ಮಲ್ಲಾ (ಬಿ), ಅಕ್ಟೋಬರ್ 27, 2026: ಸುರಪುರ ತಾಲೂಕಿನ ಮಲ್ಲಾ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿವು ಕೇಂದ್ರದಲ್ಲಿ ದಿನಾಂಕ 27-10-2026 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಸಹಯೋಗದೊಂದಿಗೆ ಕಲಿಕಾ ಟಾಟಾ ಟ್ರಸ್ಟ್ ಆಯೋಜಿಸಿರುವ ಗ್ರಾಮ ಹಿರಿಯರ ಕೇಂದ್ರ (GHK) ಕಾರ್ಯಕ್ರಮದಡಿ ಹಿರಿಯ ನಾಗರಿಕರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಜಯಚಾರ್ ಪುರೋಹಿತ್ ವಹಿಸಿದ್ದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಾಂತೇಶ್ ಪಾಟೀಲ್, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಹಿರಿಯರ ಕೇಂದ್ರದ (GHK) ಉದ್ದೇಶ, ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳು, ಯೋಗ, ಆರೋಗ್ಯದ ಕಾಳಜಿ ಹಾಗೂ ಕಲಿಕಾ ಟಾಟಾ ಟ್ರಸ್ಟ್ ವತಿಯಿಂದ ನೀಡಲಾಗಿರುವ ವಿವಿಧ ಕಿಟ್‌ಗಳ ಬಳಕೆ ಮತ್ತು ಅವುಗಳಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ 78ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡ ಶ್ರೀ ಹಳ್ಳೆಪ್ಪ ದೋರನಹಳ್ಳಿ ಅವರನ್ನು ಗೌರವಿಸಲಾಯಿತು. ಇದೇ ವೇಳೆ ರಾಜೇಂದ್ರ ಸ್ವಾಮಿ ಹಿರೇಮಠ, ನಿಂಗನಗೌಡ ಹಂಡಿ, ಅಯ್ಯಪ್ಪ ಪೂಜಾರಿ, ಶೇಖರ್ ಅಮಲಿಹಾಳ್, ನಿಂಗನಗೌಡ ಬಿರಾದಾರ್, ಲಾಲ್‌ಸಾಬ್ ಮುಜಾವರ್, ಮಾಂತೇಶ್ ಪೂಜಾರಿ, ಗುರಣಗೌಡ ಚೌದರಿ, ನಿಂಗಪ್ಪ ಸಾವಶೆಟ್ಟಿ, ಶಿವಣ್ಣ ಪತ್ತಾರ್ ಹಾಗೂ ನಿಂಗನಗೌಡ ಮಾಲಿಪಾಟೀಲ್ ಸೇರಿದಂತೆ ಹಲವಾರು ಹಿರಿಯ ನಾಗರಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಾದ ಶರಣಬಸವ ಸಾಹುಕಾರ್ ರವರು ಸ್ವಾಗತ ಕೋರಿದರು ಮತ್ತು. ಪ್ರೇರಕರಾದ ಪರಮಾನಂದ ತಳವಾರ ಅವರು ಗ್ರಾಮ ಹಿರಿಯರ ಕೇಂದ್ರದ ಚಟುವಟಿಕೆಗಳು ಹಾಗೂ ಕಲಿಕಾ ಟಾಟಾ ಟ್ರಸ್ಟ್ ವತಿಯಿಂದ ನೀಡಲಾಗಿರುವ ಕಿಟ್‌ಗಳ ಉಪಯೋಗಗಳ ಕುರಿತು ವಿವರಿಸಿದರು.
ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಹಿರಿಯ ನಾಗರಿಕರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಭಾಗವಹಿಸಿ ಸಹಕರಿಸಿದ ಎಲ್ಲರಿಗೂ ಆಯೋಜಕರ ವತಿಯಿಂದ ವಂದನೆಗಳನ್ನು ಸಲ್ಲಿಸಲಾಯಿತು.
ವರದಿ: ವಿಜಯಕುಮಾರ ದರ್ಶನಾಪುರ

