ಲಖನೌ, ಅಕ್ಟೋಬರ್ 27: ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಹಾಗೂ ನಾಯಕತ್ವ ಗುರುತಿಸಿ ಪ್ರಶಸ್ತಿ ಪ್ರದಾನ, ಮಾಧ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಯಾದವ್ ವಿಷನ್ ಮೀಡಿಯಾ ಕನ್ನಡದ ಪ್ರಾದೇಶಿಕ ಮುಖ್ಯಸ್ಥರಾದ ಕನ್ನಡಿಗ ಶಿವ ಯಾದವ್ ಅವರಿಗೆ ಪ್ರತಿಷ್ಠಿತ ‘ಟ್ರೂವರ್ತ್ ಯೂನಿವರ್ಸಲ್ ಅಚೀವ್ಮೆಂಟ್ ಅವಾರ್ಡ್–2026’ ನೀಡಿ ಗೌರವಿಸಲಾಗಿದೆ.
ಉತ್ತರ ಪ್ರದೇಶದ ಲಖನೌನಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ರೂವರ್ತ್ ವೆಲ್ನೆಸ್ ಫೌಂಡೇಶನ್ ವತಿಯಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. 2026ರ ಅಕ್ಟೋಬರ್ 27ರಂದು ಪ್ರಶಸ್ತಿ ಪ್ರಮಾಣಪತ್ರವನ್ನು ವಿತರಿಸಲಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಅವರ ನಾಯಕತ್ವ, ವೃತ್ತಿಪರ ಬದ್ಧತೆ ಹಾಗೂ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಪ್ರಾದೇಶಿಕ ಪತ್ರಿಕೋದ್ಯಮವನ್ನು ಉತ್ತೇಜಿಸುವುದು, ಮಾಧ್ಯಮದ ವ್ಯಾಪ್ತಿಯನ್ನು ವಿಸ್ತರಿಸುವುದು, ಸಮಾಜದ ಮಹತ್ವದ ವಿಚಾರಗಳು ಮತ್ತು ಜನರ ಧ್ವನಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕನ್ನಡಿಗ ಶಿವ ಯಾದವ್ ಅವರ ಪ್ರಯತ್ನಗಳನ್ನು ಪ್ರಶಸ್ತಿ ಪ್ರಮಾಣಪತ್ರದಲ್ಲಿ ಶ್ಲಾಘಿಸಲಾಗಿದೆ.
ಮಾಧ್ಯಮ ಕ್ಷೇತ್ರದಲ್ಲಿ ಗುಣಮಟ್ಟದ ಸುದ್ದಿಗಳ ಪ್ರಸಾರ, ಸಾಮಾಜಿಕ ಕಳಕಳಿ ಹಾಗೂ ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿರುವ ಈ ಪ್ರಶಸ್ತಿಯು ಅವರ ವೃತ್ತಿಜೀವನಕ್ಕೆ ಮತ್ತೊಂದು ಗರಿಮೆ ತಂದಿದೆ.
ಈ ಗೌರವವು ಮುಂದಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡಲಿದೆ ಎಂಬ ಆಶಯ ವ್ಯಕ್ತವಾಗಿದೆ. ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಕನ್ನಡಿಗ ಶಿವ ಯಾದವ್ ಅವರಿಗೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅಭಿಮಾನಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಕನ್ನಡಿಗ ಶಿವ ಯಾದವ್ ಅವರಿಗೆ ‘ಟ್ರೂವರ್ತ್ ಯೂನಿವರ್ಸಲ್ ಅಚೀವ್ಮೆಂಟ್ ಅವಾರ್ಡ್–2026’ ಗೌರವ
RELATED ARTICLES

