ಮುದ್ದೇಬಿಹಾಳ: ಆಲಮಟ್ಟಿ ರಸ್ತೆ ಪಕ್ಕದ ಹುಲ್ಲೂರ ಹತ್ತಿರ ಇರುವ ಚನ್ನಬಸವ ಶ್ರೀ ಎಜ್ಯೂಕೇಶನ್, ರೂರಲ್, ಕಲ್ಬರಲ್ ಸೊಸೈಟಿಯ ಎಸ್.ಎನ್.ಡಿ ಇಂಟರನ್ಯಾಶನಲ್ ಶಾಲೆಯಲ್ಲಿ ಮಾ.15ರಂದು ಚನ್ನಬಸವ ಶ್ರೀ ರಾಜ್ಯ ಪ್ರಶಸ್ತಿ, 5 ಲಕ್ಷ ರೂ ಮೌಲ್ಯದ ಚನ್ನಬಸವ ಶಿಷ್ಯವೇತನ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎಂ.ಎಸ್.ಕೊಪ್ಪ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಂದು ಬೆಳಿಗ್ಗೆ 11-30 ರಿಂದ ಮದ್ಯಾಹ್ನ 1-30 ಘಂಟೆಯವರೆಗೆ ಶಿಷ್ಯವೇತನ ಪರೀಕ್ಷೆ ನಡೆಯಲಿದ್ದು 100 ಅಂಕಗಳ 120 ನಿಮಿಷ ಕಾಲಾವಧಿಯ ಬಹುಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರಥಮ 15 ವಿದ್ಯಾರ್ಥಿಗಳಿಗೆ ತಲಾ 15 ಸಾವಿರ, ದ್ವಿತೀಯ 10 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ಬಹುಮಾನ ಮತ್ತು ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದಲ್ಲಿ ಶೇ.10 ರಿಯಾಯಿತಿ ಕೊಡಲಾಗುತ್ತದೆ. ಮದ್ಯಾಹ್ನ 3 ಘಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಯರಝರಿ ಯಲ್ಲಾಲಿಂಗೇಶ್ವರಮಠದ ಮಲ್ಲಾಲಿಂಗ ಪ್ರಭುಗಳು ದಿವ್ಯಸಾನಿಧ್ಯ ವಹಿಸುವರು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ, ಶಾಲೆಯ ಗೌರವಾಧ್ಯಕ್ಷ ಎಸ್.ಬಿ.ಚಲವಾದಿ ಅಧ್ಯಕ್ಷತೆ ವಹಿಸುವರು. ಬಿಇಓ ಬಿ.ಎಸ್.ಸಾವಳಗಿ ಉದ್ಘಾಟಿಸುವರು. ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಿ.ಎಚ್.ಮುದ್ನೂರ, ಪ್ರಧಾನ ಕಾರ್ಯದರ್ಶಿ ಎನ್.ಎಸ್.ತುರಡಗಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಶಿಕ್ಷಣ ಸಂಯೋಜಕ ಸುರೇಶ ಹಿರೇಮಠ ಮುಖ್ಯ ಅತಿಥಿಗಳು.
ಚನ್ನಬಸವಶ್ರೀ ಪ್ರಶಸ್ತಿ ಪುರಸ್ಕೃತರು:
ಮುದ್ದೇಬಿಹಾಳದ ಕುಮಾರ ಹಿರೇಮಠ, ದಲಿತಪರ ಹೋರಾಟಗಾರ ಹರೀಶ ನಾಟೀಕಾರ, ಪತ್ರಕರ್ತರಾದ ಗುಲಾಮಮೊಹಮ್ಮದ ದಫೇದಾರ, ಸಾಗರ ಉಕ್ಕಲಿ, ಶಿಕ್ಷಕರಾದ ಎಸ್.ಎಂ.ಜೋಗಿನ(ಅಡವಿಸೋಮನಾಳ), ಎಸ್.ಪಿ.ಢವಳಗಿ(ಆಲೂರ), ರೇಷ್ಮಾ ಶೇಖ(ಸಾಲೋಡಗಿ), ವೀರೇಶ ಹುಲಮನಿ(ಬಳಬಟ್ಟಿ), ಕಾಶಿನಾಥ ಸೂಳಿಬಾವಿ(ಬಸರಕೋಡ), ವಿಜಯಲಕ್ಷ್ಮಿ ನಿಡಗುಂದಿ(ಢವಳಗಿ), ಎಂ.ಕೆ.ಪೂಜಾರಿ(ಹಡಲಗೇರಿ), ಜಯಶ್ರೀ ಕರಡ್ಡಿ(ಇಂಗಳಗೇರಿ), ಎಸ್.ಜಿ.ನೀರಲಗಿ(ಕೊಣ್ಣೂರ), ಸಂಗಣ್ಣ ಹೊಸಮನಿ(ಮಡಿಕೇಶ್ವರ), ಜ್ಯೋತಿ ಬಿರಾದಾರ(ಮಿಣಜಗಿ), ಎಸ್.ಎಸ್.ಪಾಟೀಲ(ಮುದ್ದೇಬಿಹಾಳ), ಬಸಮ್ಮ ಅಮಾತೆಗೌಡರ(ನಾಲತವಾಡ), ವಿಜಯಲಕ್ಷ್ಮಿ ಬೋವಿ(ರಕ್ಕಸಗಿ), ಎಸ್.ಐ.ಪತ್ತಾರ(ತಾಳಿಕೋಟೆ), ವಿ.ಎಸ್.ತೆಗ್ಗಿ(ತಂಗಡಗಿ), ಜಿ.ಬಿ.ಬಿರಾದಾರ(ತುಂಬಗಿ), ಭೀಮಪ್ಪ ಮಾದರ(ಹುಲ್ಲೂರ), ಎಂ.ಬಿ.ಪಾಟೀಲ(ಹಿರೇಮುರಾಳ), ಆರ್.ಎಂ.ಲಮಾಣಿ(ಯರಝರಿ), ಬಿ.ಎ.ಉಡಚನಕರ(ಹುಲ್ಲೂರ), ವೈ.ಎಸ್.ಖಾದ್ರಿ(ಬಿದರಕುಂದಿ), ಎಚ್.ಎಂ.ಮಕಾನದಾರ(ಕೊಣ್ಣೂರ), ಯಮನಪ್ಪ ನಾಯ್ಕೋಡಿ(ಹುಲ್ಲೂರ), ಎಂ.ಬಿ.ಗುಡಗುಂಟಿ(ಹಡಲಗೇರಿ) ಹಾಗೂ ಸಂಘ ಸಂಸ್ಥೆ ವಿಭಾಗದಲ್ಲಿ ಯಶಸ್ವಿನಿ ಮಹಿಳಾ ಸಂಘ(ಕುಂಟೋಜಿ).

