Tuesday, July 28, 2026
HomeUncategorizedನೀಟನಲ್ಲಿ ಮತ್ತೊಮ್ಮೆ ಸಾಧನೆ ತೋರಿದ ನಾಗರಬೆಟ್ಟದ ಆಕ್ಸಫರ್ಡ

ನೀಟನಲ್ಲಿ ಮತ್ತೊಮ್ಮೆ ಸಾಧನೆ ತೋರಿದ ನಾಗರಬೆಟ್ಟದ ಆಕ್ಸಫರ್ಡ

ಈ ವರ್ಷ 190, 6 ವರ್ಷಗಳಲ್ಲಿ 1100ಕ್ಕೂ ಹೆಚ್ಚು ಮೆಡಿಕಲ್ ಸೀಟ್ ಖ್ಯಾತಿ

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಗುಡ್ಡದ ಹತ್ತಿರ ಇರುವ ಶ್ರೀ ದತ್ತಾತ್ರೇಯ ವಿದ್ಯಾವರ್ಧಕ ಸಂಸ್ಥೆಯ ಆಕ್ಸಫರ್ಡ್ ಪಾಟೀಲ್ಸ್ ಸೆನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷವೂ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ತಂದುಕೊಟ್ಟಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ತಿಳಿಸಿದರು.ನೀಟ್ ಮರು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿ ನಡೆದ ನೀಟ್ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬರು 705 ಅಂಕ ಪಡೆದು ರಾಜ್ಯಕ್ಕೆ ಮೊದಲಿಗರಾರುವ ಅವಕಾಶ ಪಡೆದಿದ್ದರು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಆ ಪರೀಕ್ಷೆ ರದ್ದಾಗಿ ಮತ್ತೊಮ್ಮೆ ಮರು ಪರೀಕ್ಷೆ ನಡೆಸಲಾಯಿತು. ಅತ್ಯಂತ ಕಠಿಣವಾಗಿದ್ದ ಮರು ಪರೀಕ್ಷೆಯಲ್ಲೂ ನಮ್ಮ ವಿದ್ಯಾರ್ಥಿಗಳು ಸಾಧಕರಾಗಿ ಹೊರ ಹೊಮ್ಮುವ ಮೂಲಕ ತಮ್ಮ ನೈಜ ಪ್ರತಿಭೆ ಅನಾವರಣಗೊಳಿಸಿದ್ದಾರೆ. ಈ ವರ್ಷ 190ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್ ಶಿಕ್ಷಣದ ಮೆಡಿಕಲ್ ಸೀಟ್ ಪಡೆದುಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ. ಇದು ನಮ್ಮ ಸಂಸ್ಥೆಯ ಸಾಧನೆ ನಿರಂತರ ಎನ್ನುವುದನ್ನು ಸಾಬೀತುಪಡಿಸಿದೆ ಎಂದರು.

ಕಳೆದ 6 ವರ್ಷಗಳಲ್ಲಿ ನಮ್ಮ ಸಂಸ್ಥೆಯಿಂದ 1100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಪಡೆದುಕೊಂಡು ವೈದ್ಯರಾಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಪ್ರತಿ ವರ್ಷ 170 ರಿಂದ 200ರವರೆಗೂ ಮೆಡಿಕಲ್ ಸೀಟ್ ತಂದುಕೊಡುವ ಖ್ಯಾತಿ ನಮ್ಮ ಸಂಸ್ಥೆಯದ್ದಾಗಿದೆ. ನಮ್ಮಲ್ಲಿರುವ ಅತ್ಯಂತ ಪ್ರತಿಭಾವಂತ ಉಪನ್ಯಾಸಕರ ಬಳಗದ ಪರಿಶ್ರಮ ಇದರಲ್ಲಿದೆ. ನಮ್ಮಲ್ಲಿ ಸಿಗುವ ತರಬೇತಿ ಹೆಚ್ಚು ಗುಣಮಟ್ಟದ್ದಾಗಿದ್ದು ನಗರ ಪ್ರದೇಶದ ಕಾಲೇಜುಗಳಿಗೆ ಸ್ಪರ್ಧೆ ಒಡ್ಡುವ ಮಾದರಿಯಲ್ಲಿದೆ. ನಮ್ಮಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಸಾಧಕರಾಗಿ ಹೊರಹೊಮ್ಮುತ್ತಿರುವುದು ವಿಶೇಷವಾಗಿದೆ ಎಂದರು.ಈಚೆಗೆ ನಡೆದ ನೀಟ್ ಮರು ಪರೀಕ್ಷೆಯಲ್ಲಿ 370 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 12 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು, 140 ವಿದ್ಯಾರ್ಥಿಗಳು 500ರಿಂದ 599ರವರೆಗೆ, 130 ವಿದ್ಯಾರ್ಥಿಗಳು 450ರಿಂದ 499ರವರೆಗೆ ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿ ಮಾನಸಾ ಹಿರೇಮಠ 720 ಅಂಕಗಳಿಗೆ 650 ಅಂಕ ಪಡೆದು ಮೊದಲ ಸ್ಥಾನ ಗಳಿಸಿದ್ದಾಳೆ. ಗಾಯತ್ರಿ ಸಿಂಧೆ 637, ವರ್ಷಾ ಯರಗಟ್ಟಿ 635, ಭಾಗ್ಯಾ ಹೊಸಮನಿ 634, ಶಿವಶಂಕರ 632, ಪ್ರತೀಕ್ಷಾ ಕುಂಬಾರ 630, ಭಾಗ್ಯಶ್ರೀ ಬಸರಕೋಡ 626, ಮಹ್ಮದಇಬ್ರಾಹಿಂ ವಾಲಿಕಾರ 617, ಸುಮಿತ್ ಪತ್ತಾರ 606, ಸಹನಾ ಹಂಚಾಟೆ 604, ಅನುಪ್ರಭಾ ನಡಗಡ್ಡಿ 601, ಪ್ರವೀಣ ಭಾವಿಕಟ್ಟಿ 600 ಅಂಕಗಳನ್ನು ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದರು.

ಉತ್ತರ ಕರ್ನಾಟಕದ ಯಶಸ್ವಿ ಮತ್ತು ವಿಶ್ವಾಸಾರ್ಹ ಸೈನ್ಸ್ ಪಿಯು ಕಾಲೇಜು ಎನ್ನುವ ಕೀರ್ತಿಗೆ ಪಾತ್ರವಾಗಿರುವ ನಮ್ಮ ಸಂಸ್ಥೆಯು ಪಾಲಕರು, ವಿದ್ಯಾರ್ಥಿಗಳು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿಯಾಗಿದ್ದು ನಮ್ಮಲ್ಲಿ ದೊರಕುವ ಗುಣಮಟ್ಟದ ಶಿಕ್ಷಣಕ್ಕೆ ಇದು ಕನ್ನಡಿಯಾಗಿದೆ. ಡಾಕ್ಟರ್ ಆಗಬೇಕೆನ್ನುವ ಸಂಕಲ್ಪವನ್ನು ವಿದ್ಯಾರ್ಥಿಗಳು ಹೊಂದಿದ್ದರೆ ಅದನ್ನು ಸಾಧಿಸಿ ತೋರಿಸುವ ಸಾಮರ್ಥ್ಯ ನಮ್ಮ ಬಳಿ ಇದೆ. ಸಾಧನೆಗೆ ಇನ್ನೊಂದು ಹೆಸರೇ ಆಕ್ಸಫರ್ಡ್ ಪಾಟೀಲ್ಸ್ ನೀಟ್ ಅಕಾಡೆಮಿ ಎಂದರೆ ತಪ್ಪಾಗದು ಎಂದು ಅವರು ಹರ್ಷ ವ್ಯಕ್ತಪಡಿಸಿದರು.ನಮ್ಮ ಕಾಲೇಜಿನಲ್ಲಿ ಕೇವಲ ಎಂಬಿಬಿಎಸ್ ಮಾತ್ರವಲ್ಲದೆ, ಜೆಇಇ, ಐಐಟಿ ಮಾದರಿಯ ಶಿಕ್ಷಣವನ್ನೂ ಕೊಡಲಾಗುತ್ತದೆ. ಈಚೆಗೆ ಒಬ್ಬ ವಿದ್ಯಾರ್ಥಿನಿ ಕಾನ್ಪುರದ ಐಐಟಿಗೆ ಆಯ್ಕೆ ಆಗಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ. ನಮ್ಮಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆದುಕೊಳ್ಳಲೂ ಅವಕಾಶ ಇದೆ. ನಮ್ಮ ಗುರಿ ಗ್ರಾಮೀಣ ಭಾಗದ ಬಡವರ ಹಾಗೂ ಕೃಷಿಕರ ಮಕ್ಕಳು ನಗರ ಪ್ರದೇಶದ ಶ್ರೀಮಂತರ ಮಕ್ಕಳ ಜೊತೆ ಪೈಪೋಟಿ ನಡೆಸುವಂಥ ಸಾಧನೆ ಮಾಡಲು ತಯಾರು ಮಾಡುವುದಾಗಿದೆ ಎಂದರು.

ನಾಗರಬೆಟ್ಟದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಕಾಲೇಜಿನ ಶಾಖೆಗಳು ಮುದ್ದೇಬಿಹಾಳದಲ್ಲಿ ಮತ್ತು ಬಾಗಲಕೋಟೆಯ ನವನಗರದಲ್ಲಿಯೂ ಇವೆ. ಇಲ್ಲೂ ಕೂಡ ಮುಂಬರುವ ದಿನಗಳಲ್ಲಿ ನೀಟ್ ಅಕಾಡೆಮಿ ಮೂಲಕ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವುದು ನಮ್ಮ ಗುರಿಯಾಗಿದ್ದು ಅದರಲ್ಲಿ ನಾವು ಯಶಸ್ಸು ಕಾಣುವ ವಿಶ್ವಾಸ ಇದೆ ಎಂದು ಸಂತಸ ಹಂಚಿಕೊಂಡರು.-

ಫೋಟೊಗಳು1-ಮಾನಸಾ ಹಿರೇಮಠ

2-ಗಾಯತ್ರಿ ಸಿಂಧೆ3-ವರ್ಷಾ ಯರಗಟ್ಟಿ

4-ಭಾಗ್ಯಾ ಹೊಸಮನಿ5-ಶಿವಶಂಕರ

6-ಪ್ರತೀಕ್ಷಾ ಕುಂಬಾರ7-ಭಾಗ್ಯಶ್ರೀ ಬಸರಕೋಡ

8-ಮಹ್ಮದಇಬ್ರಾಹಿಂ ವಾಲಿಕಾರ9-ಸುಮಿತ್ ಪತ್ತಾರ

10-ಸಹನಾ ಹಂಚಾಟೆ11-ಅನುಪ್ರಭಾ ನಡಗಡ್ಡಿ

12-ಪ್ರವೀಣ ಭಾವಿಕಟ್ಟಿ

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments