Friday, October 16, 2026
Homeಸುದ್ದಿಶ್ರೀವೆಂಕಟೇಶ್ವರ ಕಾಲೇಜು: 74 ಯುನಿಟ್ ರಕ್ತ ಸಂಗ್ರಹ

ಶ್ರೀವೆಂಕಟೇಶ್ವರ ಕಾಲೇಜು: 74 ಯುನಿಟ್ ರಕ್ತ ಸಂಗ್ರಹ

ಕೆ.ಆರ್.ಪುರ: ಪ್ರಸ್ತುತ ದಿನಗಳಲ್ಲಿ ರಕ್ತದಾನದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಶ್ರೀವೆಂಕಟೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ವಿ.ಮುನಿಸ್ವಾಮಿ ಹೇಳಿದರು.

ಕೆ.ಆರ್.ಪುರದ ಶ್ರೀವೆಂಕಟೇಶ್ವರ ಕಾಲೇಜಿನಲ್ಲಿ ಯುವ ರೆಡ್‌ ಕ್ರಾಸ್‌ ಮತ್ತು ಎನ್ಎಸ್ಎಸ್ ಘಟಕ ಹಾಗೂ ನಾರಾಯಣ ಹೃದಯಲಯ ರಕ್ತ ಭಂಡಾರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅಪಘಾತ, ಜೀವನ್ಮರಣದಿಂದ ನಲುಗುತ್ತಿರುವ ವ್ಯಕ್ತಿಗಳಿಗೆ ಅವಶ್ಯವಾಗಿ ರಕ್ತ ಬೇಕಾಗುವುದರಿಂದ ರಕ್ತದಾನದ ಮಹತ್ವ ಅರಿತು ಪ್ರತಿಯೊಬ್ಬರೂ ರಕ್ತದಾನ ಮಾಡಬೇಕಿದೆ. ರಕ್ತದಾನದಿಂದ ಜೀವ ಉಳಿಸಿದಂತಾಗುತ್ತದೆ ಎಂದರು‌.

ರಕ್ತದಾನ ಶಿಬಿರದಲ್ಲಿ ಕಾಲೇಜು ವಿದ್ಯಾರ್ಥಿಗಳು, ಪೋಷಕರು ರಕ್ತದಾನ ಮಾಡಿದರು. ಒಟ್ಟು ಸಂಗ್ರಹವಾದ 74 ಯುನಿಟ್ ರಕ್ತವನ್ನು ರಕ್ತ ಭಂಡಾರಕ್ಕೆ ನೀಡಲಾಯಿತು. ಅರೋಗ್ಯ ಶಿಬಿರದಲ್ಲಿ ಇಸಿಜಿ, ಬಿಪಿ, ಶುಗರ್ ತಪಾಸಣೆ ನಡೆಯಿತು.

ಈ ಸಂದರ್ಭದಲ್ಲಿ ಕಾಲೇಜು ನಿರ್ದೇಶಕ ವಿ.ಎಂ.ರವಿ, ಪದವಿ ಪ್ರಾಂಶುಪಾಲ ಸತ್ಯಶೀಲನಾಯರ್, ಕಾಲೇಜು ಪ್ರಾಂಶುಪಾಲ ಡಾ.ಜಿ.ಇ.ಪ್ರಕಾಶ್, ಉಪ ಪ್ರಾಂಶುಪಾಲ ಚಂದ್ರಯ್ಯ, ನಾಗಾರ್ಜುನ್ ಎಂ, ರಮೇಶ್, ಮಂಜುನಾಥ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments