ: ರಾಜ್ಯ ಪ್ರತಿ ಗ್ರಾಮದ ಯುವಕರು ಸಾಮಾಜಿಕ ಹೋರಾಟಗಾರರು ತಮ್ಮ‌ ಗ್ರಾಮಗಳಲ್ಲಿ ಜಾಗೃತಿ ಅಭಿಯಾನ ಮಾಡಬೇಡಬೇಕು ಯುವಕರು, ಮನೆಮನೆಗೆ ತೆರಳಿ ಈ ಪಾನೀಯಗಳ ಅಪಾಯದ ಬಗ್ಗೆ ಅರಿವು ಮೂಡಿಸಬೇಕು.

ನಾರಾಯಣಪುರ ಗ್ರಾಮದ ಯುವಕರ ಈ ನಿರ್ಧಾರ ರಾಜ್ಯದ ಯುವ ಜನತೆಗೆ ಸ್ಫೂರ್ತಿಯಾಗಬೇಕು. ಕೆಪಿನ ಮುಕ್ತ ಎನರ್ಜಿ ಡ್ರಿಂಕ್ ಕರ್ನಾಟಕ ರಾಜ್ಯಾದ್ಯಂತ ಮಾಡಲಾಗುತ್ತದೆ ಮಕ್ಕಳ ಭವಿಷ್ಯ ದೃಷ್ಟಿಯಿಂದ ಎಲ್ಲರೂ ದನಿಯಾಗಬೇಕು ಎಂದು ಅಮರೇಶಣ್ಣ ಕಾಮನಕೇರಿ ಕರೆ ನೀಡಿದ್ದಾರೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು, ಮಹಾರಾಷ್ಟ್ರದ ಮಾದರಿಯಲ್ಲಿ ರಾಜ್ಯದಲ್ಲೂ ಕಠಿಣ ನಿಯಮ ಜಾರಿಗೆ ತರಬೇಕೆಂಬುದು ಅಮರೇಶಣ್ಣ ಕಾಮನಕೇರಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments