Monday, April 13, 2026
Homeನಿಮ್ಮ ಜಿಲ್ಲೆ"ಕೋಲಿ ನಿಷಾದ ಸಮಾಜಕ್ಕೆ ST ಮೀಸಲಾತಿ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡಿ: ಅಮರೇಶಣ್ಣ ಕಾಮನಕೇರಿ ಆಗ್ರಹ"

“ಕೋಲಿ ನಿಷಾದ ಸಮಾಜಕ್ಕೆ ST ಮೀಸಲಾತಿ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡಿ: ಅಮರೇಶಣ್ಣ ಕಾಮನಕೇರಿ ಆಗ್ರಹ”

ಬೆಂಗಳೂರು: ದೇಶಾದ್ಯಂತ ವ್ಯಾಪಿಸಿರುವ ಹಾಗೂ ಕರ್ನಾಟಕದಲ್ಲಿ ಸುದೀರ್ಘ ಕಾಲದಿಂದ ಎಸ್‌ಟಿ (ST) ಮೀಸಲಾತಿಗಾಗಿ ಹೋರಾಡುತ್ತಿರುವ ಕೋಲಿ ನಿಷಾದ ಸಮಾಜದ ಯುವ ನಾಯಕರಿಗೆ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಆದ್ಯತೆ ನೀಡಬೇಕು ಎಂದು ಅಖಿಲ ಭಾರತೀಯ ಕೋಲಿ ನಿಷಾದ ಸಮಾಜ ಏಕತಾ ಪರಿಷತ್ತಿನ ಅಧ್ಯಕ್ಷರಾದ ಅಮರೇಶಣ್ಣ ಕಾಮನಕೇರಿ ಅವರು ಒತ್ತಾಯಿಸಿದ್ದಾರೆ.

ದೇಶಾದ್ಯಂತ ವಿಸ್ತರಿಸಿರುವ ಸಮುದಾಯ:
ಈ ಕುರಿತು ಮಾತನಾಡಿದ ಅವರು, “ಕೋಲಿ ನಿಷಾದ ಸಮಾಜವು ದೇಶದಾದ್ಯಂತ ಅಸ್ತಿತ್ವದಲ್ಲಿದೆ. ಪ್ರಸ್ತುತ ಈ ಸಮುದಾಯವು ವಿವಿಧ ರಾಜ್ಯಗಳಲ್ಲಿ ಎಸ್‌ಸಿ (SC), ಎಸ್‌ಟಿ (ST) ಮತ್ತು ಒಬಿಸಿ (OBC) ಎಂಬ ಮೂರು ವರ್ಗಗಳಲ್ಲಿ ಹಂಚಿಹೋಗಿದೆ. ಕರ್ನಾಟಕ ರಾಜ್ಯದಲ್ಲಿ ಸಮುದಾಯವನ್ನು ಎಸ್‌ಟಿ (ಪರಿಶಿಷ್ಟ ಪಂಗಡ) ಪಟ್ಟಿಗೆ ಸೇರಿಸಬೇಕೆಂಬ ದಶಕಗಳ ಕಾಲದ ನ್ಯಾಯಯುತ ಬೇಡಿಕೆ ಇನ್ನೂ ಈಡೇರಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುವ ನಾಯಕತ್ವದ ಅನಿವಾರ್ಯತೆ:
“ನಮ್ಮ ಈ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಪ್ರಬಲವಾಗಿ ಮಂಡಿಸಲು ಮತ್ತು ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಲು ಸಮಾಜದ ಸಕ್ರಿಯ ಯುವ ನಾಯಕರ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ, ಜೂನ್ 2026ರಲ್ಲಿ ನಡೆಯಲಿರುವ 12 ವಿಧಾನ ಪರಿಷತ್ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಕೋಲಿ ಬೆಸ್ತ ಸಮಾಜದ ಯುವ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಇದರಿಂದ ಮಾತ್ರ ಸಮುದಾಯದ ರಾಜಕೀಯ ಸ್ಥಿತಿ ಸುಧಾರಿಸಲು ಸಾಧ್ಯ” ಎಂದು ಅವರು ಪ್ರತಿಪಾದಿಸಿದರು.

ಚಿಂತಕರ ಛಾವಡಿ ಮೌಲ್ಯ ಕಾಪಾಡಿ:
ವಿಧಾನ ಪರಿಷತ್ತು ‘ಚಿಂತಕರ ಛಾವಡಿ’ಯಾಗುವ ಬದಲು ಸಮಾಜಘಾತಕ ಶಕ್ತಿಗಳ ತಾಣವಾಗುತ್ತಿರುವುದು ವಿಷಾದನೀಯ. ಅತ್ಯಂತ ಹಿಂದುಳಿದ ಜಾತಿಗಳ ಸಹಭಾಗಿತ್ವ ಕಡಿಮೆಯಾಗಿರುವುದರಿಂದ ಸಮಸಮಾಜದ ನಿರ್ಮಾಣ ಮರೀಚಿಕೆಯಾಗಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಈ ಬಾರಿ ಕೋಲಿ ಬೆಸ್ತ ಸಮಾಜದ ಯುವಕರಿಗೆ ಅವಕಾಶ ನೀಡುವ ಮೂಲಕ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ತಮ್ಮ ಬದ್ಧತೆ ಮೆರೆಯಬೇಕು ಎಂದು ಅಮರೇಶಣ್ಣ ಕಾಮನಕೇರಿ ಅವರು ಈ ಮೂಲಕ ಒತ್ತಾಯಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments