Monday, April 13, 2026
Homeನಿಮ್ಮ ಜಿಲ್ಲೆಕಾಮನಕೇರಿ ಗ್ರಾಮದಲ್ಲಿ ನಗೆಯ ಹಬ್ಬ, ಗೀತ ವೈಭವ: ಮಾರ್ಚ್ 24ಕ್ಕೆ ಜೀ ಕನ್ನಡ 'ಕಾಮಿಡಿ ಕಿಲಾಡಿಗಳ'...

ಕಾಮನಕೇರಿ ಗ್ರಾಮದಲ್ಲಿ ನಗೆಯ ಹಬ್ಬ, ಗೀತ ವೈಭವ: ಮಾರ್ಚ್ 24ಕ್ಕೆ ಜೀ ಕನ್ನಡ ‘ಕಾಮಿಡಿ ಕಿಲಾಡಿಗಳ’ ಧಮಾಕಾ!

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಕಾಮನಕೇರಿ ಗ್ರಾಮದಲ್ಲಿ ಇದೇ ಮಾರ್ಚ್ 24ರ ಮಂಗಳವಾರ ರಾತ್ರಿ ಕಲಾಭಿಮಾನಿಗಳಿಗೆ ರಸದೌತಣ ಕಾದಿದೆ. ಗ್ರಾಮದ ಶ್ರೀ ದಾವಲಮಲಿಕ್ ಜಾತ್ರಾ ಮಹೋತ್ಸವದ ಪ್ರಯುಕ್ತ ‘ಕಾಮನಕೇರಿ ಗೆಳೆಯರ ಬಳಗ’ ವತಿಯಿಂದ ಅತ್ಯಂತ ವೈಭವದ ‘ಸಂಗೀತ ರಸಮಂಜರಿ ಹಾಗೂ ಹಾಸ್ಯ ಸಂಜೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:
ಹಾಸ್ಯ ಲೋಕದ ಸವಾರಿ: ಜೀ ಕನ್ನಡ ವಾಹಿನಿಯ ಖ್ಯಾತ ‘ಕಾಮಿಡಿ ಕಿಲಾಡಿಗಳು’ ತಂಡದ ಕಲಾವಿದರಿಂದ ಹೊಟ್ಟೆ ಹುಣ್ಣಾಗಿಸುವಂತಹ ಹಾಸ್ಯ ಪ್ರದರ್ಶನ ನಡೆಯಲಿದೆ.
ಗಾಯನ ಮತ್ತು ನೃತ್ಯ ವೈಭವ: ಪ್ರಸಿದ್ಧ ಜಾನಪದ ಗಾಯಕರು ಹಾಗೂ ಆರ್ಕೆಸ್ಟ್ರಾ ತಂಡದಿಂದ ಸುಶ್ರಾವ್ಯ ಗಾಯನ ಮತ್ತು ನೃತ್ಯ ಪ್ರದರ್ಶನ ಇರಲಿದೆ.
ಕಲಾವಿದರ ದಂಡು: ಸಂಜು ,ಪಲ್ಲವಿ,
ನೃತ್ಯ ರಾಣಿ ಪ್ರೀಯಾಂಕ, ಬಾಗಲಕೋಟ, ಸ್ವಪ್ನಾ ಹುಬ್ಬಳ್ಳಿ, ಮುನೀರ,ದೇವಕುಮಾರ ಜನಪದ ಗಾಯಕ ರಾಘು ಚಿಂಚಲಿ, ಗಾನ ಕೋಗಿಲೆ ಗೀತಾ ಒಡೆಯರ್ ಜಾನಪದ ಕಿಲಾಡಿ ಸಿದ್ಧಾರ್ಥ ಬೈಚಬಾಳ ಸೇರಿದಂತೆ ನಾಡಿನ ಹೆಸರಾಂತ ಕಲಾವಿದರು ಈ ಸಂಜೆಯ ಮೆರುಗು ಹೆಚ್ಚಿಸಲಿದ್ದಾರೆ.
ವಿಶೇಷ ಸೂಚನೆ:
ಸ್ಥಳ: ಕಾಮನಕೇರಿ ಗ್ರಾಮದ ಅಂಬಿಗೇರ ಚೌಡಯ್ಯ ಮಂದಿರ ಸಭಾಂಗಣ (ಬಸವನಬಾಗೇವಾಡಿ ತಾಲ್ಲೂಕು).
ಸಮಯ: ರಾತ್ರಿ 9:00 ಗಂಟೆಯಿಂದ ಕಾರ್ಯಕ್ರಮ ಆರಂಭ.ಶ್ರೀ ದಾವಲಮಲಿಕ್ ಜಾತ್ರೆಯ ಈ ಸಂಭ್ರಮದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾಮನಕೇರಿ ಗೆಳೆಯರ ಬಳಗ ಕೋರಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments