Monday, April 13, 2026
HomeUncategorizedಸಾಹಿತಿ, ಚಿಂತಕ ವೀರೇಶ ಗೂಡ್ಲಮನಿ ಅವರ ಮಹಿಮಾಂತಕ ಶ್ರೀ ಮನ್ನೀರೇಶ್ವರ ಕೃತಿ ಲೋಕಾರ್ಪಣೆ

ಸಾಹಿತಿ, ಚಿಂತಕ ವೀರೇಶ ಗೂಡ್ಲಮನಿ ಅವರ ಮಹಿಮಾಂತಕ ಶ್ರೀ ಮನ್ನೀರೇಶ್ವರ ಕೃತಿ ಲೋಕಾರ್ಪಣೆ

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ತಾಲೂಕಿನ ಖಿಲಾರಹಟ್ಟಿಯಲ್ಲಿ ಶನಿವಾರ ಯುಗಾದಿ ಹಬ್ಬದ ಅಂಗವಾಗಿ ಸಮಾಜ ಸೇವಕ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ಅವರ ಕುಟುಂಬದ ನೇತೃತ್ವದಲ್ಲಿ, ಗ್ರಾಮಸ್ಥರ ಸಹಕಾರದೊಂದಿಗೆ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ, ಧರ್ಮಸಭೆ ಸಮಾರಂಭದಲ್ಲಿ ಬಸವನ ಬಾಗೇವಾಡಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ, ಸಾಹಿತಿ, ಚಿಂತಕ, ಸಂಶೋಧಕ ವೀರೇಶ ಗೂಡ್ಲಮನಿ ಅವರು ರಚಿಸಿರುವ ಚರಿತ್ರೆಯ ಪುಸ್ತಕ ಮಹಿಮಾಂತಕ ಶ್ರೀ ಮನ್ನೀರೇಶ್ವರ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ, ಎಂ.ಎನ್.ಮದರಿ, ಎನ್.ಎಸ್.ಪೂಜಾರಿ, ವೈ.ಎಚ್.ವಿಜಯಕರ್, ಶಾಂತಗೌಡ ಪಾಟೀಲ ನಡಹಳ್ಳಿ, ಕೆ.ಆರ್.ಬಿರಾದಾರ, ಬಿ.ಎಸ್.ಶಿರೋಳ, ಎನ್.ಎಸ್.ಬಪ್ಪರಗಿ, ಅಗತೀರ್ಥದ ರೇವಣಸಿದ್ದೇಶ್ವರ ಶಾಂತಮಯ ಶ್ರೀ, ತಾಳಿಕೋಟೆಯ ಸಿದ್ದಲಿಂಗ ದೇವರು, ಸಿದ್ದನಕೊಳ್ಳದ ಡಾ|ಶಿವಕುಮಾರ ಶ್ರೀ, ಯರಝರಿಯ ಮಲ್ಲಾರಲಿಂಗ ಪ್ರಭುಗಳು, ಸರೂರಿನ ಶಿವಯ್ಯ ಗುರುವಿನ, ಖಿಲಾರಹಟ್ಟಿಯ ರಮಾನಂದ ಸ್ವಾಮೀಜಿ, ಸಿದ್ದಾಪೂರದ ಅರವಿಂದ ಒಡೆಯರ್ ಸ್ವಾಮೀಜಿ, ಸಾಲವಾಡಗಿಯ ದೊಡ್ಡ ಸಣ್ಣೆಕಪ್ಪ ಮುತ್ಯಾ, ತಿಂಥಣಿ ಬ್ರಿಜ್‌ನ ಸಿದ್ದಬೀರ ದೇವರು, ಬಿ.ಜಿ.ಜಗ್ಗಲ್ ವಕೀಲರು, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಆ‌ರ್.ಬಿರಾದಾರ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಬಿ.ಕೆ.ಬಿರಾದಾರ, ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಮಾಜಿ ನಿರ್ದೇಶಕಿ ಶ್ರೀದೇವಿ ಮದರಿ, ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ, ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರ ಸೇರಿ ಹಲವರು ಹಲವರು ವೇದಿಕೆಯಲ್ಲಿದ್ದರು.

ಈ ಕೃತಿ ಕೇವಲ ಒಂದು ಚರಿತ್ರೆ ಪುಸ್ತಕವಲ್ಲ; ಇದು ನಮ್ಮ ಖಿಲಾರಹಟ್ಟಿ ಗ್ರಾಮದ ಇತಿಹಾಸವನ್ನು ಹೊತ್ತ ಅಮೂಲ್ಯ ದಾಖಲೆ ಕೂಡ ಹೌದು ಎಂದು ಕೃತಿ ರಚನೆಕಾರರಾದ ವಿರೇಶ್ ಎಚ್ ಗೂಡ್ಲಮನಿ (ಖಿಲಾರಹಟ್ಟಿ) ತಿಳಿಸಿದರು.

ವರದಿ: ಮುತ್ತು ವಡವಡಗಿ, 9880143505

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments