ಮುದ್ದೇಬಿಹಾಳ: ಪಟ್ಟಣದ ಹಳೇ ಕಾಯಿಪಲ್ಯೆ ಮಾರುಕಟ್ಟೆ ಹಿಂಭಾಗದಲ್ಲಿರುವ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಮಾ.15ರಂದು ಸಂಜೆ 4 ಘಂಟೆಗೆ ತಾಲೂಕಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘ, ಮಹಿಳಾ ಹಾಗೂ ಯುವ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಏರ್ಪಡಿಸಲಾಗಿದೆ. ವಿರಕ್ತಮಠದ ಶರಣೆ ನೀಲಮ್ಮ ವಿರಕ್ತಮಠ ಸಾನಿಧ್ಯ, ಬಣಜಿಗ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಉಮೇಶ ನಾಗಠಾಣ ಅಧ್ಯಕ್ಷತೆ ವಹಿಸುವರು. ಓಂಶಾಂತಿ ಭವನದ ರಾಜಯೋಗಿನಿ ಬ್ರಹ್ಮಕುಮಾರಿ ರೇಣುಕಾ ಅಕ್ಕನವರು ಉದ್ಘಾಟಿಸುವರು. ಹುನಗುಂದದ ಸಾಹಿತಿ ಡಾ|ಶಿವಗಂಗಾ ರಂಜಣಗಿ ಅವರು ಮಹಿಳೆ ಮತ್ತು ಸಂಸ್ಕಾರದ ಕುರಿತು ಅನುಭಾವ ನಡೆಸಿಕೊಡುವರು. ಮಹಿಳಾ ಘಟಕದ ಗೌರವಾಧ್ಯಕ್ಷೆ ಸಂಗಮ್ಮ ಜೋಳದ, ಬಣಜಿಗ ಸಮಾಜದ ಗೌರವಾಧ್ಯಕ್ಷ ಎಂ.ಎಸ್.ನಾವದಗಿ ವಕೀಲರು, ಸಮಾಜದ ಮುಖಂಡರಾದ ಪುರಸಭೆ ಮಾಜಿ ಅಧ್ಯಕ್ಷ ದಾನಪ್ಪ ನಾಗಠಾಣ ಅತಿಥಿಗಳು ಎಂದು ಪ್ರಕಟಣೆ ತಿಳಿಸಿದೆ.
ಮುದ್ದೇಬಿಹಾಳದಲ್ಲಿ ಮಾ.15ರಂದು ಬಣಜಿಗ ಸಮಾಜದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
RELATED ARTICLES

