Tuesday, February 17, 2026
Homeನಿಮ್ಮ ಜಿಲ್ಲೆಕ್ರಮ ತೆಗೆದುಕೊಳ್ಳಲಿ ನಾನು ಬೆಂಬಲಿಸುವುದಿಲ್ಲ; ಕಾಂಗ್ರೆಸ್‌ ಶಾಸಕರ ಮೇಲೆ ಇಡಿ ದಾಳಿ ಬಗ್ಗೆ ಸಿದ್ದು ಶಾಕಿಂಗ್‌...

ಕ್ರಮ ತೆಗೆದುಕೊಳ್ಳಲಿ ನಾನು ಬೆಂಬಲಿಸುವುದಿಲ್ಲ; ಕಾಂಗ್ರೆಸ್‌ ಶಾಸಕರ ಮೇಲೆ ಇಡಿ ದಾಳಿ ಬಗ್ಗೆ ಸಿದ್ದು ಶಾಕಿಂಗ್‌ ರಿಯಾಕ್ಷನ್‌

ಚಿಕ್ಕಬಳ್ಳಾಪುರ: ಇಂದು ( ಜೂನ್‌ 11 ) ಬೆಳ್ಳಂಬೆಳಗ್ಗೆಯೇ ಇಡಿ ಅಧಿಕಾರಿಗಳು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ 8 ಕಡೆ ದಾಳಿ ನಡೆಸಿದ್ದು, ಸಂಸದ ಇ. ತುಕಾರಾಂ ಸೇರಿದಂತೆ ನಾಲ್ವರು ಶಾಸಕರ ಮನೆಯಲ್ಲೂ ಪರಿಶೀಲನೆ ನಡೆಸಿದ್ದಾರೆ.

ಬಳ್ಳಾರಿಯ ಐದು ಕಡೆ ಹಾಗೂ ಬೆಂಗಳೂರಿನ ಮೂರು ಕಡೆ ಸೇರಿದಂತೆ ರಾಜ್ಯದ ಒಟ್ಟು 8 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಚುನಾವಣೆ ಸಮಯದಲ್ಲಿ ನಿಗಮದ ಹಣ ದುರ್ಬಳಕೆಯಾಗಿರುವುದರ ಕುರಿತು ಪರಿಶೀಲನೆ ಮಾಡಲಾಗುತ್ತಿದೆ.

ಸಂಡೂರಿನಲ್ಲಿರುವ ಸಂಸದ ಇ. ತುಕಾರಾಂ, ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.‌ ಗಣೇಶ್‌, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾ.ರಾ. ಭರತ್‌ ರೆಡ್ಡಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಮತ್ತು ಕೂಡ್ಲಿಗಿ ಶಾಸಕ ಶ್ರೀನಿವಾಸ್‌ ಮನೆ ಮೇಲೆ ದಾಳಿ ನಡೆದಿದೆ.

ಇನ್ನು ತುಕಾರಾಂ ಅವರ ಸಂಡೂರಿನ ಮನೆ ಮೇಲೆ ಏಕಕಾಲಕ್ಕೆ ಹತ್ತು ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಿಂದ 2 ಕಿಲೋಮೀಟರ್‌ ದೂರದಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ.

ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ ಯಾರೇ ಆಗಿದ್ದರೂ ತಪ್ಪು ಮಾಡಿದ್ದರೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಿ, ತಪ್ಪು ನಡೆದಿದ್ದರೆ ನಾನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments