Friday, April 17, 2026
HomeUncategorizedಭಾಷಣ ಸ್ಪರ್ಧೆಯಲ್ಲಿ ಲಯನ್ಸ್ ಶಾಲೆ ಪ್ರಥಮ

ಭಾಷಣ ಸ್ಪರ್ಧೆಯಲ್ಲಿ ಲಯನ್ಸ್ ಶಾಲೆ ಪ್ರಥಮ

ಸರ್ವಾಂಗಿಣ ಅಭಿವೃದ್ದಿ ಹೋರಾಟ ಸಮಿತಿ (ರಿ.) ಕೊಪ್ಪಳ ಇವರ ಆಶ್ರಯದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಲಯನ್ಸ್ ಅನುದಾನಿತ ಶಾಲೆ, ಗಂಗಾವತಿಯ ವಿದ್ಯಾರ್ಥಿ ಕು. ಭುವನಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಎಂದು ಜಿಲ್ಲಾ ಅಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ತಿಳಿಸಿದರು.

ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಅನೇಕ ಸ್ಪರ್ಧಿಗಳು ಪಾಲ್ಗೊಂಡಿದ್ದು, ದೇಶಕ್ಕಾಗಿ ಹಾಗೂ ನನ್ನ ಉಜ್ವಲ ಭವಿಷ್ಯಕ್ಕಾಗಿ ನನ್ನ ಸಂಕಲ್ಪ ವಿಷಯದ ಕುರಿತು ಮನೋಜ್ಞವಾಗಿ ಪ್ರಭಾಷಣ ಮಾಡಿದರು. ಇವರಲ್ಲಿ ಕು. ಭುವನಕುಮಾರ್ ನೀಡಿದ ವಾದಾತ್ಮಕ, ಸ್ಪಷ್ಟ ಮತ್ತು ಮನಮುಟ್ಟುವ ಭಾಷಣವನ್ನೂ ನ್ಯಾಯಮಂಡಳಿ ಶ್ಲಾಘಿಸಿದೆ.

ಸಂಘಟನೆ ವತಿಯಿಂದ ವಿಜೇತರಿಗೆ ಪ್ರಮಾಣಪತ್ರ ಮತ್ತು ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು ಹಾಗೂ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.

ಕು. ಭುವನಕುಮಾರ್ ಮುಂದಿನ ಸ್ಪರ್ಧೆಗಳಿಗೂ ಪಾಲ್ಗೊಂಡು ಹೆಚ್ಚಿನ ಮಟ್ಟದಲ್ಲಿ ಸಾಧಿಸಲಿ ಎಂದು ಸಂಘಟನೆ ಶುಭ ಹಾರೈಸಿದೆ.

ವರದಿ —–ಎಸ್. ಎ. ಮಟ್ಟೂರು

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments