ಪತ್ರಕರ್ತರ ಸಂಘಕ್ಕೆ ಕಾರ್ಯದರ್ಶಿ, ಐವರು ನಾಮನಿರ್ದೇಶಿತ ಸದಸ್ಯರ ನೇಮಕ
ಲಿಂಗಸುಗೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಕಾರ್ಯದರ್ಶಿ ಮತ್ತು ಐದು ಜನ ಕಾರ್ಯಕಾರಿ ಸಮಿತಿಗೆ ಪತ್ರಕರ್ತರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಕಾರ್ಯದರ್ಶಿಯಾಗಿ ರಾಯಚೂರು ಧ್ವನಿ ದಿನಪತ್ರಿಕೆಯ ತಾಲ್ಲೂಕು ವರದಿಗಾರ ರವಿಕುಮಾರ ಹೊಸಮನಿ, ಕಾರ್ಯಕಾರಣಿ ನಾಮನಿರ್ದೇಶಕರಾಗಿ ಪ್ರಜಾವಾಣಿ ಪತ್ರಿಕೆಯ ತಾಲ್ಲೂಕು ವರದಿಗಾರ ನಾಗರಾಜ ಗೋರೆಬಾಳ, ವಿಜಯವಾಣಿ ದಿನಪತ್ರಿಕೆಯ ಮುದುಗಲ್ ವರದಿಗಾರ ಶಿವರಾಜ ಸುಂಕದ, ರಾಯಚೂರು ವಾಣಿ ಪತ್ರಿಕೆಯ ತಾಲ್ಲೂಕು ವರದಿಗಾರ ಕಿಶೋರ್ ಮುತಾಲಿಕ್, ರಾಯಚೂರು ಸುದ್ದಿ ಬಿಂಬ ತಾಲ್ಲೂಕು ವರದಿಗಾರ ಗೌತಮ್ ಕುಮಾರ್, ಬಳ್ಳಾರಿ ಬೆಳಗಾಯಿತು ಪತ್ರಿಕೆಯ ಹಟ್ಟಿ ವರದಿಗಾರ ಸುಭಾಷ್ ಹಟ್ಟಿ ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಶಿವರಾಜ ಕೆಂಭಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






