ಮುದ್ದೇಬಿಹಾಳ: ತಾಲೂಕು ಎಸ್.ಟಿ.(ಪರಿಶಿಷ್ಟ ಜಾತಿಯ ವಾಲ್ಮೀಕಿ, ನಾಯಕ) ನೌಕರರ ಸಂಘವನ್ನು ಶನಿವಾರ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಶಿಕ್ಷಕ ರಾಮಚಂದ್ರಯ್ಯ, ಅಧ್ಯಕ್ಷರಾಗಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್ ವಾರ್ಡನ್ ಸಂಗಮೇಶ ವಾಲಿಕಾರ, ಉಪಾಧ್ಯಕ್ಷರಾಗಿ ಶಿಕ್ಷಕ ಬಸನಗೌಡ ಪೊಲೀಸಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಶಿಕ್ಷಕ ವೆಂಕಟೇಶ ಮುದ್ದೇಬಿಹಾಳ, ಸಹ ಕಾರ್ಯದರ್ಶಿಯಾಗಿ ಶಿಕ್ಷಕ ಜೆ.ಐ.ಗುರಿಕಾರ, ಸಂಘಟನಾ ಕಾರ್ಯದರ್ಶಿಯಾಗಿ ಶಿಕ್ಷಕ ಸಂಜು ಜಾಲವಾದ ಅವಿರೋಧವಾಗಿ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿಕ್ಷಕರಾದ ಎಚ್.ಬಿ.ನಾಯ್ಕರ, ಬಿ.ಜಿ.ಬಿರಾದಾರ, ರವಿ ಮಾಲಿಪಾಟೀಲ, ಮನು ಡಿ.ಆರ್, ಕೆಇಬಿಯ ರಂಗನಾಥ ನಾಯಕ ಆಯ್ಕೆಗೊಂಡರು. ಸಂಘದ ನಿಕಟಪೂರ್ವ ಅಧ್ಯಕ್ಷ ಪಿಡಿಓ ಪಿ.ಎಸ್.ನಾಯ್ಕೋಡಿ, ಮುಖ್ಯಾಧ್ಯಾಪಕ ಎಚ್.ಬಿ.ನಾಯ್ಕರ, ಸಂಘದ ಜಿಲ್ಲಾದ್ಯಕ್ಷ ಬಿ.ಜಿ.ಬಿರಾದಾರ, ಸುನೀಲ ಹವಾಲ್ದಾರ್, ವಾಲ್ಮೀಕಿ ನಾಯಕ ಮಹಾಸಭಾದ ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಬಲಭೀಮ ನಾಯಕಮಕ್ಕಳ, ದೇವೇಂದ್ರ ವಾಲಿಕಾರ, ಬಸವರಾಜ ಹಳ್ಳಿ, ಸೋಮನಾಥ ಗಸ್ತಿಗಾರ, ಸಂಗಮೇಶ ಗುತ್ತೇದಾರ ಕುಂಟೋಜಿ ಸೇರಿದಂತೆ ಹಲವರು ಇದ್ದರು. ನಂತರ ನಡೆದ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಪಿಡಿಓ ಪಿ.ಎಸ್.ನಾಯ್ಕೋಡಿ ಅವರು ಮಾತನಾಡಿ ಸರ್ಕಾರಿ ನೌಕರರಿಗೆ ಸಾಕಷ್ಟು ಅನ್ಯಾಯ ಆಗುತ್ತಿದೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ನೌಕರರನ್ನು ಬಲಿಪಶು ಮಾಡುತ್ತಾರೆ. ಇದನ್ನು ತಡೆಗಟ್ಟಲು ಈ ನೌಕರರ ಸಂಘವು ಪ್ರಯತ್ನಿಸಬೇಕು ಎಂದರು. ನೂತನ ಅಧ್ಯಕ್ಷ ಸಂಗಮೇಶ ವಾಲಿಕಾರ ಅವರು ಮಾತನಾಡಿ, ಸಂಘ ಕ್ರಿಯಾಶೀಲವಾಗಿರಬೇಕಾದರೆ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಎಲ್ಲರೂ ಸೇರಿ ಸಂಘವನ್ನು ಬಲಪಡಿಸಲು ಕೈಜೋಡಿಸಬೇಕು. ಸಮಸ್ಯೆಗಳನ್ನು ಎದುರಿಸಲು ಎಲ್ಲರೂ ಒಟ್ಟಾಗಿ ನಿಲ್ಲಬೇಕು. ಹಿರಿಯರ ಮತ್ತು ಅನುಭವಿಗಳ ಮಾರ್ಗದರ್ಶನದಲ್ಲಿ ಸಂಘವನ್ನು ಮುನ್ನಡೆಸೋಣ. ಸಮಾಜದ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳೋಣ ಎಂದರು.-
ವರದಿ: ಮುತ್ತು ವಡವಡಗಿ, ಮೋ: 9880143505

