ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಗುಡ್ಡದ ಹತ್ತಿರ ಇರುವ ಶ್ರೀ ದತ್ತಾತ್ರೇಯ ವಿದ್ಯಾವರ್ಧಕ ಸಂಘದ ಆಕ್ಸಫಡ್ಸ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಇಇ ಸೆಷನ್-1 ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ ಸಾಧನೆ ತೋರಿದ್ದಾರೆ. ವಿದ್ಯಾರ್ಥಿಗಳಾದ ಅಭಿಷೇಕ ಎಸ್. ಟಕ್ಕಳಕಿ (ಶೆ.99.28 ಅಂಕ), ಅದಿತಿ ಎನ್. ಸವಣೂರ (ಶೇ.99.23), ಪ್ರೀತಮ್ ಆನಂದ ಲಮಾಣಿ (ಶೇ.99.12), ಗಾಯತ್ರಿ ಎಂ. ಶಿಂಧೆ (ಶೆ.98.32), ಮಾನಸ ವಿ. ಹಿರೇಮಠ (ಶೇ.98.04), ಅಜೀತ್ ಮಲ್ಲಪ್ಪ ಬೆಳ್ಳುಬ್ಬಿ (ಶೇ.97.94), ಭಾಗ್ಯಶ್ರೀ ಎಂ. ಬಸರಕೋಡ (ಶೇ.97.6), ಮಾನಸಾ ಹುಲ್ಯಾಳ (ಶೇ.97.46), ಶರತ್ ಎಸ್.ಗಬಸಾವಳಗಿ (ಶೇ.97.46), ವರ್ಷಾ ವಿ.ಯರಗಟ್ಟಿ (ಶೇ.97.23), ಸುಮಿತ್ ಅರುಣ್ ಪತ್ತಾರ (ಶೇ.97.16), ಪ್ರತೀಕ್ಷಾ ರಾಜೀವ್ ಕುಂಬಾರ (ಶೇ.96.83), ಸ್ಪೂರ್ತಿ ಎಸ್.ಚೌಡಕಿ (ಶೇ.96.81), ಭಾಗ್ಯ ಪಿ. ಹೊಸಮನಿ (ಶೇ.96.7), ಮಹ್ಮದಇಬ್ರಾಹಿಂ ಎ. ವಾಲಿಕಾರ (ಶೇ.96.66), ಚಿನ್ಮಯಿ ಆರ್.ನೇಗಿನಹಾಳ (ಶೇ.96.17), ಸುದರ್ಶನ ಜೆ.ಕುಲಕರ್ಣಿ (ಶೇ.96.14), ಸಿದ್ಧಾರ್ಥ ಎಸ್. ಕಡಿ (ಶೇ.96.14), ರಾಜೇಶ್ವರಿ ಎಸ್. ಕೋಲಕಾರ (ಶೇ.95.92), ಸಂಪತ್ ಎಸ್. ಕಟ್ಟಿಮಠ (ಶೇ.95.74), ಗಾಯತ್ರಿ ಎಂ. ಪಾಟೀಲ (ಶೇ. 95.6), ವಿಕಾಸ್ ಕ್ಷತ್ರಿ (ಶೇ.95.56), ಅಪರ್ಣಾ ಎಸ್. ಲಚ್ಯಾಣ (ಶೇ.95.09), ಅಮಸಿದ್ಧ ವಿ. ಪೂಜಾರಿ (ಶೇ.95.08), ಮಲ್ಲಿಕಾರ್ಜುನ ಗುಬ್ಬೇವಾಡ (ಶೇ.95.06), ಪವನ್ ಐ. ಹಿರೇಮಠ (ಶೆ.95.06), ಅಕ್ಷತಾ ಜಿ ಪೂಜೇರ್ (ಶೇ.95.01) ಇವರೆಲ್ಲ ಶೇ.95ಕ್ಕೂ ಹೆಚ್ಚು ಅಂಕ ಗಳಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಫಲಿತಾಂಶ ಕುರಿತು ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಅವರು ನಮ್ಮ ಕಾಲೇಜು ಮೆಡಿಕಲ್ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಮಾತ್ರವಲ್ಲದೆ ಜೆಇಇ ಅಂಥ ಉನ್ನತ ಶಿಕ್ಷಣಕ್ಕೂ ವಿದ್ಯಾರ್ಥಿಗಳನ್ನು ತಯಾರು ಮಾಡುವ ಸಾಮರ್ಥ್ಯ ಹೊಂದಿರುವುದು ಈ ಫಲಿತಾಂಶದಿಂದ ಸಾಬೀತಾಗಿದೆ. ನಮ್ಮಲ್ಲಿ ನೀಟ್, ಜೆಇಇಗೆ ಪ್ರತ್ಯೇಕ ತರಬೇತಿ ನೀಡಲಾಗುತ್ತದೆ. ನೀಟ್, ಜೆಇಇಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ವಹಿಸುವ ಮೂಲಕ ಅತ್ಯುತ್ತಮ ಮಾರ್ಗದರ್ಶನ ದೊರೆಯುವಂತೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಜೊತೆಗೆ ಸ್ಮಾರ್ಟನೆಸ್ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಾಧನೆ ತೋರಿದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಪರಿವಾಗಿ ಅಭಿನಂದಿಸುತ್ತೇವೆ ಎಂದು ತಿಳಿಸಿದ್ದಾರೆ.
ವರದಿ: ಮುತ್ತು ವಡವಡಗಿ, ಮುದ್ದೇಬಿಹಾಳ, ಮೋ:9880143505

