ಮುದ್ದೇಬಿಹಾಳ: ಪಟ್ಟಣದ ವಿಜಯಪುರ ರಸ್ತೆ ಪಕ್ಕದಲ್ಲಿರುವ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ಮಾ.1 ರಂದು ಸಂಜೆ 4 ಘಂಟೆಗೆ ತಾಲೂಕಿನ ಎಲ್ಲ ಗುತ್ತಿಗೆದಾರರ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಮಾ.6ರಂದು ನಡೆಯಲಿರುವ ರಾಜ್ಯ ಗುತ್ತಿಗೆದಾರರ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಕುರಿತು ಚರ್ಚಿಸಲಾಗುತ್ತದೆ ಎಂದು ಮುದ್ದೇಬಿಹಾಳ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಇಂಗಳಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪೂರ್ವಭಾವಿ ಸಭೆಯಲ್ಲಿ ಸಂಘದ ವಿಜಯಪುರ ಜಿಲ್ಲಾ ಘಟಕದ ಖಜಾಂಚಿ ಐ.ಎಂ.ಪಟ್ಟಣಶೆಟ್ಟಿ, ನಿರ್ದೇಶಕರಾದ ಆರ್.ಬಿ.ಅಸ್ಕಿ, ಆರ್.ಎಂ.ಮಾವಿನಗಿಡದ, ಜೆ.ಜಿ.ಕಲ್ಲೂರ, ಮುಖಂಡರಾದ ಎ.ಬಿ.ನರಸರೆಡ್ಡಿ, ಸಿ.ಎಸ್.ನ್ಯಾಮಣ್ಣವರ್, ಎಸ್.ಎಸ್.ಕುಂಬಾರ ಅವರು ಜಿಲ್ಲಾಧ್ಯಕ್ಷರಾದ ಸಿ.ಆರ್.ರೂಢಗಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ಎಸ್.ಐ.ಡೋಣೂರಮಠ, ಜಿಲ್ಲಾ ಗೌರವಾಧ್ಯಕ್ಷರಾದ ಅರುಣ ಎಸ್.ಮಠ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಐ.ಎಂ.ಪಟ್ಟಣಶೆಟ್ಟಿ ಅವರು ಸೂಚನೆ ಮೇರೆಗೆ ಆಗಮಿಸಿ ತಾಲೂಕು ಘಟಕದ ಪದಾಧಿಕಾರಿಗಳು, ಸದಸ್ಯರ ಜೊತೆ ಚರ್ಚಿಸುವರು. ಇದೇ ವೇಳೆ ಸಂಘಕ್ಕೆ ಗುತ್ತಿಗೆದಾರರ ನೋಂದಣಿ ಕಾರ್ಯವನ್ನೂ ನಡೆಸಲಾಗುತ್ತದೆ. ಕಾರಣ ತಾಲೂಕಿನ ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂರ್ವಭಾವಿ ಸಭೆ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
–
ವರದಿ: ಮುತ್ತು ವಡವಡಗಿ-ಮೋ:9880143505

