Thursday, October 15, 2026
HomeUncategorizedಅಂಬೇಡ್ಕರ್ ನಗರ ಶಾಲೆಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ

ಅಂಬೇಡ್ಕರ್ ನಗರ ಶಾಲೆಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ

ಕೆ.ಆರ್.ಪುರ: ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ದೇಶವು ಸದಾಕಾಲಕ್ಕೂ ನೆನಪಿಡುವ ಮಹನೀಯರು ಎಂದು ಅಂಬೇಡ್ಕರ್ ನಗರ ಶಾಲೆಯ ಎಸ್.ಡಿ.ಎಂ.ಸಿ ಮುಖ್ಯಸ್ಥ ಹಿಟಾಚಿ ಮಂಜುನಾಥ್ ಹೇಳಿದರು.

ರಾಮಮೂರ್ತಿನಗರ ಸಮೀಪದ ಅಂಬೇಡ್ಕರ್ ನಗರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪ ನ ಸಲ್ಲಿಸಿ ಮಾತನಾಡಿದರು.

ಬ್ರಿಟಿಷರ ಆಳ್ವಿಕೆಯಿಂದ ಭಾರತವನ್ನು ಸ್ವತಂತ್ರಗೊಳಿಸಲ್ಲಿ ಗಾಂಧೀಜಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಆದರ್ಶ, ತತ್ವಗಳು ಇಂದಿಗೂ ಪ್ರಸ್ತುತ’ ಎಂದರು.

ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿ ಅಲ್ಪಾವಧಿಯಲ್ಲಿಯೂ ಉತ್ತಮ ಆಡಳಿತ ನೀಡಿದರು. ನೈತಿಕತೆಯಿಂದ ಜೀವನ ನಡೆಸಿದರು. ನಾವೆಲ್ಲರೂ ಗಾಂಧೀಜಿ ಮತ್ತು ಶಾಸ್ತ್ರಿ ಅವರ ಆದರ್ಶಗಳನ್ನು ಪಾಲಿಸಬೇಕು’ ಎಂದು ಹೇಳಿದರು.
ಮುಖ್ಯೋಪಾಧ್ಯಾಯರಾದ ಬಿ.ವಿ.ಭಾರತಿ, ಶಿಕ್ಷಕರು, ಸಿಬ್ಬಂದಿ ಇತರರು‌ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments