ಮುದ್ದೇಬಿಹಾಳ: ಭಾರತೀಯ ನೌಕಾಪಡೆಯಲ್ಲಿ 15 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿರುವ ಜಟ್ಟಗಿ ತಾಂಡಾದ ಯೋಧ ಸತೀಶ ಆರ್.ನಾಯಕ ಇವರನ್ನು ಮುದ್ದೇಬಿಹಾಳ ಪಟ್ಟಣದಲ್ಲಿ ಫೆ.19ರಂದು ಮದ್ಯಾಹ್ನ 3-30 ಘಂಟೆಗೆ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಿಕೊಳ್ಳಲಾಗುತ್ತದೆ. ನಂತರ ಸಂಜೆ 4 ಘಂಟೆಗೆ ಹಳೇ ತಹಶೀಲ್ದಾರ್ ಕಚೇರಿ ಹತ್ತಿರ ಇರುವ ಕಾರ್ಗಿಲ್ ವೀರ ಯೋಧರ ಸ್ಮಾರಕದಲ್ಲಿ ನಾಗರಿಕ ಸನ್ಮಾನ ಸಮಾರಂಭ ನಡೆಸಲಾಗುತ್ತದೆ. ಮೆರವಣಿಗೆಯು ಬಜಾರ್ ಹನುಮಾನ ದೇವಸ್ಥಾನದಿಂದ ಶಿವಾಜಿ, ಬಸವೇಶ್ವರ ವೃತ್ತ ಮಾರ್ಗವಾಗಿ ಸಮಾರಂಭ ಸ್ಥಳದವರೆಗೆ ನಡೆಯುತ್ತದೆ. ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿ ಹಾಗೂ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ದಿ ಸಂಘದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.-
ಗುರುವಾರ ಮುದ್ದೇಬಿಹಾಳ ಪಟ್ಟಣದಲ್ಲಿ ಭಾರತೀಯ ನೌಕಾಪಡೆಯ ಯೋಧನ ಮೆರವಣಿಗೆ
RELATED ARTICLES

