Sunday, August 16, 2026
Homeನಿಮ್ಮ ಜಿಲ್ಲೆಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ತಾಳ್ಮೆಯಿಂದ ಇರಿ: ಸಿಎಂ ಡಿ ಕೆ ಶಿವಕುಮಾರ್

ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ತಾಳ್ಮೆಯಿಂದ ಇರಿ: ಸಿಎಂ ಡಿ ಕೆ ಶಿವಕುಮಾರ್

ನಾನು ತಾಳ್ಮೆಯಿಂದ ಇದ್ದ ಕಾರಣಕ್ಕೆ ಈ ಸ್ಥಾನದಲ್ಲಿದ್ದೇನೆ

ಬೆಂಗಳೂರು, ಆ. 03:

“ನಾವು ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ಶಾಸಕರು ತಾಳ್ಮೆಯಿಂದ ಇರಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದರು.

ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ನಾನು ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿ ರವಾನಿಸಿದ್ದೇನೆ. ನಮ್ಮಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳು ಇದ್ದಾರೆ. ಬಹಳ ಶಾಸಕರು ಅರ್ಹರಿದ್ದಾರೆ. ಕೆಲವು ಸಂದರ್ಭದಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ. 2004ರಲ್ಲಿ ನನ್ನನ್ನೂ ಸಂಪುಟಕ್ಕೆ ತೆಗೆದುಕೊಂಡಿರಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಆರಂಭದಲ್ಲಿ ನನ್ನನ್ನು ಮಂತ್ರಿ ಮಾಡಿರಲಿಲ್ಲ. ಆಗ ನಾವು ತಾಳ್ಮೆಯಿಂದ ಇದ್ದೆವು, ತಾಳ್ಮೆಯಿಂದ ಇದ್ದ ಕಾರಣಕ್ಕೆ ಇಂದು ನಾನು ಈ ಸ್ಥಾನದಲ್ಲಿ ಇದ್ದೇನೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments