ಮುದ್ದೇಬಿಹಾಳ: ಪಟ್ಟಣದ ಪುರಸಭೆ ಹತ್ತಿರ ಬಸ್ ನಿಲ್ದಾಣ ಕಂಪೌಂಡಗೆ ಹೊಂದಿಕೊಂಡು ಇರುವ ಶ್ರೀ ಫಕಿರೇಶ್ವರ ಡೈಗ್ನೋಸ್ಟಿಕ್ಸ್ ಸೆಂಟರನ ಶಿವಯೋಗಿಮಠ ಬಿಲ್ಡಿಂಗನಲ್ಲಿ ಮಾ.2 ರಂದು ಬೆಳಿಗ್ಗೆ 8 ರಿಂದ ಮದ್ಯಾಹ್ನ 2 ಘಂಟೆಯವರೆಗೆ ದಿವಂಗತರಾದ ಡಾ|ಕೂಡ್ಲಯ್ಯ ಘಟವಾಳಯ್ಯ ಶಿವಯೋಗಿಮಠ, ಬೋರಮ್ಮ ಕೂಡ್ಲಯ್ಯ ಶಿವಯೋಗಿಮಠ, ಶಿವಶರಣಯ್ಯ ಕೂಡ್ಲಯ್ಯ ಶಿವಯೋಗಿಮಠ ಅವರ ಸ್ಮರಣಾರ್ಥ ಆರೋಗ್ಯ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಮಧುಮೇಹ ರಕ್ತ ತಪಾಸಣೆ, ಹೃದಯ ಸಂಬಂಧಿತ ಇಸಿಜಿ, ಬಿಪಿ ರಕ್ತದ ಒತ್ತಡ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಆಸಕ್ತರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿಬಿರ ಆಯೋಜಕರಾದ ಡಾ|ಸಿ.ಕೆ.ಶಿವಯೋಗಿಮಠ, ಶಾಂತಯ್ಯ ಶಿವಯೋಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೋ: 9886434651, 99024 81779 ಸಂಪರ್ಕಿಸಬಹುದು.
ವರದಿ: ಮುತ್ತು ವಡವಡಗಿ, ಮೋ: 9880143505

