Sunday, August 16, 2026
Homeನಿಮ್ಮ ಜಿಲ್ಲೆಪಹಣಿಯಲ್ಲಿ ಜಮೀನು ವಿಸ್ತೀರ್ಣ ಕಡಿಮೆ :ಬಾಚಣಿಕಿ ಅಣೆಕಟ್ಟಿನ ಉಪಕಾಲುವೆ ವ್ಯಾಪ್ತಿಯಲ್ಲಿ ಆರೋಪ.

ಪಹಣಿಯಲ್ಲಿ ಜಮೀನು ವಿಸ್ತೀರ್ಣ ಕಡಿಮೆ :ಬಾಚಣಿಕಿ ಅಣೆಕಟ್ಟಿನ ಉಪಕಾಲುವೆ ವ್ಯಾಪ್ತಿಯಲ್ಲಿ ಆರೋಪ.

ಮುಂಡಗೋಡ: ತಾಲೂಕಿನ ಬಾಚಣಿಕಿ ಅಣೆಕಟ್ಟಿನ ಉಪಕಾಲುವೆ ವ್ಯಾಪ್ತಿಯಲ್ಲಿ ಯಾವುದೇ ನೋಟಿಸ್ ನೀಡದೆ ಪಹಣೆ ಪತ್ರಿಕೆಯಲ್ಲಿ ಜಮೀನಿನ ವಿಸ್ತರಣ ಕಡಿಮೆ ಮಾಡಿ ಸಣ್ಣ ನೀರಾವರಿ ಇಲಾಖೆಯ ಹೆಸರನ್ನು ದಾಖಲಿಸಿ ಅಧಿಕಾರ ದುರುಪಯೋಗ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಬಸವರಾಜ್ ಸಂಗಮೇಶ್ವರ್ ಗುಡುಗಿದರು… ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ” ಇದಕ್ಕೆ ಸಂಬಂಧಿಸಿದಂತೆ ಮುಂಡಗೋಡ್ ತಹಶೀಲ್ದಾರ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಅಮಾನತ್ತು ಮಾಡಬೇಕು” ಎಂದು ಆಗ್ರಿಸಿದರು. ಅಲ್ಲದೆ ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ” ಬಾಚಣಿಕಿ ಅಣೆಕಟ್ಟಿನ ನೀರಿನಿಂದ ಇಂದೂರು. ಕೂಸುರು ಸೇರಿದಂತೆ ವಿವಿಧ ಗ್ರಾಮಗಳ ಎರಡು ಸಾವಿರ ಎಕರೆ ಪ್ರದೇಶದ 500ಕ್ಕೂ ಹೆಚ್ಚು ರೈತರು ಕೃಷಿ ಮಾಡುತ್ತಾ ಇದ್ದಾರೆ. ಕಳೆದ ಮೂರು ದಿನಗಳಲ್ಲಿ 20 ರಿಂದ 25 ರೈತರ ಪಹಣಿಯಲ್ಲಿ 2 ರಿಂದ 10 ಗುಂಟೆಯವರೆಗ ಜಮೀನಿನ ವಿಸ್ತೀರ್ಣ ಕಡಿಮೆ ಮಾಡಿ ಸಣ್ಣ ನೀರಾವರಿ ಇಲಾಖೆಯ ಹೆಸರನ್ನು ದಾಖಲಿಸಲಾಗಿದೆ. ರೈತರಿಗೆ ಯಾವುದೇ ಪರಿಹಾರ ನೀಡದೆ ಈಗ ಜಮೀನು ತೆರವುಗೊಳಿಸಲು ಮುಂದಾಗಿರುವುದು ಖಂಡನೆ ಯ ” ಎಂದರು. ಮಂಜುನಾಥ್ ನಡಿಗೇರಿ ಮಾತನಾಡಿ 500 ಎಕರೆ ವ್ಯಾಪ್ತಿಯಲ್ಲಿ ಕೇವಲ ಮೂರು ರೈತರಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಮೃತಪಟ್ಟ ರೈತನ ಹೆಸರಿಗೂ ನೋಟಿಸ್ ಜಾರಿಯಾಗಿದೆ. ತರುವುಗೊಳಿಸಲು ಗುರುತಿಸಿದ ಜಾಗದಲ್ಲಿ ತೋಟ ಮನೆ ಶಾಲೆ ಸೇರಿ ಹಲವು ಕಟ್ಟಡಗಳಿವೆ .ಈ ಜಾಗ ಭೂಸ್ವಾಧನ ನಡೆದಿದ್ದರೆ ದಾಖಲೆಗಳನ್ನು ಬೈರಂಗಪಡಿಸಬೇಕು. ಇಲ್ಲವಾದರೆ ಮಾರ್ಕೆಟ್ ದರದಲ್ಲಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು…… ಸಿಕಂದರ್ ಬಂಕಾಪುರ್. ಅಶೋಕ್ ಸುರನವರ್. ಪರಮೇಶ್ವರ ಸುಣಗಾರ. ಅಬ್ದುಲ್ ರಹೀಬ್ ಸಾಬ್ ಬಂಕಾಪುರ್ ಹನುಮಂತ್ ಕಣಕಣ್ಣವರ ಸೇರಿದಂತೆ ಹಲವರು ಭಾಗವಹಿಸಿದ್ದರು.

ವರದಿ: ಬಿ ಎಸ್ ತೋಟಯ್ಯನವರ. ಮುಂಡಗೋಡ್

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments