Monday, April 13, 2026
HomeUncategorizedಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಮಾ.8ರಂದು ಬೆಳಿಗ್ಗೆ ಮಹಿಳೆಯರಿಂದ ಸಾಮೂಹಿಕ ನಡಿಗೆ-ಶೋಭಾ ನಾಗಠಾಣ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಮಾ.8ರಂದು ಬೆಳಿಗ್ಗೆ ಮಹಿಳೆಯರಿಂದ ಸಾಮೂಹಿಕ ನಡಿಗೆ-ಶೋಭಾ ನಾಗಠಾಣ

ಮುದ್ದೇಬಿಹಾಳ: ಮಾ.8ರಂದು ಬೆಳಿಗ್ಗೆ 5-30 ಘಂಟೆಯಿಂದ 6 ಘಂಟೆಯೊಳಗೆ ಮುದ್ದೇಬಿಹಾಳದ ಹುಡ್ಕೋ ಪ್ರವೇಶ ದ್ವಾರದ ಹತ್ತಿರ ಇರುವ ರಾಣಿ ಚನ್ನಮ್ಮ ವೃತ್ತದಿಂದ ಹುಡ್ಕೋ ಕೊನೇಭಾಗದಲ್ಲಿರುವ ಪ್ರಾರ್ಥನಾ ಶಾಲೆಯವರೆಗೆ ಮಹಿಳೆಯರ ಸಾಮೂಹಿಕ ನಡಿಗೆ, ವಾಯುವಿಹಾರ ಆಯೋಜಿಸಲಾಗಿದೆ ಎಂದು ಮುದ್ದೇಬಿಹಾಳ ಬಣಜಿಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಉಮೇಶ ನಾಗಠಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸಾಮೂಹಿಕವಾಗಿ ಒಂದೆಡೆ ಸೇರಿ ಎಲ್ಲರೂ ಒಟ್ಟಾಗಿ ನಡಿಗೆ ಮೂಲಕ ಅಂದಾಜು ಒಂದೂವರೆ ಕಿಮಿವರೆಗೂ ತೆರಳುವ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಲು ಈ ವಿಶೇಷ ಯೋಜನೆ ಹಾಕಿಕೊಳ್ಳಲಾಗಿದೆ. ನಡಿಗೆ ಮುಕ್ತಾಯದ ನಂತರ ಪ್ರಾರ್ಥನಾ ಶಾಲೆಯಲ್ಲಿ ಮಹಿಳಾ ದಿನಾಚರಣೆ ಮಹತ್ವದ ಕುರಿತು ವಿಶೇಷ ಕಾರ್ಯಕ್ರಮ ಜರುಗಲಿದೆ. ಅವರಿವರೆನ್ನದೆ ಎಲ್ಲ ವಯೋಮಾನದ ಮಹಿಳೆಯರು ಸಾಮೂಹಿಕ ನಡಿಗೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ವರದಿ: ಮುತ್ತು ವಡವಡಗಿ-ಮೋ:9880143505

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments