ನಾಗರಹಾಳ(ರಾಯಚೂರು ಜಿಲ್ಲೆ): ಮಕ್ಕಳಲ್ಲಿ ಗಣಿತ ಕೌಶಲ್ಯ ಹೆಚ್ಚಿಸುವ ಬ್ರೇನ್-ಓ-ಬ್ರೇನ್ ಕೌಶಲ್ಯ ಸ್ಪರ್ಧೆಯಲ್ಲಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ನಾಗರಹಾಳ ಗ್ರಾಮದಲ್ಲಿರುವ ಬ್ರೇನೋಬ್ರೇನ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಕೇಂದ್ರಕ್ಕೆ ಕೀರ್ತಿ ತಂದಿದ್ದಾರೆ. ಜು.26ರಂದು ಬೆಂಗಳೂರಿನ ಡಾ.ಬಾಬು ಜಗಜೀವನರಾಂ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ವಾರ್ಷಿಕ ಅಬ್ಯಾಕಸ್ ಬ್ರೇನೋಬ್ರೇನ್ ಉತ್ಸವದಲ್ಲಿ ಈ ಸಾಧನೆ ಮಾಡಲಾಗಿದೆ. ನಾಗರಹಾಳದ ಬ್ರೇನೋಬ್ರೇನ್ ಕೇಂದ್ರದ ಮೆಂಟರ್ ಮಂಜುಳಾ ಪಾಟೀಲ ಮಕ್ಕಳಿಗೆ ತರಬೇತಿ ನೀಡಿದ್ದರು. ಒಟ್ಟು 34 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಚಾಂಪಿಯನ್, 14 ವಿದ್ಯಾರ್ಥಿಗಳು ಗೋಲ್ಡ್ ಮೆಡಲ್, 6 ವಿದ್ಯಾರ್ಥಿಗಳು ಸಿಲ್ವರ್ ಮೆಡಲ್ ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಅವರ ಪಾಲಕರು ಕೂಡಾ ಬೆಂಗಳೂರಿಗೆ ತೆರಳಿ ತಮ್ಮ ಮಕ್ಕಳ ಸಾಧನೆಯನ್ನು ಕಣ್ಣಾರೆ ಕಂಡು ಹರ್ಷಿಸಿದರು.
–
ವಿಜೇತರ ವಿವರ:
ಚಾಂಪಿಯನ್ (14): ಚಿರಾಗ್ ರಡ್ಡಿ, ಶ್ರೇಯಾ, ಹರ್ಷಿತ್, ಅರ್ಪಿತಾ ದೇವಶೆಟ್ಟಿ, ಚಂದ್ರಶೇಖರ ಮೇಟಿ, ನಿತ್ಯಾ ಬಡಿಗೇರ, ನಂದಿತಾ ಗಬಸಾವಳಗಿ, ಅನನ್ಯಾ ಪತ್ತಾರ, ಶ್ರವಣ್ ಗೊರಬಾಳ, ಸೃಜನ್ ಹನುಮಪ್ಪ, ಪರಶುರಾಮ ಇಂಗಳಗಿ, ಶ್ರೀಶಾಂತ್ ಕವಡಿಮಟ್ಟಿ, ಶ್ರೀರಕ್ಷಾ ತುರಡಗಿ, ಸಹನಾ ಮರೆಮ್ಮಗೋಳ.
ಗೋಲ್ಡ್ ಟಾಪರ್(14): ಸಮರ್ಥ ಹಿರೇಮಠ, ಭರತ್ ಪಾಟೀಲ, ಶರಣ್ಯ, ಕೀರ್ತಿ ಮೇಟಿ, ಶ್ರೀನಿವಾಸರೆಡ್ಡಿ, ಮಹಿಬೂಸಾಬ್, ಬಿಂದುಶ್ರೀ ದೊಡ್ಡಕರಗಿ, ಪವಿತ್ರಾ ವಡವಡಗಿ, ಸಾತ್ವಿಕ್ ಹುನ್ನೂರ, ಸಂಜನಾ ಮಾಣಿಕ್, ಆವಂತಿಕಾ ಯಲಿಗಾರ, ವಿಕಾಸ್, ಮೇಘಾ ಡಿ ಜಿ, ಸಿಂಚನಾ ಮರೆಮ್ಮಗೋಳ.
ಬೆಳ್ಳಿ ಟಾಪರ್(6): ಸಮೃದ್ಧಿ ರಡ್ಡೇರ್. ನಸ್ರಿನ್ ಬೇಗಂ, ಆಫ್ರಿನ್ ಸೈಯದ್, ತನುಜಾ ಮೇಗೂರು, ಮಲ್ಲನಗೌಡ ಮಾಲಿಪಾಟೀಲ್, ಶಿವರಾಜ್ ನಾಲತವಾಡ.

