ಮುದ್ದೇಬಿಹಾಳ: ತಾಲೂಕು ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜಕ್ಕೆ ನೂತನ ಪದಾಧಿಕಾರಿಗಳನ್ನು ಇಲ್ಲಿನ ಆಲಮಟ್ಟಿ ರಸ್ತೆ ಪಕ್ಕದಲ್ಲಿರುವ ಬಿರಾದಾರ ಮಂಗಲ ಕಾರ್ಯಾಲಯದಲ್ಲಿ ಈಚೆಗೆ ನಡೆದ ಸಮಾಜ ಬಾಂಧವರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕಂದಗನೂರ ಗ್ರಾಮದ ಶಂಕರಗೌಡ ಶಿವಣಗಿ, ಉಪಾಧ್ಯಕ್ಷರಾಗಿ ನೇಬಗೇರಿಯ ಮಲ್ಲಿಕಾರ್ಜುನ ಹಂಡರಗಲ್ಲ, ಕುಂಟೋಜಿಯ ಮಲ್ಲನಗೌಡ ಎಸ್.ಬಿರಾದಾರ, ಪ್ರಧಾನ ಕಾರ್ಯದರ್ಶಿಗಳಾಗಿ ಕೋಳೂರನ ಆರ್.ಎಸ್.ಬಿರಾದಾರ, ಹುಲ್ಲೂರನ ಭೀಮನಗೌಡ ಕೊಡಗಾನೂರ, ಸಹ ಕಾರ್ಯದರ್ಶಿಯಾಗಿ ಯರಗಲ್ಲದ ಚಂದ್ರು ಡಮನಾಳ, ಖಜಾಂಚಿಯಾಗಿ ಮುದ್ದೇಬಿಹಾಳದ ಹುಲ್ಲನಗೌಡ ಪಾಟೀಲ ಆಯ್ಕೆಯಾದರು. ಸದಸ್ಯರಾಗಿ ಕುಂಟೋಜಿಯ ಈರನಗೌಡ ಪಾಟೀಲ, ಬನೋಶಿಯ ಮಾನಪ್ಪಗೌಡ ಬಿರಾದಾರ, ತಂಗಡಗಿಯ ಚಂದ್ರಶೇಖರ ಗೋನಾಳ, ಬಿದರಕುಂದಿಯ ಗುರುಸಂಗಪ್ಪಗೌಡ ಬಿರಾದಾರ, ಕಂದಗನೂರನ ಸುರೇಶ ಸುಳಖೋಡ, ಹಳ್ಳೂರನ ಆರ್.ಎ.ರೂಢಗಿ, ಯರಝರಿಯ ಸದಾನಂದ ಪಾಟೀಲ, ವಣಕ್ಯಾಳದ ಶೇಷಪ್ಪಗೌಡ ಪಾಟೀಲ, ಶಿರೋಳದ ಮಹಾಂತಗೌಡ ಎಂ.ಬಿರಾದಾರ ಅವರನ್ನು ಆಯ್ಕೆ ಮಾಡಲಾಯಿತು. ಸಮಾಜದ ಹಿರಿಯರಾದ ಆರ್.ಬಿ.ಪಾಟೀಲ ವಕೀಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಗಮೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಟಿ.ಬಿರಾದಾರ, ನಿವೃತ್ತ ಪ್ರಾಂಶುಪಾಲರಾದ ಎಸ್.ಎಸ್.ಹೊಸಮನಿ, ಸಹಕಾರ ಇಲಾಖೆಯ ನಿವೃತ್ತ ಉಪನಿಬಂಧಕ ಪಿ.ಬಿ.ಕಾಳಗಿ, ಪ್ರಮುಖರಾದ ಬಿ.ಸಿ.ಡಮನಾಳ, ಸಿದ್ದರಾಮಗೌಡ ಪಾಟೀಲ, ಎಸ್.ಬಿ.ಹಂಡರಗಲ್ಲ, ಈರನಗೌಡ ಪಾಟೀಲ, ಎಂ.ಬಿ.ಬಿರಾದಾರ ವಕೀಲರು, ಮನೋಹರ ಪಾಟೀಲ, ಸಂಗನಗೌಡ ಪಾಟೀಲ, ಸಿ.ಎಲ್.ಬಿರಾದಾರ, ಆರ್.ಎಂ.ಪಾಟೀಲ, ಭೀಮನಗೌಡ ಮ್ಯಾಗೇರಿ, ಮಂಜುನಾಥಪ್ಪಗೌಡ ಪೊಲೀಸಪಾಟೀಲ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಮಾಜ ಬಾಂಧವರು ಇದ್ದರು. ಇದೇ ಸಂದರ್ಭ ಸಮಾಜದ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಎಂ.ಬಿ.ಬಿರಾದಾರ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ನೂತನ ಅಧ್ಯಕ್ಷ ಶಂಕರಗೌಡ ಮಾತನಾಡಿ, ಸಂಘವನ್ನು ಹಿರಿಯರು ಬಲಿಷ್ಠವಾಗಿ ಕಟ್ಟಿದ್ದಾರೆ. ಅದನ್ನು ಇನ್ನಷ್ಟು ಹೆಚ್ಚು ಗಟ್ಟಿಯಾಗಿ ಬೆಳೆಸುವಲ್ಲಿ ಸಂಘಟನಾತ್ಮಕವಾಗಿ ಎಲ್ಲರನ್ನೂ ಜೊತೆಗೂಡಿಸಿಕೊಂಡು ಶ್ರಮಿಸುವೆ ಎಂದು ತಿಳಿಸಿದರು. 14ಎಂಯುಡಿ6 ಮುದ್ದೇಬಿಹಾಳ: ತಾಲೂಕು ಹಂಡೇವಜೀರ ಸಮಾಜದ ನೂತನ ಅಧ್ಯಕ್ಷ ಶಂಕರಗೌಡ ಶಿವಣಗಿ, ಇನ್ನಿತರ ಪದಾಧಿಕಾರಿಗಳನ್ನು ಸನ್ಮಾನಿಸಿ ಶುಭ ಕೋರಲಾಯಿತು.
ಹಂಡೆ ವಜೀರ ಸಮಾಜಕ್ಕೆ ಅಧ್ಯಕ್ಷರಾಗಿ ಕಂದಗನೂರನ ಶಂಕರಗೌಡ ಶಿವಣಗಿ ಅವಿರೋಧ ಆಯ್ಕೆ
RELATED ARTICLES

