Tuesday, February 17, 2026
Homeಕ್ರೀಡೆRCB ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? DCM ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ!

RCB ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? DCM ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ!

ಐಪಿಎಲ್‌ನಲ್ಲಿ ಅತಿ ದೊಡ್ಡ ಫ್ರಾಂಚೈಸಿಗಳೊಂದು ರಾಯಲ್‌ ಚಾಲೆಂಜೆರ್ಸ್‌ ಬೆಂಗಳೂರು. ಅತಿ ಹೆಚ್ಚು ಫ್ಯಾನ್ಸ್‌ ಹೊಂದಿರುವ ಆರ್‌ಸಿಬಿ ಈ ಬಾರಿ ಚಾಂಪಿಯನ್‌ ಟ್ರೋಫಿಗೆ ಮುತ್ತಿಟ್ಟಿದೆ.

ಈ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಣೆ ವೇಳೆ ಕಾಲ್ತುಳಿತವಾಗಿ 11 ಜನ ಅಭಿಮಾನಿಗಳು ಮೃತಪಟ್ಟಿದ್ದರು.

ಸದ್ಯ ಈ ಕೇಸ್‌ ಕೋರ್ಟ್‌ ಕಟಕಟೆಯಲ್ಲಿದೆ. ಹೀಗಿರುವಾಗ ಆರ್‌ಸಿಬಿ ಮಾರಾಟದ ಸುದ್ದಿ ದೊಡ್ಡಮಟ್ಟದಲ್ಲಿದೆ.

ಜಸ್ಟ್ ಈ ಎಲೆ ಜಗಿದು ರಸ ಸೇವಿಸಿದ್ರೆ ಸಾಕು ಕೊಲೆಸ್ಟ್ರಾಲ್ ಕರಗಿ ಹೋಗುತ್ತೆ!

ಬೆಂಗಳೂರು ರಾಯಲ್‌ ಚಾಲೆಂಜೆರ್ಸ್‌ ಸದ್ಯ ಅಮೆರಿಕಾದ ಮೂಲದ ಕಂಪನಿ ಒಡೆತನದಲ್ಲಿದೆ. ಆ ಕಂಪನಿ ಆರ್ ಸಿಬಿ ಸೇಲ್‌ ಮಾಡುತ್ತಿರುವ ಸುದ್ದಿ ನಿನ್ನೆಯಿಂದ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಆರ್‌ ಸಿಬಿ ಕೊಂಡುಕೊಳ್ಳಲಿದ್ದಾರೆ ಎಂಬ ಬಿಸಿ ಚರ್ಚೆ ರಾಜಕೀಯ ಪಡಸಾಲೆಗಳಲ್ಲಿ ಹರಿದಾಡಿತ್ತು. ಇದಕ್ಕೆ ಸ್ವತಃ ಡಿಕೆ ಉತ್ತರ ಕೊಟ್ಟಿದ್ದಾರೆ.

ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌,”ನಾನು ಹುಚ್ಚನಲ್ಲ. ನಾನು ಚಿಕ್ಕಂದಿನಿಂದಲೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯ, ಅಷ್ಟೇ. ನನಗೆ ಸಮಯವಿಲ್ಲ, ಆದರೂ ನಿರ್ವಹಣೆಯ ಭಾಗವಾಗಲು ನನಗೆ ಆಫರ್‌ಗಳು ಬಂದವು… ನನಗೆ ಆರ್‌ಸಿಬಿ ಏಕೆ ಬೇಕು? ನಾನು ರಾಯಲ್ ಚಾಲೆಂಜ್ ಕುಡಿಯುವುದೇ ಇಲ್ಲ” ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸುವ ವದಂತಿಗಳನ್ನು ನಿರಾಕರಿಸಿದ್ದಾರೆ.

WATCH | Delhi | “I am not a mad man. I’m just a member of the Karnataka Cricket Association from my younger days, that’s all. I don’t have time, though I had offers to be part of the management… Why do I need RCB? I don’t even drink Royal Challenge,” says Karnataka Deputy CM… pic.twitter.com/iZ1K1by206

https://x.com/ANI/status/1932722377487708435?ref_src=twsrc%5Etfw%7Ctwcamp%5Etweetembed%7Ctwterm%5E1932722377487708435%7Ctwgr%5Ea85c606db0848770a5dd3c73bce47a0f23f03a38%7Ctwcon%5Es1_c10&ref_url=https%3A%2F%2Fm.test.in%2F

RCB ಸೇಲ್‌ ಮಾಡಲ್ಲ ಎಂದ United Spirits!

ಯುನೈಟೆಡ್ ಸ್ಪಿರಿಟ್ಸ್ ಆರ್​​ಸಿಬಿಯನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಸುದ್ದಿಯನ್ನು ಅಲ್ಲಗಳೆದಿದೆ. ರಾಯಲ್ ಚಾಲೆಂಜರ್ಸ್ ತಂಡವನ್ನು ಮಾರಾಟ ಮಾಡುವ ಯಾವ ಆಲೋಚನೆಯೂ ಇಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರವು ಮದ್ಯದ ಜಾಹೀರಾತು ನಿರ್ಬಂಧಿಸುವ ಕಾರಣದಿಂದ ಆರ್​​ಸಿಬಿಯನ್ನು ಮಾರಬಹುದು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಕಾರಣಕ್ಕೆ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments