Tuesday, October 27, 2026
Homeಸುದ್ದಿಗಾಂಧಿನಗರದ ಕನಿಷ್ಕ ಗ್ರ್ಯಾಂಡ್‌ನಲ್ಲಿ ‘ಬಸವೇಶ್ವರ ಕೆಫೆ’: ಉತ್ತರ ಕರ್ನಾಟಕದ ಅಪ್ಪಟ ರುಚಿಗೆ ಹೊಸ ತಾಣ

ಗಾಂಧಿನಗರದ ಕನಿಷ್ಕ ಗ್ರ್ಯಾಂಡ್‌ನಲ್ಲಿ ‘ಬಸವೇಶ್ವರ ಕೆಫೆ’: ಉತ್ತರ ಕರ್ನಾಟಕದ ಅಪ್ಪಟ ರುಚಿಗೆ ಹೊಸ ತಾಣ

ಬೆಂಗಳೂರು, ಅಕ್ಟೋಬರ್ 12:

ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನು ಬೆಂಗಳೂರಿನ ಆಹಾರಪ್ರಿಯರಿಗೆ ಪರಿಚಯಿಸುವ ಉದ್ದೇಶದಿಂದ ಗಾಂಧಿನಗರದ ಪ್ರತಿಷ್ಠಿತ ಕನಿಷ್ಕ ಗ್ರ್ಯಾಂಡ್ ಹೋಟೆಲ್‌ನಲ್ಲಿ ನೂತನವಾಗಿ ‘ಬಸವೇಶ್ವರ ಕೆಫೆ’ ಆರಂಭವಾಗಿದೆ.

ಉತ್ತರ ಕರ್ನಾಟಕದ ವಿಶಿಷ್ಟ ರುಚಿ, ಪೌಷ್ಟಿಕತೆ ಮತ್ತು ಸಾಂಪ್ರದಾಯಿಕ ಅಡುಗೆ ಶೈಲಿಗೆ ಹೆಸರಾಗಿರುವ ಹಲವು ಖಾದ್ಯಗಳನ್ನು ಒಂದೇ ಸೂರಿನಡಿ ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಬೆಳಗಿನ ಉಪಹಾರದಿಂದ ಮಧ್ಯಾಹ್ನ ಹಾಗೂ ರಾತ್ರಿ ಊಟದವರೆಗೆ ಅಪ್ಪಟ ಉತ್ತರ ಕರ್ನಾಟಕದ ಆಹಾರವನ್ನು ಇಲ್ಲಿ ಸವಿಯುವ ಅವಕಾಶ ಕಲ್ಪಿಸಲಾಗಿದೆ.

ಕೆಫೆಯ ಬೆಳಗಿನ ಉಪಹಾರ ವಿಭಾಗದಲ್ಲಿ ಸುಸಲಾ (ವಗರಣಿ), ಖಾರಾ ಚೂಡವಾ, ಖಡಕ್ ಗಿರಿಮಿಟ್, ಮಿರ್ಚಿ ಭಜ್ಜಿ, ಉಪ್ಪಿಟ್ಟು ಸೇರಿದಂತೆ ಹಲವು ಸಾಂಪ್ರದಾಯಿಕ ತಿನಿಸುಗಳು ಲಭ್ಯವಿವೆ. ವಿಶೇಷವಾಗಿ ಬೆಳಗಿನ ಉಪಹಾರ ಕೇವಲ ₹50ಕ್ಕೆ ನೀಡಲಾಗುತ್ತಿದ್ದು, ಉತ್ತಮ ಗುಣಮಟ್ಟದ ಆಹಾರವನ್ನು ಕೈಗೆಟುಕುವ ದರದಲ್ಲಿ ಒದಗಿಸಲಾಗಿದೆ.

ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ಜೋಳದ ರೊಟ್ಟಿ, ಕಟ್ಟಿ ರೊಟ್ಟಿ, ಮುಟಗಿ, ಎಣ್ಣೆಗಾಯಿ ಬದನೆಕಾಯಿ ಪಲ್ಯ ಸೇರಿದಂತೆ ಉತ್ತರ ಕರ್ನಾಟಕದ ಜನಪ್ರಿಯ ಖಾದ್ಯಗಳು ಸಿಗಲಿವೆ. ಜೊತೆಗೆ ಶೇಂಗಾ ಚಟ್ನಿ, ಗುರಳ್ಳು ಚಟ್ನಿ, ಅಗಸಿ ಚಟ್ನಿ ಹಾಗೂ ಹಸಿಮೆಣಸಿನಕಾಯಿ ಖಾರ ಊಟದ ರುಚಿಯನ್ನು ಮತ್ತಷ್ಟು ಹೆಚ್ಚಿಸಲಿವೆ. ಸಂಪೂರ್ಣ ಊಟದ ದರ ಕೇವಲ ₹70 ಎಂದು ನಿಗದಿಪಡಿಸಲಾಗಿದೆ.

ಕೆಫೆಯಲ್ಲಿ ಶುಚಿತ್ವ, ಗುಣಮಟ್ಟ ಹಾಗೂ ಮನೆಯ ಅಡುಗೆಯ ಸಾಂಪ್ರದಾಯಿಕ ರುಚಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಕುಟುಂಬ ಸಮೇತ ಹಾಗೂ ಸ್ನೇಹಿತರೊಂದಿಗೆ ಭೇಟಿ ನೀಡಿ ಉತ್ತರ ಕರ್ನಾಟಕದ ಅಪ್ಪಟ ಸವಿಯನ್ನು ಆಸ್ವಾದಿಸಲು ಇದು ಸೂಕ್ತ ತಾಣವಾಗಿದೆ.

ಉತ್ತರ ಕರ್ನಾಟಕದ ಆಹಾರ ಪರಂಪರೆಯನ್ನು ಬೆಂಗಳೂರಿನಲ್ಲಿ ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಆರಂಭವಾಗಿರುವ ‘ಬಸವೇಶ್ವರ ಕೆಫೆ’ಗೆ ಸಾರ್ವಜನಿಕರು ಭೇಟಿ ನೀಡಿ ಸಾಂಪ್ರದಾಯಿಕ ರುಚಿಯ ಸವಿಯನ್ನು ಅನುಭವಿಸುವಂತೆ ಬಸವೇಶ್ವರ ಕೆಫೆ ಮಾಲೀಕರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments