ಹುಲ್ಲೂರ : ಗ್ರಾಮದಲ್ಲಿ ಅಭಿನವ ಕುಮಾರೇಶ್ವರ ವಿದ್ಯಾವರ್ಧಕ ಸಂಘದವರು ಆಯೋಜಿಸಲಾಗಿದ್ದ ಸಿ.ಬಿ.ಎಸ್. ಪ್ರಾಥಮಿಕ ಶಾಲೆಯ 14ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಮುತ್ತಣ್ಣ ಹುಗ್ಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನವಲ್ಲ, ಅದು ಸಂಸ್ಕೃತಿ, ಮೌಲ್ಯಗಳು ಹಾಗೂ ಚಿಂತನೆಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿಸುವ ಮಹತ್ತರ ಪ್ರಕ್ರಿಯೆಯಾಗಿದೆ ಈ ಶಾಲೆ ಇನ್ನು ಉತ್ತರೋತ್ತರವಾಗಿ ಬೆಳೆಯಲಿ ಶಾಲೆಯ ಸಹಾಯ ಸಹಕಾರ ಬೇಕಾದರೆ ಊರಿನ ಜನರು ನಜರಿಗೆ ತಂದರೆ ನಿಮ್ಮ ಕಷ್ಟಕ್ಕೆ ಯಾವತ್ತು ಇದ್ದೆ ಇರುತ್ತೆ ಎಂದು ಆಶಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಬಿ.ಆರ್.ಪಿ ಎಸ ಎ ಗೌಡರ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಜ್ಞಾನವೆಂಬ ಸಾಗರದಲ್ಲಿ ಅಲೆಗಳಂತೆ ಅಲೆದಾಡಿ ಸಾಧನೆ ಮಾಡುವ ಮಹತ್ವಾಕಾಂಕ್ಷೆ ಇರಬೇಕು.
ಇಂದಿನ ಮಕ್ಕಳು ಮೊಬೈಲ್ ಫೋನ್ಗಳ ಅತಿಯಾದ ಬಳಕೆಯಿಂದ ಹೊರಬರಬೇಕಾದ ಅಗತ್ಯವಿದೆ ಎಂದು ಎಚ್ಚರಿಸಿದರು. ಮೊಬೈಲ್ಗಳ ದುರುಪಯೋಗದಿಂದ ಮಕ್ಕಳ ಸಮಯ ಮಾತ್ರವಲ್ಲದೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಹಾನಿಯಾಗುತ್ತಿದೆ ಎಂದರು. ಮೊಬೈಲ್ ಅನ್ನು ಮನರಂಜನೆಗಾಗಿ ಅಲ್ಲದೆ, ಜ್ಞಾನಾರ್ಜನೆ ಮತ್ತು ಮಾಹಿತಿ ಪಡೆಯುವ ಸಾಧನವಾಗಿ ಬಳಸಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮಲ್ಲಿರುವ ಸಾಮರ್ಥ್ಯವನ್ನು ಅರಿತುಕೊಂಡು ವಿವಿಧ ಇಲಾಖೆಗಳು ಹಾಗೂ ಕ್ಷೇತ್ರಗಳಲ್ಲಿ ಸಾಧನೆ ಮಾಡುವತ್ತ ಮುಂದಾಗಬೇಕು. ಶಿಕ್ಷಣದ ಮೂಲಕವೇ ಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಿಕ್ಷಣವೇ ವ್ಯಕ್ತಿಯ ಬದುಕಿಗೆ ದಿಕ್ಕು ತೋರಿಸುವ ಶಕ್ತಿಯಾಗಿದೆ, ಮಕ್ಕಳಿಗೆ ಮೊಬೈಲ್ ಫೋನ್ ಬಳಕೆ ನಿಲ್ಲಿಸಿ ಕೈಯಲ್ಲಿ ಪುಸ್ತಕ ನೀಡಿ ಮಸ್ತಕದಲ್ಲಿ ಅಕ್ಷರ ಜ್ಞಾನ ಹೆಚ್ಚಿಸಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು, ಮಕ್ಕಳನ್ನು ಹಣ ನೀಡಿ ಶಾಲೆಗೆ ಕಳಿಸಿದರೆ ಯೋಗ್ಯವಲ್ಲ ಮಕ್ಕಳ ಗುಣಾತ್ಮಕ ಬಗ್ಗೆ ಮೇಲಿಂದ ಮೇಲೆ ಪಾಲಕರು ಗಮನಿಸಬೇಕು, ಇವತ್ತಿನ ಯುಗದಲ್ಲಿ ಶಿಕ್ಷಣಕ್ಕಾಗಿ ನೈತಿಕ ಮೌಲ್ಯಗಳು ದುಡ್ಡುಕೊಟ್ಟರು ಸಿಗಲ್ಲ, ಮಕ್ಕಳು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ, ಅಂತಹ ನೈತಿಕ ಮೌಲ್ಯ ಶಿಕ್ಷಣ ಸಂಸ್ಥೆ ತುಂಬಲು ಸಾಲದು, ಅದಕ್ಕಾಗಿ ಪಾಲಕರಾದವರು ನಾನಾವೇಲ್ಲರು ನೈತಿಕ ಮೌಲ್ಯವನ್ನು ತುಂಬವ ಕೆಲಸ ಮಾಡಬೇಕು, ಅವರು, ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನವಲ್ಲ, ಅದು ಸಂಸ್ಕೃತಿ, ಮೌಲ್ಯಗಳು ಹಾಗೂ ಚಿಂತನೆಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿಸುವ ಮಹತ್ತರ ಪ್ರಕ್ರಿಯೆಯಾಗಿದೆ ತಾಯಂದಿರು ಹಿಂದಿನ ದಿನಮಾನದಲ್ಲಿ ರಾತ್ರಿ ಮಲಗುವಕ್ಕಿಂತ ಮುಂಚೆ ಒಳ್ಳೆ ಒಳ್ಳೆಯ ಕತೆಗಳನ್ನು ಹೇಳುವ ಯುಗ ಹೋಗಿದೆ ಮಕ್ಕಳೆದರು ಪಾಲಕರು ಮೋಬೈಲ ಬಳಕೆ ಕಡೆ ಜಾಸ್ತಿ ಗಮನ ಹರಿಸುವ ದಿನ ಬಂದಿದ್ದೆ ಅದಕ್ಕೆ ಮಕ್ಕಳು ಜಾಸ್ತಿ ಮೋಬೈಲ ಕಡೆ ಗಮನ ಹರಿಸುತ್ತಿದ್ದಾರೆ ಆದಷ್ಟು ಮೋಬೈಲದಿಂದ ಮಕ್ಕಳನ್ನು ದೂರುಳಿಸಿ ಎಂದರು.
ದಿವ್ಯ ಸಾನಿಧ್ಯವಹಿಸಿದ ಬಾಲ ತಪಸ್ವಿ ಸೋಮಲಿಂಗ ಮಹಾಸ್ವಾಮಿಜಿ ಆಶೀರ್ವಚನ ನೀಡಿದವರು ಒಂದು ಕಲ್ಲನ್ನು ಕೆತ್ತಿದರೆ ಶಿಲೆಯಾಗಿ ರೂಪುಗೊಳ್ಳುವಂತೆ ಮಾಡುವದು ಶಿಕ್ಷಣ ಸಂಸ್ಥೆಯಲ್ಲಿ ಇದೆ, ಮಕ್ಕಳನ್ನು ಮೌಲ್ಯಗಳನ್ನು ಕಲಿಸುವ ಮಕ್ಕಳನ್ನು ರೂಪಿಸುವದು ಪಾಲಕರ ಕರ್ತವ್ಯ, ಲಕ್ಷ್ಮೀ ಸರಸ್ವತಿ ವ್ಯಾತಸ ತಿಳಿಸಿ ಪಾಲಕರಿಗೆ ಸರಸ್ವತಿ ಕಲ್ಲಿನ ಶಕ್ತಿ ತುಂಬಿದ ಮಾತೆ ಯಾವತ್ತೂ ಕಲ್ಲು ಗಟ್ಟಿ ಹೇಗೆ ಕಲಿತ ಜ್ಞಾನ ಯಾವತ್ತು ಕೊನೆಯಲ್ಲ, ಸಂಪತ್ತು ಯಾವಗಾದರು ಹೋಗಬಹುದು ಬರಬಹುದು ವಿದ್ಯ ಬಹು ಮುಖ್ಯ ಎಂದರು, ಲಕ್ಷಾಂತರ ದುಡ್ಡು ಹಾಕಿ ಕಲಿಸುವಕ್ಕಿಂತ ಕಡಿಮೆ ದುಡ್ಡಿನಲ್ಲಿ ಒಳ್ಳೆಯ ಸಂಸ್ಕಾರ ಶಿಕ್ಷಣ ನೀಡುವ ಸಂಸ್ಥೆಗೆ ಕಳಿಸಿ, ಸಿಬಿಎಸ್.ಸಿ ಶಾಲೆಯ ಶಿಕ್ಷಕರು ಒಳ್ಳೆಯ ಶಿಕ್ಷಣ ನೀಡುವ ಶಿಕ್ಷಕರು ಇಂತಹ ಶಿಕ್ಷಣ ಸಂಸ್ಥೆಗೆ ಕಳಿಸಿ ಎಂದರು. ಮಕ್ಕಳಿಗೆ ಸರಿಯಾದ ಸಂಸ್ಕಾರ ಮತ್ತು ಮೌಲ್ಯಗಳನ್ನು ನೀಡಿದರೆ ಅವರು ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗಿ ಬೆಳೆದು ನಿಲ್ಲುತ್ತಾರೆ.
ಶಿಕ್ಷಣವು ಮಕ್ಕಳಲ್ಲಿ ಶಿಸ್ತು, ತಾಳ್ಮೆ, ಪ್ರೇರಣೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಬೇಕು. ತಂದೆತಾಯಿ ಮತ್ತು ಗುರುಗಳಿಗೆ ಗೌರವ ತೋರಿಸುವ ಗುಣವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಜೊತೆಗೆ ನಮ್ಮ ಪರಂಪರೆ, ಇತಿಹಾಸ, ಸಮಾಜ ಮತ್ತು ಭಾಷೆಯನ್ನು ಅರಿತುಕೊಂಡು ಅದನ್ನು ಬಳಸುವ ಹಾಗೂ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಬಗ್ಗೆ ಪ್ರೀತಿ ಮತ್ತು ಜವಾಬ್ದಾರಿಯ ಅರಿವು ವಿದ್ಯಾರ್ಥಿ ಜೀವನದಲ್ಲೇ ಮೂಡಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಉಪಸ್ಥಿತಿ ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜದ ತಾಲೂಕು ಅಧ್ಯಕ್ಷ ಶಂಕರಗೌಡ ಶಿವಣಗಿ ಕಂದಗನೂರ, ಭೂದಾನಿಗಳು ಮಹಾದೇವಯ್ಯ ಕೂಚಬಾಳ ಹುಲ್ಲೂರ, ದಿವ್ಯ ಸಾನಿಧ್ಯ ಬಾಲತಪಸ್ವಿ ಸೋಮಲಿಂಗ ಮಹಾಸ್ವಾಮಿಜಿ ಶಂಕರಲಿಂಗ ಗುರುಪೀಠ ಕೆಸರಟ್ಟಿ, ಸಾನಿಧ್ಯ ಶಾಂತಾರೂಢ ಮಹಾಸ್ವಾಮಿ ಹುಲ್ಲೂರ, ಅಧ್ಯಕ್ಷತೆ ಮಹಾದೇವ ಪವಾರ್, ಗೌರವ ಉಪಸ್ಥಿತಿ ಎಮ್ ಎಮ್ ಹುಗ್ಗಿ ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷರು ಮುದ್ದೇಬಿಹಾಳ, ಎಚ್ ಎಚ್ ಬೊಮ್ಮನಗಿ ನಿವೃತ್ತ ಜಲಾನಿಯನ್ ಅಧಿಕಾರಿಗಳು, ವಾಯ್ ಎನ್ ಸಾಲೋಟಗಿ ನಿವೃತ್ತ ಪೋಸ್ಟ್ ಆಫೀಸ್ ಹುಲ್ಲೂರ, ಎಸ್ ಕೆ ಹಳೆಮನಿ ಪಿಕೆಪಿಎಸ್ ಅಧ್ಯಕ್ಷರು, ಎಸ್ ಎ ಗೌಡರ ಬಿ ಆರ್.ಪಿ ಮುದ್ದೇಬಿಹಾಳ, ಹಣಮಂತರಾಯ ಸಿ ಗುಡಿಮನಿ ಬಿಜೆಪಿ ಮಂಡಲ ಅಧ್ಯಕ್ಷರು ಓಬಿಸಿ ಬಸನ ಬಾಗೇವಾಡಿ, ಬಿ ಎಸ್ ಪಾಟೀಲ್ ಕಂದಾಯ ನಿರಕ್ಷಕರು ಢವಳಗಿ,ಎಮ್ ಎಚ್ ಚನ್ನಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಸಂತೋಷ್ ಕಡಿ ವಕೀಲರು ವಿಜಯಪುರ, ಸಿದ್ದಮ್ಮ ಓಲೆಕಾರ ಮಾಜಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹುಲ್ಲೂರ, ಮಂಜುಳಾ ಬಿರಾದಾರ್ ಮಾಜಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ರೂಡಗಿ, ದಯಾನಂದ ಹಲಕವಟಗಿ ಗ್ರಾಮ ಪಂಚಾಯತಿ ಸದಸ್ಯರು, ಸಿರಿಯಪ್ಪ ದಾಸರ ಗ್ರಾಮ ಪಂಚಾಯತ್ ಸದಸ್ಯರು, ಕಲಾವತಿ ಮಾದರ ಗ್ರಾ.ಪಂ ಸದಸ್ಯರು, ಹನಮಗೌಡ ಬಿರದಾರ ಆರೋಗ್ಯ ಇಲಾಖೆ ನಾಲತವಾಡ, ಬಿ ಡಿ ಕಪನೂರ ಸಿ ಆರ್ ಪಿ ಹುಲ್ಲೂರ, ಶಿವಕುಮಾರ ಅಂಗಡಿ, ನಿಂಗಪ್ಪ ಓಲೇಕಾರ, ಸಿದ್ದನಗೌಡ ಪಾಟೀಲ, ಸಿದ್ದಪ್ಪ ಚಲವಾದಿ, ಶಿವಾನಂದ ಲಮಾಣಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಪತ್ರಕರ್ತ, ರಾಘವೇಂದ್ರ ಕುಲಕರ್ಣಿ, ಬಿ ಜಿ ಬಿರಾದಾರ ಮುಖ್ಯಗುರಗಳು, ಭೀಮರಾಯ ಹುಲ್ಲೂರ, ದ್ಯವಪ್ಪಗೌಡ ಚಲಮಿ, ವಿನೋದ ಓಲೇಕಾರ, ಮುತ್ತು ಕೊಡಗಾನೂರ, ಮಹೇಶ ಅಡಾಳಿ, ಶಾಲಾ ಸಮೀತಿ ಸದಸ್ಯರು ಸೇರಿದಂತೆ ಅನೇಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮಹಾದೇವ ಪವಾರ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ವಾರ್ಷಿಕೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಭೀಮನಗೌಡ ಕೊಡಗಾನೂರ ಕಾರ್ಯಕ್ರಮ ನಿರ್ವಹಿಸಿದರು. ಆಡಳಿತಧಿಕಾರಿಯಾದ ಯಲಗುರೇಶ ತೊಂಡಿಕಟ್ಟಿ ವಂದಿಸಿದರು. ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸ್ಪರ್ಧಿಸಿ ಪ್ರಥಮ ದ್ವೀತಿಯ ಯ ಪಡೆದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಸಂಜೆ, ಶಾಲಾ ಪುಟಾಣಿಗಳಿಂದ ನೃತ್ಯ ಸಿಂಚನ, ವೈವಿಧ್ಯಮಯ ನೃತ್ಯ ವೈಭವ, ಅಪರೂಒದ ಜಾನಪದ ನೃತ್ಯಗಳನ್ನು ವಿದ್ಯಾರ್ಥಿಗಳು ಅದ್ಬುತವಾಗಿ ಪ್ರದರ್ಶಿಸಿದರು.
ವರದಿ: ಮುತ್ತು ವಡವಡಗಿ, 9880143505

