ಮುಂಡಗೋಡ: ಮುಂಡಗೋಡ ತಾಲೂಕಿನ ತಹಶೀಲ್ದಾರ್ ಕಚೇರಿ ಪ್ರಮುಖ ಆಡಳಿತಾತ್ಮಕ ಹುದ್ದೆಗಳು ಸೇರಿದಂತೆ ಒಟ್ಟು 11 ಹುದ್ದೆಗಳು ಖಾಲಿ ಇರುವುದರಿಂದ ಕಚೇರಿಯ ಆಡಳಿತ ಕಾರ್ಯಗಳು ಹಾಗೂ ಸಾರ್ವಜನಿಕ ಸೇವೆಗಳ ನಿವಾರಣೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಹಲವು ತಿಂಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಸಿಬ್ಬಂದಿ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತದೆ. ಇರುವ ಸಿಬ್ಬಂದಿ ಮೇಲೆ ಹೆಚ್ಚಿನ ಕೆಲಸದ ಒತ್ತಡ ಬೀಳುತ್ತದೆ. ಲಭ್ಯ ಮಾಹಿತಿಯಂತೆ ಗ್ರೇಟ್- 2 ತಹಶೀಲ್ದಾರ್ 1 ಹುದ್ದೆ. ಉಪ ತಹಸಿಲ್ದಾರ್ 3 ಹುದ್ದೆಗಳು. ಪ್ರಥಮ ದರ್ಜೆ ಸಹಾಯಕ ( ಎಫ್ ಡಿಸಿ )2 ಹುದ್ದೆಗಳು. ದ್ವಿತೀಯ ದರ್ಜೆ ಸಹಾಯಕ ( ಎಫ್ ಡಿ ಸಿ )1 ಹುದ್ದೆ. ಆಹಾರ ನಿರೀಕ್ಷಕರ 1 ಹುದ್ದೆ. ಆಹಾರ ನಿರೀಕ್ಷಕರ ವಿಭಾಗದ ಎಫ್ ಡಿ ಸಿ 1 ಹುದ್ದೆ ಹಾಗೂ ಅಂಕಿ ಅಂಶ -ವಿಭಾಗದ ಬೆರಳಚ್ಚುಗಾರರ 2 ಹುದ್ದೆಗಳು ಖಾಲಿ ಇವೆ.
ತಹಶೀಲ್ದಾರ್ ಕಛೇರಿ ತಾಲೂಕ ಮಟ್ಟದ ಪ್ರಮುಖ ಆಡಳಿತ ಕೇಂದ್ರವಾಗಿದ್ದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ನಿವಾಸ ಪ್ರಮಾಣ ಪತ್ರ, ಭೂ ದಾಖಲೆಗಳಿಗೆ ಸಂಬಂಧಿಸಿದಂತ ಅರ್ಜಿಗಳು. ವಿಪತ್ತು ನಿವಾರಣೆ ಚುನಾವಣೆ. ಆಹಾರ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳು ಅನುಷ್ಠಾನಕ್ಕೆ ಸಂಬಂಧಿಸಿದಂತ ಕಾರ್ಯನಿರ್ವಹಿಸ್ತಾ ಇದ್ದು. ಆದರೆ ಸಿಬ್ಬಂದಿ ಕೊರತೆಯಿಂದ ಕಡಿತಗಳ ವೀಲವಾರಿ ವಿಳಂಬವಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ .
ವಿಶೇಷವಾಗಿ ಉಪತಶಿಲ್ದಾರ್ ಮತ್ತು ಎಫ್ ಡಿ ಸಿ ಹುದ್ದೆಗಳು ಖಾಲಿ ಇರುವುದರಿಂದ ವಿವಿಧ ಭಾಗಗಳ ಕಾರ್ಯನಿವಾರಣೆಯಲ್ಲಿ ಒತ್ತಡ ಹೆಚ್ಚಾಗುತ್ತಾ ಇದೆ. ಬೆರಳು ಹೆಚ್ಚು ಗಾರರು ಹುದ್ದೆಗಳು ಖಾಲಿ ಇರುವುದರಿಂದ ದಾಖಲೆಗಳು ತಯಾರಿ ಮತ್ತು ಕಚೇರಿ ಕಾರ್ಯಗಳಿಗೂ ತೊಂದರೆ ಉಂಟಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ತಾಲೂಕಿನ ಸಾವಿರಾರು ಜನತೆ ಪ್ರತಿನಿತ್ಯ ವಿವಿಧ ಕೆಲಸಗಳಿಗಾಗಿ ತಹಶೀಲ್ದಾರ್ ಕಚೇರಿಗೆ ತೆರಳಿತಾ ಇದ್ದು. ಅಗತ್ಯ ಸಿಬ್ಬಂದಿ ಇಲ್ಲದ ಕಾರಣ ಕೆಲ ಸೇವೆಗಳು ನಿರೀಕ್ಷಿತ ವೇಗದಲ್ಲಿ ದೊರೆಯುತ್ತಿಲ್ಲ. ಹೀಗಾಗಿ ಸರ್ಕಾರ ತಕ್ಷಣವೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಆಡಳಿತ ವ್ಯವಸ್ಥೆ ಬಲಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ . .
ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಸೇವೆಗೆ ಯಾವುದೇ ರೀತಿ ತೊಂದರೆ ಉಂಟಾಗಿಲ್ಲ. ಲಭ್ಯವಿರುವ ಸಿಬ್ಬಂದಿ ಮೂಲಕವೇ ಎಲ್ಲಾ ವಿಭಾಗಗಳಲ್ಲಿ ಸಮನ್ವಯದಿಂದ ಕೆಲಸ ನಿರ್ವಹಿಸಲಾಗ್ತಾ ಇದೆ. ಕಚೇರಿಗೆ ಬರುವ ನಾಗರೀಕರ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಲಾಗುತ್ತಿದ್ದು. ಜಾತಿ ಆದಾಯ ನಿವಾಸ ಪ್ರಮಾಣ ಪತ್ರ ಸೇರಿದಂತೆ ಇತರೆ ಸೇವೆಗಳಲ್ಲಿಯೂ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗಿದೆ. – ಎಸ್ಎ ಪ್ರಸಾದ್ ತಹಶೀಲ್ದಾರ್ ಮುಂಡಗೋಡ .
ವರದಿ: ಬಿ ಎಸ್ ತೋಟಯ್ಯನವರ ಮುಂಡಗೋಡ

