Sunday, August 16, 2026
HomeUncategorizedರಾಜ್ಯ ಸಚಿವ ಸಂಪುಟದ ಜಾತಿವಾರು ಪ್ರಾತಿನಿಧ್ಯ: ಬಲಿಷ್ಠ ಸಮುದಾಯಗಳಿಗೆ ಮಣೆ, ಮೀನುಗಾರರ ಕಡೆಗಣನೆಗೆ ತೀವ್ರ ಅಸಮಾಧಾನ!

ರಾಜ್ಯ ಸಚಿವ ಸಂಪುಟದ ಜಾತಿವಾರು ಪ್ರಾತಿನಿಧ್ಯ: ಬಲಿಷ್ಠ ಸಮುದಾಯಗಳಿಗೆ ಮಣೆ, ಮೀನುಗಾರರ ಕಡೆಗಣನೆಗೆ ತೀವ್ರ ಅಸಮಾಧಾನ!

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟದ ಜಾತಿವಾರು ಪ್ರಾತಿನಿಧ್ಯ ಮತ್ತು ಪ್ರಮುಖ ಶಾಸಕಾಂಗ ಹುದ್ದೆಗಳ ಹಂಚಿಕೆಯ ಅಧಿಕೃತ ಮಾಹಿತಿಗಳು ಹೊರಬಂದಿದ್ದು, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿವೆ. ರಾಜ್ಯದ ಬಲಿಷ್ಠ ಹಾಗೂ ಸಾಮಾಜಿಕವಾಗಿ ಪ್ರಭಾವಿ ಸಮುದಾಯಗಳಿಗೆ ಸಂಪುಟದಲ್ಲಿ ಸಿಂಹಪಾಲು ಸಿಕ್ಕಿದ್ದು, ನಿರ್ಣಾಯಕ ಮತಬ್ಯಾಂಕ್ ಹೊಂದಿರುವ ಪ್ರಮುಖ ಸಮುದಾಯವೊಂದನ್ನು ಕಡೆಗಣಿಸಲಾಗಿದೆ ಎಂಬ ಗಂಭೀರ ವಿಮರ್ಶೆಗಳು ವ್ಯಕ್ತವಾಗಿವೆ.

ಸಂಪುಟದ ಒಟ್ಟು ಜಾತಿವಾರು ಬಲ (34 ಸಚಿವರು)
ವಿಶ್ಲೇಷಣೆಯ ಪ್ರಕಾರ, ಸಚಿವ ಸಂಪುಟದಲ್ಲಿ ವಿವಿಧ ಸಮುದಾಯಗಳಿಗೆ ದೊರೆತಿರುವ ಸ್ಥಾನಗಳ ವಿವರ ಹೀಗಿದೆ:

| ಸಮುದಾಯ | ಸಚಿವರ ಸಂಖ್ಯೆ | ಪ್ರಮುಖ ಒಳಪಂಗಡಗಳ ಪ್ರಾತಿನಿಧ್ಯ |

ದಲಿತರು10
ಬಲಗೈ (3),
ಎಡಗೈ (2),
ವಾಲ್ಮೀಕಿ (3),
ಲಂಬಾಣಿ (1),
ಬೋವಿ (1)

ಲಿಂಗಾಯತರು 07
ಬಣಜಿಗ (2),
ರೆಡ್ಡಿ (1),
ಪಂಚಮಸಾಲಿ (1),
ಗಾಣಿಗ (1),
ಸಾದರು (1),
ಕುಡು ಒಕ್ಕಲಿಗ (1) |

ಹಿಂದುಳಿದ ವರ್ಗಗಳು (OBC) 07 |
ಕುರುಬ (2),
ಉಪ್ಪಾರ (1),
ಈಡಿಗ (1),
ಮರಾಠ (1),
ರಜಪೂತ್ (1),
ಕೊಡವ (1) |

ಒಕ್ಕಲಿಗರು 06** | ಗಂಗಡ್ಕರ್ (4),
ಮೊರಸು (1),
ಒಕ್ಕಲಿಗ-ರೆಡ್ಡಿ (1)

ಅಲ್ಪಸಂಖ್ಯಾತರು 04
| ಮುಸ್ಲಿಂ (3),
ಕ್ರಿಶ್ಚಿಯನ್ (1)

ಪ್ರಮುಖ ಸಾಂವಿಧಾನಿಕ ಹುದ್ದೆಗಳ ಪೈಕಿ ಜೆ.ಎಸ್. ಪಾಟೀಲ್ (ಲಿಂಗಾಯತ) ಅವರು ವಿಧಾನಸಭಾಧ್ಯಕ್ಷರಾಗಿದ್ದರೆ,

ಸಲೀಂ ಅಹಮದ್ (ಅಲ್ಪಸಂಖ್ಯಾತ) ವಿಧಾನ ಪರಿಷತ್ ಸಭಾಪತಿಯಾಗಿದ್ದಾರೆ.

ಹಾಗೆಯೇ ಉಮಾಶ್ರೀ (ಹಿಂದುಳಿದ ವರ್ಗ – ನೇಕಾರ) ಉಪಸಭಾಪತಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ವಿಮರ್ಶೆ ಹಾಗೂ ವಿಶ್ಲೇಷಣೆ: ಬಲಿಷ್ಠರಿಗೆ ಪ್ರಾಶಸ್ತ್ಯ
ಹೊರಬಂದಿರುವ ವರದಿ ಮತ್ತು ಅಂಕಿಅಂಶಗಳನ್ನು ಗಮನಿಸಿದರೆ, ರಾಜ್ಯದ ಬಲಿಷ್ಠ ಸಮಾಜಗಳಿಗೆ ಹಾಗೂ ರಾಜಕೀಯವಾಗಿ ಮುಂಚೂಣಿಯಲ್ಲಿರುವ ಸಮುದಾಯಗಳಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ದಲಿತರು (10), ಲಿಂಗಾಯತರು (7) ಮತ್ತು ಒಕ್ಕಲಿಗರು (6) ಒಟ್ಟು ಸಂಪುಟದ ಬಹುಪಾಲು ಸ್ಥಾನಗಳನ್ನು ಹಂಚಿಕೊಂಡಿದ್ದು, ಆಡಳಿತಾತ್ಮಕ ಹಿಡಿತ ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವ ಲೆಕ್ಕಾಚಾರ ಇದರ ಹಿಂದೆ ಇದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.

ಕಡೆಗಣಿಸಲ್ಪಟ್ಟ ‘ಮೀನುಗಾರ ಸಮುದಾಯ’ದ ಆಕ್ರೋಶ
ಸಂಪುಟ ರಚನೆಯಲ್ಲಿನ ಈ ಎಲ್ಲ ಲೆಕ್ಕಾಚಾರಗಳ ನಡುವೆ ರಾಜ್ಯದ ಅತ್ಯಂತ ಪ್ರಮುಖ ಸಮುದಾಯವೊಂದರ ಕಡೆಗಣನೆ ಈಗ ದೊಡ್ಡ ಮಟ್ಟದ ಚರ್ಚೆಗೆ ತಿರುಗಿದೆ.

ರಾಜ್ಯದ ಸುಮಾರು 150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿರುವ ಹಾಗೂ ಎಲ್ಲ ಕ್ಷೇತ್ರಗಳಲ್ಲೂ ಹರಡಿಕೊಂಡಿರುವ ಮೀನುಗಾರ ಸಮಾಜ’ ವನ್ನು ಸಂಪುಟದಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಚುನಾವಣಾ ರಾಜಕೀಯದ ಗೆಲುವು-ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಈ ಸಮುದಾಯಕ್ಕೆ ಸಚಿವ ಸ್ಥಾನದ ಪ್ರಾತಿನಿಧ್ಯ ಸಿಗದಿರುವುದು ತಳಮಟ್ಟದ ಸಮುದಾಯಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಸಾಮಾಜಿಕ ನ್ಯಾಯದ ಹರಿಕಾರರು ಎಂದು ಬಿಂಬಿಸಿಕೊಳ್ಳುವ ಸರ್ಕಾರದ ಈ ಧೋರಣೆಯಿಂದಾಗಿ, ಬಲಿಷ್ಠ ಸಮುದಾಯಗಳಿಗೆ ಮಣೆ ಹಾಕುವ ಭರದಲ್ಲಿ ತಳಮಟ್ಟದ ಹಾಗೂ ಉಪಕಸುಬಿನ ಬಲವಾದ ಸಮುದಾಯಗಳು ರಾಜಕೀಯ ವನವಾಸ ಅನುಭವಿಸುವಂತಾಗಿದೆ ಎಂಬುದು ವಿಶ್ಲೇಷಕರ ಮಾರ್ಮಿಕ ನುಡಿಯಾಗಿದೆ.

ಮುಂದಿನ ದಿನಗಳಲ್ಲಿ ಈ ಅಸಮಾಧಾನ ಯಾವ ಸ್ವರೂಪ ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments