Tuesday, July 28, 2026
HomeUncategorizedಗಂಗಾವತಿಯ ಗ್ರಾಮೀಣ ಸಿಪಿಐ ರಂಗಪ್ಪ ಅವರಿಗೆ ಬಂಗಾರದ ಪದಕ

ಗಂಗಾವತಿಯ ಗ್ರಾಮೀಣ ಸಿಪಿಐ ರಂಗಪ್ಪ ಅವರಿಗೆ ಬಂಗಾರದ ಪದಕ

ಆತ್ಮೀಯ ಸಹೋದರ ಸಮಾನರಾದ ಶ್ರೀ ರಂಗಪ್ಪ ದೊಡ್ಡಮನಿ, ಸಿಪಿಐ, ಗಂಗಾವತಿ ಗ್ರಾಮೀಣ ಠಾಣೆ ಅವರು ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆ, ಕರ್ತವ್ಯನಿಷ್ಠೆ ಹಾಗೂ ಶ್ಲಾಘನೀಯ ಕಾರ್ಯವನ್ನು ಪರಿಗಣಿಸಿ ನೀಡಲಾಗುವ ಪ್ರತಿಷ್ಠಿತ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು (ಡಿ.ಜಿ. & ಐ.ಜಿ.ಪಿ.) ಅವರ ಶ್ಲಾಘನಾ ಚಿನ್ನದ ಪದಕಕ್ಕೆ ಆಯ್ಕೆಯಾಗಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ.
ಜನಸೇವೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೋರಿದ ನಿಮ್ಮ ಸಮರ್ಪಣೆ, ಪ್ರಾಮಾಣಿಕತೆ ಮತ್ತು ಪರಿಶ್ರಮಕ್ಕೆ ಸಂದಿರುವ ಈ ಗೌರವವು ನಿಮ್ಮ ಸೇವಾ ಬದುಕಿನ ಮತ್ತೊಂದು ಸುವರ್ಣ ಅಧ್ಯಾಯವಾಗಿದೆ.
ಈ ಅಪೂರ್ವ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉನ್ನತ ಗೌರವಗಳು ಹಾಗೂ ಯಶಸ್ಸುಗಳು ನಿಮ್ಮದಾಗಲಿ ಎಂದು ಹಾರ್ದಿಕ ಶುಭ ಹಾರೈಕೆಗಳನ್ನು ಕೋರುತ್ತೇನೆ.
💐 ಅಭಿನಂದನೆಗಳು ಹಾಗೂ ಶುಭಾಶಯಗಳು 💐
– ಆಂಜನೇಯ ಮಟ್ಟೂರು

Previous article
Next article
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments