Saturday, August 15, 2026
Homeನಿಮ್ಮ ಜಿಲ್ಲೆಬೇಜವಾಬ್ದಾರಿತನ ಬಿಡದಿದ್ದರೆ ಹೋರಾಟ ನಿಲ್ಲದು :: ಈ ಸರಕಾರಕ್ಕೆ ರೈತರ ಕಾಳಜಿ ಕಿಂಚಿತ್ತಾದರೂಇದೆಯೇ-ಸುಮಲತಾ ಅಂಬರೀಷ್

ಬೇಜವಾಬ್ದಾರಿತನ ಬಿಡದಿದ್ದರೆ ಹೋರಾಟ ನಿಲ್ಲದು :: ಈ ಸರಕಾರಕ್ಕೆ ರೈತರ ಕಾಳಜಿ ಕಿಂಚಿತ್ತಾದರೂಇದೆಯೇ-ಸುಮಲತಾ ಅಂಬರೀಷ್

ಮಂಡ್ಯ: ಈ ಸರಕಾರಕ್ಕೆ ಕಿಂಚಿತ್ತಾದರೂ ರೈತರ ಕಾಳಜಿ ಇದೆಯೇ ಎಂದು ಮಾಜಿ ಸಂಸದರಾದ ಸುಮಲತಾ ಅಂಬರೀಷ್ ಅವರು ಪ್ರಶ್ನಿಸಿದ್ದಾರೆ.
ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಇಂದು ಶ್ರೀರಂಗಪಟ್ಟಣದ ಕೆ.ಆರ್.ಎಸ್ ಡ್ಯಾಂ ಬಳಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೀವು ರೈತರ ಮತ ಇಲ್ಲದೇ ಸರಕಾರ ರಚಿಸಿದ್ದೀರಾ ಎಂದು ಕೇಳಿದರು.
ಸರಕಾರ ಬಂದು 3 ವರ್ಷ ಕಳೆದರೂ ಮೇಕೆದಾಟು ಯೋಜನೆ ಕುರಿತು ಗಮನ ಕೊಡುತ್ತಿಲ್ಲ. ಇನ್ನೊಂದೆಡೆ ಬಿಡದಿ ಟೌನ್‍ಶಿಪ್ ಮಾಡಹೊರಟಿದ್ದಾರೆ ಎಂದು ಟೀಕಿಸಿದರು. ದೆಹಲಿಗೆ ಹೋಗಿ ಮುಷ್ಕರದಲ್ಲಿ ಪಾಲ್ಗೊಳ್ಳಲು ನಿಮಗೆ ಪುರುಸೊತ್ತಿದೆ. ರೈತರು ಇಷ್ಟೊಂದು ಸಂಕಷ್ಟದಲ್ಲಿದ್ದು, ಅವರ ಸಮಸ್ಯೆ ಆಲಿಸಲು ನಿಮಗೆ ಕಿವಿಯೇ ಇಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಇದು ಕೇವಲ ರೈತರ ಹೋರಾಟವಲ್ಲ; ಇದು ಜೀವನದ ಹೋರಾಟ ಎಂದು ನುಡಿದರು.
ಸರಕಾರ ಇಲ್ಲಿನ ಸಮಸ್ಯೆಗಳಿಗೆ ಉತ್ತರ ಕೊಡುವವರೆಗೆ ಹೋರಾಟ ನಿಲ್ಲಿಸಬಾರದು ಎಂದು ಮನವಿ ಮಾಡಿದರು. ಸರಕಾರ ಇದೇರೀತಿ ಬೇಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಈ ಹೋರಾಟವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments