Tuesday, July 28, 2026
HomeUncategorizedಅನುದಾನಿತ ಶಾಲೆಯ ಶಿಕ್ಷಕರು ಸರಕಾರದ ಮಲತಾಯಿ ಮಕ್ಕಳು.

ಅನುದಾನಿತ ಶಾಲೆಯ ಶಿಕ್ಷಕರು ಸರಕಾರದ ಮಲತಾಯಿ ಮಕ್ಕಳು.

ಅನುದಾನಿತ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಒತ್ತಾಯ. ಸರಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಸರಕಾರ ಈಗಾಗಲೇ ಆದೇಶ ಮಾಡಿ ಅತಿಥಿ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಂಡಿದೆ ಆದರೆ ಕರ್ನಾಟಕ ಸರಕಾರ ಅನುದಾನಿತ ಶಾಲೆಗಳನ್ನು ಮಲತಾಯಿ ಧೋರಣೆಯಂತೆ ನೋಡುತ್ತಿದೆ ಸಾಕಷ್ಟು ಪ್ರೌಢಶಾಲೆಗಳಲ್ಲಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು ನಿವೃತ್ತಿ ಮತ್ತು ಮರಣ ಹೊಂದಿ ಶಿಕ್ಷಕರ ಕೊರತೆ ಬಹಳಷ್ಟು ಎದ್ದು ಕಾಣುತ್ತಿದೆ ಆದರೆ ಅನುದಾನಿತ ಶಾಲೆಗಳಿಗೆ ಶಿಕ್ಷಕರಿಲ್ಲ ಎಂಬ ಭಾವನೆಯಿಂದ ಅನುದಾನಿತ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಲು ಪಾಲಕರು ಹಿಂದೇಟು ಹಾಕಿಕೊಳ್ಳುತ್ತಿದ್ದಾರೆ ಸರ್ಕಾರ ಅನುದಾನಿತ ಶಾಲೆಗಳನ್ನ ಮುಚ್ಚುವ ಉದ್ದೇಶ ಹೊಂದಿದೆ ಎನ್ನುವುದು ನಮ್ಮ ಆಪಾದನೆ ಸರಕಾರಕ್ಕೆ ಅನುದಾನಿತ ಶಾಲೆಗಳ ಬಗ್ಗೆ ಅಪಾರ ಕಾಳಜಿ ಇದ್ದರೆ ಹಿಂದಿನ ಶಿಕ್ಷಣ ಮಂತ್ರಿಗಳಾಗಿರುವಂತ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪನವರು 2026 -27ನೇ ಸಾಲಿಗೆ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶವನ್ನು ಮಾಡುತ್ತೇನೆ ಎಂದು ಹೇಳಿ ಹೋದರು ಆದರೆ ಇಲ್ಲಿವರೆಗೆ ಆದೇಶ ಬರಲಿಲ್ಲ ಆದ್ದರಿಂದ ಅನುದಾನಿತ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಶಾಲೆ ಮುಚ್ಚುವ ಸ್ಥಿತಿ ಬಂದಿದೆ ದಯವಿಟ್ಟು ಕರ್ನಾಟಕ ಸರಕಾರ ತಕ್ಷಣವೇ ಸರಕಾರಿ ಶಾಲೆಗಳಿಗೆಅತಿಥಿ ಶಿಕ್ಷಕರ ಆದೇಶದಂತೆ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶ ಮಾಡಬೇಕೆಂದು ಕುಷ್ಟಗಿ ತಾಲೂಕ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಕೆ. ಪಂಪಾಪತಿ ಸಾಸ್ವಿಹಾಳ ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments