ಮುದ್ದೇಬಿಹಾಳ, ನಾಗರಬೆಟ್ಟದಲ್ಲಿ ಪ್ರತ್ಯೇಕವಾಗಿ ಆಯೋಜನೆ: ಲಕ್ಷಾಂತರ ರೂ ಶಿಷ್ಯವೇತನ: ನಗದು ಬಹುಮಾನ:
ಮುದ್ದೇಬಿಹಾಳ: ಫೆ.22 ರಂದು ಬೆಳಿಗ್ಗೆ 10 ಘಂಟೆಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರವಲಯದ ವಿಜಯಪುರ ರಸ್ತೆ ಪಕ್ಕದ ಗುರಡ್ಡಿ ಪೆಟ್ರೋಲ್ ಬಂಕ್ ಹತ್ತಿರ ಇರುವ ಆಕ್ಸಫಡ್ಸ್ ಫಾಟೀಲ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫಡ್ಸ್ ಪಾಟೀಲ್ಸ್ ಶಾಲೆ ಮತ್ತು ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗುಡ್ಡದ ಪಕ್ಕದಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನಲ್ಲಿ ಆಕ್ಸಫರ್ಡ್ ಚಾಂಪಿಯನ್ ಮತ್ತು ಆಕ್ಸಫರ್ಡ್ ಪಾಟೀಲ್ಸ್ ಸೀನಿಯರ್ ಜೀನಿಯಸ್ ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಮಲ್ಲನಗೌಡ ಪಾಟೀಲ ತಿಳಿಸಿದರು.
ಗುರುವಾರ ಶಾಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಮತ್ತು ಕಲ್ಯಾಣಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಪರೀಕ್ಷೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆ ಹೊರತರುವ ಕಾರ್ಯ ಮಾಡಲಾಗಿದೆ. ಇದೀಗ ನಮ್ಮಲ್ಲೂ ಈ ಪರೀಕ್ಷೆ ಏರ್ಪಡಿಸಿ ವಿದ್ಯಾರ್ಥಿಗಳ ಪ್ರತಿಭೆ ಹೊರತರುವ ಮೂಲಕ ಪ್ರೋತ್ಸಾಹಿಸುವ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.
ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಇಇ-ಸೆಷನ್-1 ಮೇನ್ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ವಿಜಯಪುರ ಜಿಲ್ಲೆಯ ಜೊತೆಗೆ ಉತ್ತರ ಕರ್ನಾಟಕದಲ್ಲೇ ಅತ್ಯುತ್ತಮ ಸಾಧನೆ ಮಾಡಿದ ಗೌರವಕ್ಕೆ ಪಾತ್ರರಾಗಿದ್ದಾರೆ. ನಮ್ಮಲ್ಲಿ ಮೆಡಿಕಲ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. ಇತ್ತೀಚೆಗೆ ಜೆಇಇಗೂ ಹೆಚ್ಚು ಮಹತ್ವ ದೊರಕುತ್ತಿರುವುದರಿಂದ ಅದಕ್ಕೂ ತರಬೇತಿ ಕೊಡುವ ವ್ಯವಸ್ಥೆ ಮಾಡಲಾಗಿದೆ. ಪಿಯುಸಿ ನಂತರದ ಮೆಡಿಕಲ್ ಶಿಕ್ಷಣದ ಜೊತೆಗೆ ಜೆಇಇಯಲ್ಲಿ ಯಶಸ್ಸು ಗಳಿಸುವ ಅತ್ಯುತ್ತಮ ತರಬೇತಿ ಸಂಸ್ಥೆ ಎನ್ನುವ ಹೆಗ್ಗಳಿಕೆ ನಮ್ಮದಾಗಿದೆ ಎಂದರು.
ಎರಡೂ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು, ಪಾಲಕರಿಗೆ ಮುದ್ದೇಬಿಹಾಳ ಬಸ್ ನಿಲ್ದಾಣದ ಹತ್ತಿರ ಶಾಲೆಯ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಸುಗಳು ಕರೆದೊಯ್ಯುವ ಮರಳಿ ಕರೆತರುವ ಕಾರ್ಯ ಮಾಡಲಿವೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಐಡಿ ಕಾರ್ಡ್, ಅಧಾರ ಕಾರ್ಡ್ ಕಡ್ಡಾಯವಾಗಿ ತರಬೇಕು. ಪರೀಕ್ಷೆಯ ದಿನದಂದೇ ಹೆಸರು ನೋಂದಾಯಿಸಲು ಅವಕಾಶವಿದೆ ಎಂದರು. ನಿರ್ದೇಶಕ ದರ್ಶನಗೌಡ ಪಾಟೀಲ, ರಾಜಶೇಖರ ಹಿರೇಮಠ, ಆನಂದ ನಾವಿ ಇನ್ನಿತರರು ಇದ್ದರು.
*ಆಕ್ಸಫರ್ಡ್ ಚಾಂಪಿಯನ್ ಪರೀಕ್ಷೆ:ಮುದ್ದೇಬಿಹಾಳದ ಹೈಸ್ಕೂಲನಲ್ಲಿ ನಡೆಯುವ 10 ಲಕ್ಷ ರೂ ಶಿಷ್ಯವೇತನ ಕೊಡಲಾಗುವ ಆಕ್ಸಫರ್ಡ್ ಚಾಂಪಿಯನ್ ಪರೀಕ್ಷೆಗೆ 5, 8, 9 ಮತ್ತು 10ನೇ ತರಗತಿಯ ರಾಜ್ಯ, ಐಸಿಎಸ್ಇ, ಸಿಬಿಎಸ್ಇ ಪಠ್ಯಕ್ರಮದ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಪರೀಕ್ಷೆಗಳಲ್ಲಿ ತರಗತಿವಾರು 1-5 ರ್ಯಾಂಕ್ ಪಡೆಯುವವರಿಗೆ ಒಂದು ವರ್ಷದ ಸಂಪೂರ್ಣ ಉಚಿತ ಶಿಕ್ಷಣ ಕೊಡಲಾಗುತ್ತದೆ. 6,7 ರ್ಯಾಂಕ್ ಪಡೆಯುವವರಿಗೆ ಶುಲ್ಕದಲ್ಲಿ ಶೇ.75, 8,9 ರ್ಯಾಂಕ್ ಪಡೆಯುವವರಿಗೆ ಶುಲ್ಕದಲ್ಲಿ ಶೇ.50, 10,11 ರ್ಯಾಂಕ್ ಪಡೆಯುವವರಿಗೆ ಶುಲ್ಕದಲ್ಲಿ ಶೇ.25 ರಿಯಾಯಿತಿ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಶೇ.40 ಅಂಕ ಗಳಿಸುವ ಎಲ್ಲ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.10 ರಿಯಾಯಿತಿ ಇದೆ. ಇಂಗ್ಲೀಷ್ ಗ್ರಾಮರ್, ವಿಜ್ಞಾನ, ಗಣಿತ ವಿಷಯಗಳ ಮೇಲೆ 60 ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಿದ್ದು ಪರೀಕ್ಷೆ ಒಂದು ಘಂಟೆ ಕಾಲಾವಧಿಯದ್ದಾಗಿರುತ್ತದೆ. ಆಸಕ್ತರು ವಿದ್ಯಾರ್ಥಿ ಹೆಸರು-ತರಗತಿ-ಶಾಲೆಯ ಹೆಸರು-ವಿಳಾಸ-ಮೋಬೈಲ್ ಸಂಖ್ಯೆ-ಮಾದರಿಯ ಎಸ್ಎಂಎಸ್ ಅಥವಾ ವಾಟ್ಸಪ್ ಸಂದೇಶವನ್ನು ಮೋ:8792156682 ಸಂಖ್ಯೆಗೆ ಕಳಿಸಬೇಕು. ಹೆಚ್ಚಿನ ಮಾಹಿತಿಗೆ ಮೋ:8431936945, 7847981398 ಸಂಖ್ಯೆಗಳನ್ನು ಸಂಪರ್ಕಿಸಬೇಕು.
*ಆಕ್ಸಫರ್ಡ ಪಾಟೀಲ್ಸ್ ಸೀನಿಯರ್ ಜೀನಿಯಸ್ ಪರೀಕ್ಷೆ:ನಾಗರಬೆಟ್ಟದ ಗುಡ್ಡದ ಹತ್ತಿರ ಇರುವ ಸೈನ್ಸ್ ಪಿಯು ಕಾಲೇಜಿನಲ್ಲಿ ನಡೆಯುವ ನಗದು ಬಹುಮಾನ ಮತ್ತು ಶಿಷ್ಯವೇತನ ಕೊಡಲಾಗುವ ಆಕ್ಸಫರ್ಡ ಪಾಟೀಲ್ಸ್ ಸೀನಿಯರ್ ಜೀನಿಯಸ್ ಪರೀಕ್ಷೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ರಾಜ್ಯ, ಐಸಿಎಸ್ಇ, ಸಿಬಿಎಸ್ಇ ಪಠ್ಯಕ್ರಮದ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಮೊದಲ 1 ರಿಂದ 7 ಸ್ಥಾನ ಪಡೆಯುವವರಿಗೆ ಕ್ರಮವಾಗಿ ತಲಾ, 50000, 40000, 30000, 20000, 10000, 5000, 2500 ನಗದು ಪುರಸ್ಕಾರ ನೀಡಲಾಗುತ್ತದೆ. ಇದಲ್ಲದೆ 1-10 ರ್ಯಾಂಕ್ ಪಡಯುವ ವಿದ್ಯಾರ್ಥಿಗಳಿಗೆ ಒಂದು ವರ್ಷದ ಪ್ರಥಮ ಪಿಯುಸಿಯ ವಸತಿ ಸಹಿತ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. 11-20 ರ್ಯಾಂಕ್ ಪಡೆಯುವ ಟಾಪರಗಳಿಗೆ ಒಂದು ವರ್ಷದ ಪ್ರಥಮ ಪಿಯುಸಿಯ ಬೋಧನಾ ಶುಲ್ಕದಲ್ಲಿ ಶೇ.100 ರಿಯಾಯಿತಿ ನೀಡಲಾಗುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯಗಳ ಮೇಲೆ 60 ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಿದ್ದು ಒಂದು ಘಂಟೆ ಕಾಲಾವಧಿ ಇರುತ್ತದೆ. ಪ್ರತಿ ಪ್ರಶ್ನೆಗೆ 4 ಅಂಕ ಇದ್ದು ತಪ್ಪು ಉತ್ತರಕ್ಕೆ ಒಂದು ಅಂಕ ಕಡಿತಗೊಳಿಸಲಾಗುತ್ತದೆ. ಆಸಕ್ತರು ವಿದ್ಯಾರ್ಥಿ ಹೆಸರು-ತರಗತಿ-ಶಾಲೆಯ ಹೆಸರು-ವಿಳಾಸ-ಮೋಬೈಲ್ ಸಂಖ್ಯೆ-ಮಾದರಿಯ ಎಸ್ಎಂಎಸ್ ಅಥವಾ ವಾಟ್ಸಪ್ ಸಂದೇಶವನ್ನು ಮೋ:9380095756 ಸಂಖ್ಯೆಗೆ ಕಳಿಸಬೇಕು. ಹೆಚ್ಚಿನ ಮಾಹಿತಿಗೆ ಮೋ:7483147040, 8310035858, 9019460665, 8971769144 ಸಂಖ್ಯೆಗಳನ್ನು ಸಂಪರ್ಕಿಸಬೇಕು.
-ವರದಿ: ಮುತ್ತು ವಡವಡಗಿ, 9880143505

