Tuesday, February 17, 2026
HomeUncategorizedಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವರಾಜ ಕೆಂಭಾವಿ ಅವರಿಗೆ ವಿನೂತನ ಲೇಖನಿ ನೀಡಿ ಸನ್ಮಾನ

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವರಾಜ ಕೆಂಭಾವಿ ಅವರಿಗೆ ವಿನೂತನ ಲೇಖನಿ ನೀಡಿ ಸನ್ಮಾನ

ಲಿಂಗಸುಗೂರು:
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವರಾಜ ಕೆಂಭಾವಿ ಅವರನ್ನು ರಾಯಚೂರು ಸಂಜೆ ಪತ್ರಕರ್ತರಾದ ಬಸಲಿಂಗಪ್ಪ ಭಜಂತ್ರಿ ಅವರು ವಿನೂತನ ರೀತಿಯಲ್ಲಿ ಲೇಖನಿ ನೀಡುವ ಮೂಲಕ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸಲಿಂಗಪ್ಪ ಭಜಂತ್ರಿ ಅವರು, ಪತ್ರಕರ್ತರ ಲೇಖನಿ ಸಮಾಜದ ಧ್ವನಿಯಾಗಿದ್ದು, ಸತ್ಯ, ನ್ಯಾಯ ಹಾಗೂ ಜನಪರ ವಿಚಾರಗಳನ್ನು ಹೊರತರುವ ಶಕ್ತಿ ಇದಕ್ಕಿದೆ. ಅಂತಹ ಪವಿತ್ರ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ಶಿವರಾಜ ಕೆಂಭಾವಿ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವರಾಜ ಕೆಂಭಾವಿ ಅವರು, ಈ ಗೌರವ ತಮ್ಮ ಪತ್ರಿಕೋದ್ಯಮದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲೂ ನಿಸ್ಪಕ್ಷಪಾತ, ಜನಪರ ಹಾಗೂ ಸತ್ಯನಿಷ್ಠ ಪತ್ರಿಕೋದ್ಯಮಕ್ಕೆ ಬದ್ಧವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments