ಕಲಬುರ್ಗಿ :: ವಕೀಲರಾಗಿ ಸೇವೆ ಸಲ್ಲಿಸುವ ಜತೆಗೆ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾಗಿರುವ ನ್ಯಾಯವಾಗಿ ಹುಲಿಗೆಪ್ಪ ಕನಕಗಿರಿ ಅವರನ್ನು ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಬೇಕು ಎಂದು ಗುಲ್ಬರ್ಗ ವಕೀಲರ ಸಂಘ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಸ್.ವಿ.ಪಸಾರ ಹಲವು ಪದಾಧಿಕಾರಿಗಳು ಮಾತನಾಡಿದರು. ಹುಲಿಗೆಪ್ಪ ಕನಕಗಿರಿ ಈಗಾಗಲೇ ಮಹಾನಗರ ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅವರು ಹೈಕೋರ್ಟ್, ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ, ಕರ್ನಾಟಕ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯ ಪೀಠಗಳನ್ನು ಸ್ಥಾಪಿಸುವ ಹೋರಾಟಗಳಲ್ಲಿ ಮುಂಚೂಣಿಯಲ್ಲಿದವರು

ವಕೀಲರಿಗಾಗಿ ಕ್ರೀಡಾಕೂಟ, ಕುಂದುಕೊರತೆ ನಿವಾರಣೆ ಮತ್ತು ಸರಕಾರದ ಸೌಲಭ್ಯಗಳನ್ನು ಕೊಡಿಸುವಲ್ಲಿಸದಾ ಮುಂಚೂಣಿಯಲ್ಲಿರುತ್ತಾರೆ ಎಂದು ಹೇಳಿದರು.
ವಕೀಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಎಲ್.ಪೂಜಾರಿ, ಮಂಜುನಾಥ ಜಿ.ಪಾಟೀಲ, ಸಿದ್ದರಾಮ ಬಿ.ವಾಡಿ, ಮಂಜುನಾಥ ಗಿನ್ನಿ ಇದ್ದರು.

