ಸಾಣಪುರ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯ ವೀಕ್ಷಣೆಗೆ ಬಂದಿದ್ದ ವಿದೇಶಿ ಮಹಿಳೆಯ ಮೇಲೆ ನಡೆದ ದುರ್ಘಟನೆ ನಮ್ಮೆಲ್ಲರ ಮನಸ್ಸಿಗೆ ನೋವು ತಂದಿತ್ತು. ಆದರೆ ಆರೋಪಿಗಳನ್ನು ಶೀಘ್ರವೇ ಬಂಧಿಸುವಲ್ಲಿ ಸಾಹಸ ಮತ್ತು ಚಾತುರ್ಯ ತೋರಿದ ಪೊಲೀಸ್ ಪೇದೆಗಳಾದ ಚಿರಂಜೀವಿ, ವಿಶ್ವ, ಮೈಲಾರಪ್ಪ, ಗ್ಯಾನಪ್ಪ, ದೇವೇಂದ್ರಪ್ಪ ಹಾಗೂ ಇತರರ ಕಾರ್ಯ ಶ್ಲಾಘನೀಯವಾಗಿದೆ.
ಅವರ ಪರಿಶ್ರಮ, ಜಾಗೃತತೆ ಮತ್ತು ಕರ್ತವ್ಯನಿಷ್ಠೆಯಿಂದ ನ್ಯಾಯದ ಗೆಲುವು ಸಾಧ್ಯವಾಯಿತು. ಇವರ ಸಾಧನೆಯನ್ನು ಮೆಚ್ಚಿ Karnataka Police ಇಲಾಖೆಯ ಬಳ್ಳಾರಿ ವಲಯ IGP ಹಾಗೂ Koppal ಜಿಲ್ಲೆಯ SP ಅವರು ಅಭಿನಂದಿಸಿ ಗೌರವಿಸಿರುವುದು ಪೊಲೀಸ್ ಇಲಾಖೆಯ ಗೌರವವನ್ನು ಮತ್ತಷ್ಟು ಎತ್ತಿದೆ.
ಜನರ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿಯ ಸೇವೆ ಸದಾ ಸ್ಮರಣೀಯ. ಇಂತಹ ಧೈರ್ಯಶಾಲಿ ಅಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸೇವಾ ಮನೋಭಾವ ಮತ್ತಷ್ಟು ಯುವಕರಿಗೆ ಸ್ಫೂರ್ತಿಯಾಗಲಿ💐💐🙏🙏
ಆಂಜನೇಯ ಮಟ್ಟೂರ
ಶಿಕ್ಷಕರು. ಗಂಗಾವತಿ

